May 4, 2024

Bhavana Tv

Its Your Channel

ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವ ಸಿ.ಸಿ.ಪಾಟೀಲ

ರೋಣ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷಿ ಯೋಜನೆಯಾಗಿರುವ ಗ್ರಾಮೀಣ ಭಾಗದ ಜನರಿಗೆ ಮನೆ ಮನೆಗೂ ಶುದ್ದ ನಲ್ಲಿ ನೀರು ಪೂರೈಸುವ ಜಲಜೀವನ ಮಿಷನ್ ಯೋಜನೆಯನ್ನು ಜನಸಾಮಾನ್ಯರು ಸದ್ಭಳಕೆ ಮಾಡಿಕೊಳ್ಳಬೇಕೆಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ ಹೇಳಿದರು.

ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಪ್ರಸಕ್ತ ಸಾಲಿನ ಜಲಜೀವನ ಮೀಷನ್ ಯೋಜನೆಯಡಿ ತಾಲೂಕಿನ ಬೆಳವಣಕಿ ಗ್ರಾಮದಲ್ಲಿ 682 ಮನೆಗಳಿಗೆ ಮನೆ ಮನೆಗೆ ಕುಡಿಯುವ ನೀರಿನ
ಪೈಪಲೈನ್ ಅಳವಡಿಸುವ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದರು.

ಮಲ್ಲಾಪುರ ಗ್ರಾಮದಲ್ಲಿ 165.83 ಲಕ್ಷ ರೂ ಅನುದಾನದಲ್ಲಿ ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಪೈಪಲೈನ್ ಅಳವಡಿಸಿ ನಳ ಜೋಡಣೆ ಕಾಮಗಾರಿ ಕೈಗೊಳ್ಳಗುತ್ತಿದೆ. ಈ ಯೋಜನೆಗಳನ್ನು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಯಶಸ್ವಿಗೊಳಿಸಬೇಕು, ಯೋಜನೆಯ ಒಟ್ಟು ಮೊತ್ತದಲ್ಲಿ ಶೇ.75 ರಷ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರ ಭರಸಲಿದೆ. ಶೇ.15 ರಷ್ಟು ಮೊತ್ತವನ್ನು ಗ್ರಾಮ ಪಂಚಾಯಿತಿ ಯಿಂದ ಹಾಗೂ ಉಳಿದ 10 ರಷ್ಟು ಮೊತ್ತವನ್ನು ಫಲಾನುಭವಿಗಳು ನೀಡುವ ಮೂಲಕ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು ಹಾಗೂ ಗುತ್ತಿಗೆದಾರರು ಗುಣಮಟ್ಟಕ್ಕೆ ಆದ್ಯತೆ ನೀಡಿ ಉತ್ತಮ ರಸ್ತೆ ಹಾಗೂ ಭವನವನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು. ಹಾಗೂ ಗ್ರಾಮ ಸಡಕ್ ಯೋಜನೆಯ, ಹೆದ್ದಾರಿಯಲ್ಲಿ 4 ಕೋಟಿ ರೂ. ಅನುದಾನದಲ್ಲಿ 5.5. ಕಿ.ಮೀ. ಆಯ್ದ ಭಾಗಗಳಲ್ಲಿನ ರಸ್ತೆ ಸುಧಾರಣೆಗೆ ಭೂಮಿ ಪೂಜೆ ಸಲ್ಲಿಸಿದರು, ಮತ್ತು 5 ಲಕ್ಷ ಬೀರೇಶ್ವರ ಸಮುದಾಯ ಭವನ ಮತ್ತು 11 ಲಕ್ಷ ರೂ ಶಾಲಾ ಕೊಠಡಿಯ ಭೂಮಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವೀರಯ್ಯ ಹಿರೇಮಠ, ಮುತ್ತಣ್ಣ ಜಂಗಣ್ಣವರ, ಶಶಿಧರಗೌಡ ಪಾಟೀಲ, ರಾಮನಗೌಡ ಪಾಟೀಲ, ಶರಣು ಚಲವಾದಿ, ಶರಣು ಭರಶೆಟ್ಟಿ, ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಇನ್ನೂ ಅನೇಕರು ಉಪಸ್ಥಿತರಿದ್ದರು

ವರದಿ:- ವೀರಣ್ಣ ಸಂಗಳದ

error: