December 22, 2024

Bhavana Tv

Its Your Channel

ರೋಣ ಪೋಲಿಸ್ ಠಾಣೆಯಲ್ಲಿ ಶಿವ-ಬಸವ ಜಯಂತಿ ಮತ್ತು ರಂಜಾನ್ ಆಚರಣೆ ನಿಮಿತ್ತ ಶಾಂತಿ ಸಭೆ

ರೋಣ:-ಕೆಲ ಸಾಮಾಜಿಕ ಜಾಲತಾಣಗಳ ಪ್ರಚೋದನಾಕಾರಿ ಪೋಸ್ಟ್ಗಳಿಂದ ಸಮಾಜದಲ್ಲಿ ಶಾಂತಿ ಕದಡುತ್ತಿದೆ ಎಂದು ಪಿಎಸ್ ಐ ವಿನೋದ ಪೂಜಾರಿ ಹೇಳಿದರು.

ಇಲ್ಲಿನ ಪೋಲಿಸ್ ಠಾಣಾ ಆವರಣದಲ್ಲಿ ಶಿವ-ಬಸವ ಜಯಂತಿ ಮತ್ತು ರಂಜಾನ್ ಆಚರಣೆ ನಿಮಿತ್ತ ಜರುಗಿದ ಶಾಂತಿ ಸಭೆಯಲ್ಲಿ ಸಿಪಿಐ ಸುಧೀರ ಬೆಂಕಿ ಅವರು ಮಾತನಾಡಿ, ಜನರಲ್ಲಿ ಈಗಾಗಲೇ ಸೌಹಾರ್ಧತೆಯಿದೆ. ಈ ಜಾಲತಾಣಗಳಲ್ಲಿ ಬರುವ ವಿಷಯಗಳು ನಂಬಿಕೆಗೆ ಅರ್ಹ ಎಂಬುದನ್ನು ಅರಿಯದೇ ಇಂದಿನ ಯುವ ಜನತೆ ದುಡಕಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಪರಿಶೀಲಿಸಿ ಎಲ್ಲರಿಗೂ ಒಳಿತಾಗುವಂತೆ ವರ್ತಿಸಬೇಕಿದೆ. ಇದು ಸಮಾಜಕ್ಕೆ ಮಾರಕವಾಗಬಹುದು. ಘಟನೆಯ ವಾಸ್ತವಾಂಶವನ್ನು ಇಲಾಖೆಯೊಂದಿಗೆ ಹಂಚಿಕೊAಡು ಸಹಕರಿಸಿ.

ಹುಬ್ಬಳ್ಳಿ ಗಲಭೆಯಿಂದ ಎಷ್ಟೋ ಜನ ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಪಾಠ ಕಲಿತು ಎಲ್ಲರೂ ಸೌಹಾರ್ದತೆಯಿಂದ ಇರುವಂತಾಗಬೇಕು. ಧಾರ್ಮಿಕ ಆಚರಣೆಗಳು ಸ್ವಯಂ ಘೋಷಿತ ಹಕ್ಕುಗಳಾಗಿದ್ದು, ಅವುಗಳ ಆಚರಣೆ ಎಂದಿನAತೆ ಸಾಗಲಿ, ಇವುಗಳಲ್ಲಿ ಅವಗಡ ಸಂಭವಿಸಿದAತೆ ಆಯಾ ಮುಖಂಡರು ಮುನ್ನಚ್ಚರಿಕೆ ವಹಿಸಬೇಕು. ಕಳೆದ ೨ ವರ್ಷಗಳಿಂದ ಕೋವಿಡ್ ಹಿನ್ನಲೆಯಲ್ಲಿ ಹಬ್ಬಗಳ ಆಚರಣೆ ನಡೆದಿಲ್ಲ. ಕಾರಣ ಸಧ್ಯ ಅವಕಾಶವಿದ್ದು ಸೌಹಾರ್ದತೆ ಮತ್ತು ಶಾಂತಿಯಿAದ ನಡೆಯಲಿ.

ಈ ವೇಳೆ ಸಿಪಿಐ ಸುಧೀರ ಬೆಂಕಿ, ಹಕಿಬ್ ಹುಲ್ಲೂರ, ಬಾವಾಸಾಬ ಬೆಟಗೇರಿ, ಅಜ್ಜು ಬೆಪಾರಿ, ಅಶೋಕ ದೇಶನ್ನವರ, ಅಬ್ಬು ಹೊಸೂರ, ಬಶೀರ ಕಟ್ಟಿಮನಿ, ವಾಸಿಮ ಕೊಪ್ಪಳ, ಮಂಜು ಸಂಗಟಿ ಯಲ್ಲಪ್ಪ ಕಿರೇಸೂರ, ಅಸ್ಲಮ್ ಕೊಪ್ಪಳ, ಹಾಗೂ ಇತರರು ಇದ್ದರು.

ವರದಿ: ವೀರಣ್ಣ ಸಂಗಳದ

error: