December 21, 2024

Bhavana Tv

Its Your Channel

ಜಕ್ಕಲಿಯಲ್ಲಿ ಡಾ.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ

ರೇಗಲ್ಲ:ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಡಿ, ೬ ರಂದು ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ ಅವರ ೬೫ನೇ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.
ಅಖಿಲ ಭಾರತ ದಂಡೋರ ಸಮಿತಿಯ ಗುರು ಹಿರಿಯರು ಮತ್ತು ಅಭಿಮಾನಿ ಬಳಗದ ಯುವಕರು ಮತ್ತು ಮಹಿಳೆಯರು ಸೇರಿದಂತೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೌನ ಆಚರಿಸಿ ಕ್ಯಾಂಡಲ್ ಹಚ್ಚುವುದರ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಯಲ್ಲಪ್ಪ ಮಾದರ, ಕಲ್ಲಪ್ಪ ಮಾದರ, ದ್ಯಾಮಣ್ಣ ಮಾದರ, ಅಯ್ಯಪ್ಪ ಮಾದರ, ಅಂದಪ್ಪ ಮಾದರ, ರೇವಪ್ಪ ಮಾದರ ಮಹಿಳೆಯರಾದ ಮಲ್ಲವ್ವ ಮಾದರ, ಅನಸವ್ವ ಮಾದರ, ಮದಗಮ್ಮ ಮಾದರ, ಲಕ್ಷ್ಮವ್ವ ಮಾದರ ಯುವಕರಾದ ಅಂದಪ್ಪ ಮಾದರ, ಮಲ್ಲಪ್ಪ ಮಾದರ, ಪ್ರಶಾಂತ್ ಮಾದರ, ಪ್ರಕಾಶ ಮಾದರ, ನಾಗರಾಜ ಮಾದರ, ಮಲ್ಲೇಶ ಮಾದರ, ಮುತ್ತಪ್ಪ ಮಾದರ, ಮುದಿಯಪ್ಪ ಮಾದರ, ಹೇಮಂತ ಮಾದರ ಇನ್ನು ಅನೇಕರು ಇದ್ದರು.

ವರದಿ ವೀರಣ್ಣ ಸಂಗಳದ.

error: