ರೋಣ: ಜಿಲ್ಲಾ ಪಂಚಾಯತ, ಗದಗ ತಾಲೂಕ್ ಪಂಚಾಯತ, ರೋಣ ಕೃಷಿ ಇಲಾಖೆ ಇವರ ನೇತೃತ್ವದಲ್ಲಿ ರೈತ ದಿನಾಚರಣೆಯನ್ನು ಬೆಳವಣಿಕೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನೆರೆವೇರಿಸಲಾಯಿತು.
ರೈತಗೀತೆ ಹಾಡುವ ಮೂಲಕ ಕಾರ್ಯಕ್ರಮವನ್ನು ನೆರೆವೇರಿಸಲಾಯಿತು ಪ್ರಾಸ್ತವಿಕವಾಗಿ ರೋಣ ತಾಲೂಕ ಕೃಷಿ ನಿರ್ದೆಶಕರಾದ ರವೀಂದ್ರ ಗೌಡ ಪಾಟೀಲ ಮಾತನಾಡಿ ಜೈಜಾವಣ್ ಜೈಕಿಸಾನ್ ಉತ್ತಮ ಕೃಷಿ ಉನ್ನತ ರೈತ ಎಂಬ ವಿಷಯವಾಗಿ ಮಾತನಾಡಿ ನಮ್ಮ ರೈತರು ಮಳೆ ನೀರನ್ನು ತಡೆದು ಜಮೀನಿನಲ್ಲಿ ಇಂಗುವoತೆ ಮಾಡುವದರಿಂದ ಅಂತರಜಲ ಹೆಚ್ಚಿಸುವುದು ಜಮೀನಿನಲ್ಲಿ ತೆವ ಅಂಶ ಅಧಿಕವಾಗುವುದು ಬದುಗಳ ಮೇಲೆ ಅವಶ್ಯಕತೆ ಪೊರೈಸುವ ಸೂಕ್ತವಾದ ಸಸಿ ಗಳನ್ನುನ ಹಸಿರು ಮೇವನ್ನು ಕಾಯಿ ಪಲ್ಯ ಬೀಜಗಳನ್ನು ಬಿತ್ತನೆ ಮಾಡುವುದು.
ಕೃಷಿ ಹೊಂಡಾ ಮಣ್ಣಿನ ಪರೀಕ್ಷೆ ಮತ್ತು ಉತ್ತಮ ಬೆಳೆ ಪಡೆಯಲು ಎಲ್ಲಾ ರೈತರು ಮುಂದಾಗಬೇಕು.ಇಲಾಖೆ ಸೌಲಭ್ಯ ಪಡೆದುಕೊಂಡು ಹೊಸ ಕೃಷಿ ಬೇಸಾಯ ಮುಂದಾಗಿ ಎಂದರು.
ಅದೇ ರೀತಿ ರೈತರ ದಿನಾಚರಣೆಯ ಶುಭಾಷಯಗಳು ತಿಳಿಸಿದರು ಕೃಷಿ ವಿಜ್ಞಾನ ಕೇಂದ್ರದವರು ತೋಟಗಾರಿಕೆ ಇಲಾಖೆ ಬೀಜ ನಿಗಮದ ಅಧಿಕಾರಿಗಳು ಗ್ರಾಮ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ರವೀಂದ್ರ ಪಾಟೀಲ, ವಿ ಎಸ ಶಾಂತಗೇರಿ, ಸೋಮು ಚೇರದ, ಶಿವನಪ್ಪ ಅರಹುನುಸಿ, ಮುತ್ತುನ ಗೌಡ, ಚೌಡರೆಡ್ಡಿ ವೀರಣ್ಣ, ಮುತ್ತಪ್ಪ ಕುರಿ, ಮುತ್ತಣ್ಣ ಪರಡ್ಡಿ, ಬೆನಹಾಳ, ಸುಜಾತ ಶರಣಪ್ಪ ಹಡ್ಲಿ, ಬಸವರಾಜ ಸಜ್ಜನ, ಜಂಗಣ್ಣ ವರ, ಹಾಗೂ ಹೊಳೆ ಆಲೂರ ಬೆಳವಣಿಕೆ ವಲಯದ ರೈತರಿಂದ ರೈತರಿಗೆ ಸನ್ಮಾನ ಸಮಾರಂಭ ನೆರೆವೇರಿಸಿದರು
ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ