December 22, 2024

Bhavana Tv

Its Your Channel

ಜಲಜೀವನ್ ಮಿಷನ್ ಯೋಜನೆಗೆ ಚಾಲನೆ

ರೋಣ:ತಾಲ್ಲೂಕಿನ ಬೊಪಳಾಪುರ ಗ್ರಾಮದಲ್ಲಿ ಅಂದಾಜು ರೂ. ೩೪.೭೫ ಲಕ್ಷದ ಹಾಗೂ ಮೆಲ್ಮಠ ಗ್ರಾಮದಲ್ಲಿ ಅಂದಾಜು ರೂ. ೧೮.೦೨ಲಕ್ಷದ ಕುಡಿಯುವ ನೀರಿನ ನಳ ಜೋಡಣೆ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಹೊಳೆಆಲೂರು ಬಿಜೆಪಿ ಮಂಡಲದ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ ಮಾತನಾಡಿ, ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಯೋಜನೆಯನ್ನು ಗ್ರಾಮೀಣ ಭಾಗದಲ್ಲಿ ಯಶಸ್ವಿಯಾಗಿ ಅಳವಡಿಸುವಲ್ಲಿ ಸಚಿವರಾದ ಸಿ. ಸಿ. ಪಾಟೀಲ ಅವರು ನಿರಂತರ ಶ್ರಮ ವಹಿಸುತ್ತಿದ್ದಾರೆ ಎಂದರು. ಇದರಿಂದ ಹಳ್ಳಿ ಜನರ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಹಾಗೂ ಮಹಿಳೆಯುರು ಕೊಡ ಹೊತ್ತು ಮೈಲುಗಟ್ಟಲೆ ನಡೆಯುವ ತಾಪತ್ರಯ ತಪ್ಪಲಿದೆ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿ ಸಾಲಿಮಠ, ತಿಪ್ಪಣ್ಣ ನೀಲಗುಂದ, ಕೆ. ಸಿ. ಪಾಟೀಲ, ಶಂಭು ಗೌಡ ಪಾಟೀಲ, ಅಶೋಕ ಹೆಬ್ಬಳ್ಳಿ, ಶರಣಗೌಡ ಪಾಟೀಲ, ಚೇತನ ಪಾಟೀಲ, ರಾಮನಗೌಡ ಪಾಟೀಲ, ಶಿವಕುಮಾರ ನೀಲಗುಂದ, ಶ್ರೀಕಾಂತ, ಮುತ್ತನಗೌಡ ಫಕೀರಗೌಡ, ಪ್ರಕಾಶಗೌಡ ತಿರುಕನಗೌಡ್ರು ನಿರ್ಮಲ ನಾಯಕರ ಇದ್ದರು.

ವರದಿ ವೀರಣ್ಣ ಸಂಗಳದ ರೋಣ

error: