May 12, 2024

Bhavana Tv

Its Your Channel

ರೋಣ ಪರಿವೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಟಿ

ರೋಣ ಪರಿವೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಟಿ ಮಾಜಿ ಸಚಿವರು ನರಗುಂದ ಕ್ಷೇತ್ರದ ಬಿ ಆರ್ ಯಾವಗಲ್ ಮತ್ತು ರೋಣ ಮಾಜಿ ಶಾಸಕರು ಜಿ ಎಸ್ ಪಾಟೀಲ್ ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು 2018ರಿಂದ ಅಭಿವೃದ್ಧಿ ವಂಚಿತವಾದ ನರಗುಂದ ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸಗಳನ್ನು ನೀಡಿ ಎಂದು ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆಯ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರು ನರಗುಂದ ಮತಕ್ಷೇತ್ರದ ಶಾಸಕರ ವಿರುದ್ಧ ಬೃಹತ್ ಪಾದಯಾತ್ರೆ ದಿನಾಂಕ 4-01-2022 ರಿಂದ 6-1-2022ರವರೆಗೆ 3ದಿನಗಳ ಪಾದಯಾತ್ರೆ ಮೊದಲನೇ ದಿನ ಹೊಳೆಆಲೂರ ಗಾಡಗೋಳಿ ಹೊಳೆಮಣ್ಣೂರ ಅಸೂಟಿ ಕರಮುಡಿ ಮಾಳವಾಡ ಬೆಳವಣಿಕಿ ವಾಸ್ತುವ, ಎರಡನೆ ದಿನ ಬೆಳವಣಕಿ ಮಲ್ಲಾಪೂರ ಸಂದಿಗವಾಡ ಕುರಡಗಿಡಸ ಹಡಗಲಿ ಗುಜಮಾಗಡಿ ಎರೆಬೇಲೆರಿ, ಮೂರನೇ ದಿನ ಕಿರಿಟಗೇರಿ ಚಿಕ್ಕೊಪ್ಪ ಹಿರೇಕೊಪ್ಪ ನರಸಾಪೂರ ಬೆಟಗೇರಿ ಪಾದಯಾತ್ರೆ ಮಾಡಲಾಗುವುದು ಎಂದು ಹೇಳಿದರು

ಪಾದಯಾತ್ರೆ ನೇತೃತ್ವವನ್ನು ನರಗುಂದ ಮತಕ್ಷೇತ್ರದ ಅಭಿವೃದ್ಧಿ ಹರಿಕಾರರಾದ ಮಾಜಿ ಶಾಸಕರರಾದ ಬಿ ಆರ್ ಯಾವಗಲ್ ಮತ್ತು ಗದಗ ಜಿಲ್ಲಾ ಕಾಂಗ್ರೆಸ್ ಜಿ ಎಸ್ ಪಾಟೀಲ್ ನರಗುಂದ ಬ್ಲಾಕ್ ಕಾಂಗ್ರೆಸ್ ನೇತ್ರತ್ವದಲ್ಲಿ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎಸ್ಸಿ ಘಟಕ, ಎಸ್ ಟಿಪಿ ಘಟಕ, ಕಾರ್ಮಿಕ ಘಟಕದ ಅಲ್ಪಸಂಖ್ಯಾತ ಎನ್ ಎಸ್ ಯುಐ ಹಾಗೂ ಸೋಷಿಯಲ್ ಮೀಡಿಯಾದ ಮತ್ತು ರೋಣ ಯೂತ್ ಕಾಂಗ್ರೆಸ್ ಅಧ್ಯಕ್ಷ ಯಲ್ಲಪ್ಪ ಕಿರೇಸೂರ, ಸಂಗು ನವಲಗುಂದ, ಯಲ್ಲಪ್ಪ ಕೊಪ್ಪದ, ಪ್ರಕಾಶ ಭಜಂತ್ರಿ, ಎಲ್ಲ ಪ್ರಾಧಿಕಾರಗಳ ವತಿಯಿಂದ ಗದಗ ಜಿಲ್ಲಾಧಿಕಾರಿಗಳಿಗೆ ಕಳಪೆ ಕಾಮಗಾರಿ ಮತ್ತು ಅಸಮರ್ಥ ಆಡಳಿತದ ವಿರುದ್ಧ ಪಾದಯಾತ್ರೆ ಮೂಲಕ ತೆರಳಿ ಮಾನ್ಯ ಜಿಲ್ಲಾಧಿಕಾರಿ ಗಳಿಗೆ ಮನವಿ ನೀಡುವುದರ ಮೂಲಕ ಹೋರಾಟವನ್ನು ಕೈಗೊಳ್ಳುತ್ತಿದ್ದೆವೆ..ಈ ಪಾದಯಾತ್ರೆಯಲ್ಲಿ ಎಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದರು

ವರದಿ ವೀರಣ್ಣ ಸಂಗಳದ ರೋಣ

error: