December 22, 2024

Bhavana Tv

Its Your Channel

ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಸಿ ಸಿ ಪಾಟೀಲ

ರೋಣ: ಹೊಳೆ ಆಲೂರು ಗ್ರಾಮದಲ್ಲಿ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವರಾದ ಸಿ ಸಿ ಪಾಟೀಲರು ರಾಜ್ಯ ಹೆದ್ದಾರಿ ಮುನವಳ್ಳಿ ಕೋಟುಮಚಗಿ ರಾಜ್ಯ ಹೆದ್ದಾರಿ 83 ಕೊಣ್ಣೂರ ಶಿರೋಳ ಮೆಣಸಗಿ ಹೊಳೆಆಲೂರ ಬೆನಹಾಳ ಹುನಗುಂಡಿವರಿಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
.
ರೂ 45.5 ರೂ ಕೋಟಿ ವೆಚ್ಚದಲ್ಲಿ 31.5 ಕಿಲೋಮೀಟರ ರಸ್ತೆ ಸುಧಾರಣೆ ಕಾಮಗಾರಿಗೆ ಹಣ ಮಂಜುರಾಗಿದ್ದು ಸಚಿವರು ಇಂದು ಭೂಮಿ ಪೂಜೆ ನೇರವೇರಿಸಿದರು. ನಂತರ ಹೊಳೆಆಲೂರ ಪ್ರಾಥಮಿಕ ಉರ್ದು ಶಾಲೆಯ 2 ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 15 ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಹೊಳೆಆಲೂರ ಪರಮಪೂಜ್ಯ ಶ್ರೀ ಯಚ್ಚರಸ್ವಾಮಿಗಳು, ಹಿರಿಯರಾದ ವಿ.ಎಸ್.ಹಿರೇಮಠ, ನರಗುಂದ ಮತಕ್ಷೇತ್ರದ ಯುವ ಧುರೀಣರಾದ ಉಮೇಶಗೌಡ ಪಾಟೀಲ, ಪಕ್ಷದ ಹಿರಿಯರು, ಮುಖಂಡರು, ಪದಾಧಿಕಾರಿಗಳು, ಯುವಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ:ವೀರಣ್ಣ ಸಂಗಳದ ರೋಣ

error: