December 22, 2024

Bhavana Tv

Its Your Channel

ಛತ್ತೀಸ್‌ಗಡದ ಸೇನಾ ಕ್ಯಾಂಪಿನಲ್ಲಿ ತಾವೇ ಗುಂಡುಹಾರಿಸಿ ಕೊಂಡು ಮೃತನಾದ ಬಿಎಸ್‌ಎಫ್ ಯೋಧ

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಗಜನೂರು ಗ್ರಾಮದ ಬಿಎಸ್‌ಎಫ್ ಯೋಧ ಲಕ್ಷ್ಮಣ್ ನಿಂಗಪ್ಪ ಗೌರನ್ನವರ್(೩೧) ಇವರು ಛತ್ತೀಸ್ ಗಡದ ಸೇನಾ ಕ್ಯಾಂಪಿನಲ್ಲಿ ತಾವೇ ಗುಂಡುಹಾರಿಸಿ ಕೊಂಡಿದ್ದಾರೆ ಎಂದು ಸೇನಾ ಮೂಲಗಳು ಫೋನ್ ಮೂಲಕ ಮೃತ ಕುಟುಂಬಕ್ಕೆ ತಿಳಿಸಿರುತ್ತಾರೆ.
ಕಳೆದ ಎರಡು ತಿಂಗಳ ಹಿಂದೆ ರಜೆ ಬಂದು ಜುಲೈ ಎಂಟನೇ ತಾರೀಕಿಗೆ ಸೇನೆಗೆ ಮರಳಿ ಸೇವೆ ಸಲ್ಲಿಸಲು ತೆರಳಿದ್ದಾರೆ ಎಂದು ಅವರ ತಂದೆ ನಿಂಗಪ್ಪ ತಿಳಿಸಿರುತ್ತಾರೆ
ಮಗನ ಸಾವಿನ ಸುದ್ದಿ ಕೇಳಿ ತಂದೆ-ತಾಯಿ ಯೋಧನ ಪತ್ನಿ ಅವರ ಆಕ್ರಂದನ ಮುಗಿಲು ಮುಟ್ಟಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಸೇನಾಧಿಕಾರಿಗಳು ಗಜನೂರು ಗ್ರಾಮಕ್ಕೆ ಬುಧುವಾರ ಪಾರ್ಥಿವ ಶರೀರ ತರಲಾಗುವುದು ಎಂದು ಮೃತ ಕುಟುಂಬಕ್ಕೆ ತಿಳಿಸಿದ್ದರು. ಆದರೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಅಧಿಕಾರಿಗಳಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಬಂದಿರುವುದಿಲ್ಲ.
ಸೇನಾಧಿಕಾರಿಗಳು ನೇರವಾಗಿ ಮೃತ ಕುಟುಂಬಕ್ಕೆ ಫೋನ್ ಮೂಲಕ ತಿಳಿಸಿರುತ್ತಾರೆ. ಮೃತ ಯೋಧನಿಗೆ ಎರಡು ಹೆಣ್ಣು ಮಕ್ಕಳು ಒಂದು ಗಂಡು ಮಗು ಇದೆ

ವರದಿ : ವೀರಣ್ಣ ರೋಣ

error: