December 21, 2024

Bhavana Tv

Its Your Channel

436ನೇ ನಮ್ಮೂರು ನಮ್ಮ ಕೆರೆ ಯೋಜನೆಯಡಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯ ಉದ್ಘಾಟನಾ ಸಮಾರಂಭ

ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ 436ನೇ ಕೆರೆ ಹೂಳೆತ್ತುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ರೀ ಮ,ನಿ,ಪ್ರ ಗಂಗಾಧರ ಮಹಾಸ್ವಾಮಿಗಳು ಮತ್ತು ಜಿಲ್ಲಾ ನಿರ್ದೇಶಕರು ಶಿವಾನಂದ ಆಚಾರ್ಯ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಕರುಣಾಕರ ಆಚಾರ್ಯ, ಕೆರೆ ವಿಭಾಗದ ಅಭಿಯಂತರರು, ಹರೀಶ್ ನಾಯಕ್, ಕೃಷಿ ಮೇಲ್ವಿಚಾರಕರು ಚನ್ನಯ್ಯ ಹಿರೇಮಠ, ಪಂಚಾಯತ್ ಅಧ್ಯಕ್ಷರು ವೀರಣ್ಣ ಯಾಳಗಿ, ಕೆರೆ ಸಮಿತಿ ಅಧ್ಯಕ್ಷರು ರುದ್ರ ಗೌಡ, ತಮ್ಮನ ಗೌಡ ಊರಿನ ಗಣ್ಯರು, ರೈತರು, ಸ್ವ ಸಹಾಯ ಸಂಘದ ಪ್ರಗತಿ ಬಂಧು ತಂಡದ ಸದಸ್ಯರು ಭಾಗವಹಿಸಿದ್ದರು

ವರದಿ: ವೀರಣ್ಣ ಸಂಗಳದ

error: