December 22, 2024

Bhavana Tv

Its Your Channel

ಡಾ.ಪಂ.ಪುಟ್ಟರಾಜ ಸಾಹಿತ್ಯೋತ್ಸವ ೨೦೨೧, ಸಾಹಿತ್ಯ ಸಂಗೀತ ಮತ್ತು ಅಭಿಮಾನಿ ಭಕ್ತರ ಬೃಹತ್ ಸಮಾವೇಶ.

ಗದಗ:- ಕವಿ ಕಲಾವಿದ ಆಧುನಿಕ ವಚನಕಾರರಿಂದ ಮತ್ತು ಸಾಧಕ ಶ್ರೇಷ್ಠ ರಿಂದ ಅರ್ಜಿ ಆಹ್ವಾನ ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವಾದ ಗದುಗಿನ ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯು ೨೬ ಸೆಪ್ಟೆಂಬರ ೨೦೨೧ರಂದು ಬೀದರ ನಗರದ ಜಿಲ್ಲಾ ರಂಗಮAದಿರದಲ್ಲಿ ಡಾ. ಪಂ.ಪುಟ್ಟರಾಜ ಸಾಹಿತ್ಯೋತ್ಸವ ೨೦೨೧ ಸಾಹಿತ್ಯ-ಸಂಗೀತ ಮತ್ತು ಅಭಿಮಾನಿ ಭಕ್ತರ ಸಮಾವೇಶ ಹಮ್ಮಿಕೊಂಡಿದೆ. ಈ ಉತ್ಸವದಲ್ಲಿ ಗುರು ಗುಣ ಗಾನ, ಗುರು ವಚನ ಪ್ರಭಾ ಮತ್ತು ಗಾನ ಸುಧಾ ಸಂಗೀತ ಸಾಹಿತ್ಯ ಮತ್ತು ವಚನ ಗೋಷ್ಠಿ ಗಳನ್ನು ಆಯೋಜಿಸಲಾಗಿದೆ. ಈ ಗೋಷ್ಠಿಗಳಲ್ಲಿ ಆಸಕ್ತಿಯಿರುವ ಕವಿಗಳು ಆಧುನಿಕ ವಚನಕಾರರು ಮತ್ತು ಸಂಗೀತ ಕಲಾವಿದರು ಹೆಸರು ನೋಂದಾಯಿಸಿಕೊಳ್ಳಲು ವಿನಂತಿಸಿಕೊಳ್ಳುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಪುಟ್ಟರಾಜ ಸಾಹಿತ್ಯ ಪುರಸ್ಕಾರ. ಪುಸ್ತಕ ಪರಿಸ್ಥಿತಿ ಪ್ರಧಾನ ಗುರುಕೃಪಾ ಶ್ರೀ ಮತ್ತು ಗುರು ವಚನ ಪ್ರಭು ಹಾಗೂ ಪುಟ್ಟರಾಜ ಕೃಪಾ ಭೂಷಣ ಗೌರವ ಪರಿಸ್ಥಿತಿ ಪ್ರಧಾನ ಮಾಡಲಾಗುತ್ತಿದೆ ಕಾರಣ ವಿವಿಧ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ಗಣ್ಯರು ಪೂಜ್ಯರು ಅಭಿಮಾನಿ ಭಕ್ತರು ತಮ್ಮ ಸಾಧನೆಯ ವಿವರಗಳೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೧೫/ ೯ /೨೦೨೦೧ ಆಗಿರುತ್ತದೆ.
ಪ್ರತಿನಿಧಿಯಾಗಿ ಭಾಗವಹಿಸುವ ಕುರಿತು. ಉತ್ಸವದಲ್ಲಿ ಪೂಜ್ಯರ ಅಭಿಮಾನಿ ಭಕ್ತರು ಶಿಷ್ಯ ಪ್ರಶಿಷ್ಯರು ಪ್ರತಿನಿಧಿಯಾಗಿ ಭಾಗವಹಿಸಲು ಅವಕಾಶವಿದೆ ಪ್ರತಿನಿಧಿಗಳಿಗೆ ೩೦೦ ರೂಗಳು ಪ್ರತಿನಿಧಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಕೆಳಗೆ ನೀಡಲಾದ ಬ್ಯಾಂಕ್ ಖಾತೆಗೆ ಶುಲ್ಕವನ್ನು ಕಳುಹಿಸಿಕೊಟ್ಟು ತಮ್ಮ ಹೆಸರನ್ನು ನೊಂದಾಯಿಸಿ ಕೊಂಡವರಿಗೆ ಸುಮಾರು ೩೦೦ ರೂ ಗಳ ಮುಖಬೆಲೆಯ ಪುಸ್ತಕ, ಕನ್ನಡ ಶಾಲು ಬ್ಯಾಡ್ಜ್ ಮತ್ತು ಅಭಿನಂದನಾ ಪತ್ರ ನೀಡಲಾಗುವುದು, ಸಮ್ಮೇಳನ ದಿನದಂದು ಬೆಳಗಿನ ಉಪಹಾರ , ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಗಾಯಕರು ಮತ್ತು ವಚನಕಾರರು ಇದ್ದರೆ ಆಯ್ದ ಕೆಲವರನ್ನು ವಚನ ಗಾಯನಕ್ಕೆ ಮತ್ತು ವಚನಗಳಿಗೆ ಅವಕಾಶ ನೀಡಲಾಗುವುದು.ಪ್ರತಿನಿಧಿ ಶುಲ್ಕ ಕಳಿಸುವ ಬ್ಯಾಂಕ ಖಾತೆ ವಿವರ ಡಾ. ಪಂ.ಪುಟ್ಟರಾಜ ಸೇವಾ ಸಮಿತಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಹಟಗೇರಿ ರಸ್ತೆ ಗದಗ ೫೮೨೧೦೧. ಖಾತೆ ಸಂಖ್ಯೆ ೮೯೧೨೬೭೯೮೩೨೪ ಐಎಫ್‌ಎಸ್‌ಸಿ ಕೋಡ್ ಕೆವಿಜಿಬಿ೦೦೦೬೦೧೧ .ವಿಶೇಷ ಸೂಚನೆ :-ಡಾ. ಪುಟ್ಟರಾಜ ಸೇವಾ ಸಮಿತಿಯ ಸದ್ಯಸರಿಗೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆಯಲ್ಲಿ ಎಂ ಜಿ ಶಶಿಕಲಾ ಮೂರ್ತಿ ನಲ್ಕುದುರೆ ಸಂಚಾಲಕರು ತಿಳಿಸಿದ್ದಾರೆ.

error: