ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಗ್ರಾಮದೇವತೆಗಳ ಜಾತ್ರಾ ಮೆರವಣಿಗೆಯು ಶ್ರದ್ಧಾ ಭಕ್ತಿಯಿಂದ ಅತ್ಯಂತ ಸಡಗರ ಸಂಭ್ರಮದೊAದಿಗೆ ಕೊನೇ ದಿನ ಶನಿವಾರ ಡೊಳ್ಳು ಕುಣಿತ ಸಕಲ ವಾದ್ಯ ವೈಭವದೊಂದಿಗೆ ಬಹು ವಿಜೃಂಭಣೆಯಿAದ ನಡೆಯಿತು.
ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗನ್ನು ನೀಡಿದರು.
ನೂರಾರು ಮಹಿಳೆಯರು ತಮ್ಮ ತಮ್ಮ ಮನೆಗಳಿಗೆ ಪರ ಊರುಗಳಿಂದ ಆಗಮಿಸಿದ್ದ ಬೀಗರು, ಬಿಜ್ಜರೊಂದಿಗೆ ಹೊಸ ಹೊಸ ಬಟ್ಟೆ ಧರಿಸಿ ದೇವತೆಗಳಿಗೆ ನೈವೇದ್ಯ ಹಣ್ಣು, ಕಾಯಿ ಉಡಿ ಸಲ್ಲಿಸಿ ಭಕ್ತಿಯನ್ನು ಸಮರ್ಪಿಸಿದರು.
ಪ್ರತಿಯೊಂದು ಮನೆಗಳ ಮುಂದೆ ತಳಿರು ತೋರಣಗಳಿಂದ ಅಲಂಕರಿಸಿ, ನೆಲವನ್ನು ಸ್ವಚ್ಛಗೊಳಿಸಿ ವಿವಿಧ ವಿಶೇಷ ಚಿತ್ತಾರಗಳ ರಂಗೋಲಿ ಹಾಕಿ ದೇವತೆಗಳನ್ನು ಬರ ಮಾಡಿಕೊಂಡರು.
ಈ ಭವ್ಯವಾದ ಮೆರವಣಿಗೆ ಸಾಗಿದಾಗ ಭಕ್ತರು ಉಧೋ.. ಉಧೋ.. ಎನ್ನುವ ಜೈ ಘೋಷಣೆಗಳು ಮುಗಿಲು ಮುಟ್ಟಿತ್ತು.
ಮುಂಜಾನೆ 9 ಗಂಟೆಯಿAದ ಪ್ರಾರಂಭವಾದ ಮೆರವಣಿಗೆ ರಾತ್ರಿ 2 ಗಂಟೆಯವರೆಗೆ ಉತ್ಸವವು ಗ್ರಾಮದ ಪ್ರತಿಯೊಂದು ಓಣಿಯ ಮನೆ ಮನೆಗಳಿಗೆ ತೆರಳಿತು ಅಲ್ಲಿ ಪೂಜೆಗೊಂಡ ನಂತರ ಮುಂದಿನ ಮನೆಗೆ ಸಾಗುತ್ತಿತ್ತು.
ಪ್ರತಿಯೊಂದು ಓಣಿಯಲ್ಲಿ ಮತ್ತು ಮನೆ ಮನೆಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ತಂಪು ಪಾನೀಯ ರಸ್ನಾ, ಮಜ್ಜಿಗೆ, ನೀರಿನ ಪಾಕೀಟಗಳನ್ನು ಸಾಕು ಸಾಕು ಎನ್ನುವಷ್ಟು ವಿತರಣೆ ಮಾಡಿದರು.
ವಿವಿಧ ವಿಶೇಷ ಸೇವೆಗಳು, ಹರಕೆ, ಕಾಣಿಕೆಗಳನ್ನು ದೇವತೆಗಳಿಗೆ ಭಕ್ತರು ಸಮರ್ಪಣೆ ಮಾಡಿದರು.
ದೇವತೆಗಳಿಗೆ ಸೀರೆ, ಖಣ, ಬಳೆ, ಅರಿಶಿಣಕೊಂಬು, ಕೊಬ್ಬರಿ ಬಟ್ಟಲು, ಎಲಿ, ಅಡಿಕೆ ಉಡಿ ತುಂಬುವ ಮೂಲಕ ದೇವತೆಗಳಲ್ಲಿ ಪ್ರಾರ್ಥಿಸಿದರು.
ಸರ್ವ ಜಾತಿ ಜನಾಂಗದವರು, ಹಿರಿಯರು, ಯುವಕರು, ಮಹಿಳೆಯರು, ತವರುಮನೆಗೆ ಬಂದಿದ್ದ ಹೆಣ್ಣು ಮಕ್ಕಳು, ಪರಸ್ಥಳದಿಂದ ಬಂದಿದ್ದ ಬೀಗರು, ಬಿಜ್ಜರು, ಮಕ್ಕಳು ಸೇರಿದಂತೆ ಗ್ರಾಮದ ಹಾಗೂ ಸುತ್ತಮುತ್ತಲಿನ ಸಕಲ ಭಕ್ತಾದಿಗಳು ಪಾಲ್ಗೊಂಡಿದ್ದರು
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ