ರೋಣ: ಪುರಸಭೆ ಕಾರ್ಯಾಲಯ ರೋಣ ದಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಪಾಧ್ಯಕ್ಷರಾದ ಮಿಥುನ ಜಿ ಪಾಟೀಲ್ರವರು ಪೌರಕಾರ್ಮಿಕರ ಕೆಲಸದ ಬಗ್ಗೆ ಇವತ್ತಿನ ದಿವಸ ಅವರ ಕಾರ್ಯವೈಖರಿ ಬಗ್ಗೆ ಹೇಳಲು ನನಗೆ ಸಂತೋಷ ಎನಿಸುತ್ತದೆ . ಪ್ರತಿ ದಿವಸ ನಗರವನ್ನು ಸ್ವಚ್ಛ ಮಾಡುವುದು ಪಟ್ಟಣದ ಎಲ್ಲ ಪರಿಸರ ಬಗ್ಗೆ ಅರಿವು ಮೂಡಿಸುವುದು ಅದು ಸಾಧನೆ ಆಗಿದ್ದು ಪೌರಕಾರ್ಮಿಕರಿಂದ ಎಂದು ಹೇಳಲಿಕ್ಕೆ ನನಗೆ ಸಂತೋಷವೆನಿಸುತ್ತದೆ ಎಂದು ಅವರು ಹೇಳಿದರು.
ಅದೇ ರೀತಿ ಸಂಗಪ್ಪ ಜಿಡ್ಡಿ ಬಾಗಿಲು ಮಾತನಾಡಿ ಪೌರಕಾರ್ಮಿಕರ ಬಗ್ಗೆ ಹೆಚ್ಚಿನ ಒತ್ತುಕೊಟ್ಟು ಅವರು ಹೊರ ಗುತ್ತಿಗೆದಾರರಿಂದ ಅವರಿಗೆ ಖಾಯಂಗೊಳಿಸಲು ಪುರಸಭೆ ಎಲ್ಲಾ ಸದಸ್ಯರು ಬೆನ್ನೆಲುಬಾಗಿ ಇರುತ್ತೇವೆ ಎಂದು ಸಂಗಪ್ಪ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು
ಅದೇ ರೀತಿ ಪೌರಕಾರ್ಮಿಕ ಸಂಘದ ಅಧ್ಯಕ್ಷರಾದ ಹನುಮಂತಪ್ಪ ಹಾದಿಮನಿ ನಮ್ಮ ಪೌರಾಡಳಿತ ಎಲ್ಲಾ ಸಿಬ್ಬಂದಿಗಳು ನಮಗೆ ಯಾವುದೇ ಕೊರತೆ ಮಾಡಿಲ್ಲ ಮುಂದೆ ಸಹ ಯಾವುದೇ ತೊಂದರೆ ಆಗದಂತೆ ನೋಡಿಕೊಂಡು ಹೋಗುತ್ತಾರೆ ಎಂದು ಅವರು ಹೇಳಿದರು
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಂತ ವಿದ್ಯಾ. ದೊಡ್ಡಮನಿ ಮಾತನಾಡಿ ಪೌರಕಾರ್ಮಿಕರ ಇವತ್ತಿನ ದಿವಸ ಹತ್ತನೇ ವರ್ಷದ ಈ ಕಾರ್ಯಾಗಾರವನ್ನು ಮಾಡುವುದರ ಮೂಲಕ ಕಾರ್ಮಿಕರಿಗೆ ಶುಭಾಶಯಗಳನ್ನು ಹೇಳಿದರು ಮತ್ತು ಎಲ್ಲಾ ಪೌರಕಾರ್ಮಿಕರಿಗೆ ಸನ್ಮಾನ ಮಾಡುವುದರ ಮೂಲಕ ಅವರನ್ನು ಸಂತೋಷ ಗೊಳಿಸಿದರು
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರು. ಹಾಗೂ ಉಪಾಧ್ಯಕ್ಷರು.ಪುರಸಭೆಯ ಸದಸ್ಯರಾದ ಸಂತೋಷ ಕಡಿವಾಲ. ಸಂಗಪ್ಪ ಜಿಡ್ಡಿ ಬಾಗಿಲ. ರೇಣುಕಾ ರಂಗನಗೌಡ. ಗದಿಗೆಪ್ಪ ಕಿರೇಸೂರ. ಬಾವಾಸಾಬ ಬೆಟಿಗೇರಿ. ಶಕುಂತಲಾ ಚಿತ್ರಗಾರ. ಪುರಸಭೆಯ ಸರ್ವಸದಸ್ಯರು. ಹಾಗೂ ಪೌರಕಾರ್ಮಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ