May 3, 2024

Bhavana Tv

Its Your Channel

ಬಸವರಾಜ ಬೈರತಿ ನಗರಾಭಿವೃದ್ಧಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಗಳೂರ ಕೆರೆ ವೀಕ್ಷಣೆ

ರೋಣ :-ಬಸವರಾಜ ಬೈರತಿ ನಗರಾಭಿವೃದ್ಧಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಗಳೂರ ಕೆರೆ ವೀಕ್ಷಣೆ ಮತ್ತು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಜಿಗಳೂರ ಕೆರೆಯ ಕಾಮಗಾರಿ ಮುಗಿಸದಿದ್ದರೆ, ಸಂಬAಧಿಸಿದ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ಜೈಲಿಗೆ ಕಳುಹಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆಯ ಸಚಿವ ಬೈರತಿ ಬಸವರಾಜ ಎಚ್ಚರಿಕೆ ನೀಡಿದರು.

ತಾಲೂಕಿನ ಜಿಗಳೂರ ಕೆರೆಯ ಕಾಮಗಾರಿ ವೀಕ್ಷಿಸಿ ಮಾತನಾಡಿ, ಮುಂದಿನ ಎರಡು ತಿಂಗಳೊಳಗೆ ಕಾಮಗಾರಿ ಮುಗಿಸಬೇಕು. ಈ ಭಾಗದ ಜನರಿಗೆ ಕುಡಿಯುವ ನೀರನ್ನು ಕೊಡುವ ಬದ್ಧತೆ ನಮಗಿದೆ. ಆದ್ದರಿಂದ ಅಧಿಕಾರಿಗಳು ಕಾರ್ಯಪ್ರವೃತರಾಗಿ ಕೆಲಸ ಮಾಡಬೇಕು. ಮಳೆಗಾಲ ಪ್ರಾರಂಭವಾದರೆ ಇಲ್ಲಿ ಕಪ್ಪು ಮಣ್ಣು ಇರುವುದರಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರನ್ನು, ಯಂತ್ರಗಳನ್ನು ಬಳಕೆ ಮಾಡಿಕೊಂಡು ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು. ಇಲ್ಲವಾದರೆ ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ರೋಣ ಶಾಸಕ ಕಳಕಪ್ಪ ಬಂಡಿ, ಯೋಜನೆಯ ವ್ಯವಸ್ಥಾಪಕ ಕೆ.ಪಿ.ಮೋಹನರಾಜ್, ಗದಗ ಜಿಲ್ಲಾಧಿಕಾರಿ ಸುಂದರೇಶ ಬಾಬು, ಮುತ್ತಣ್ಣ ಕಡಗದ ಅಧ್ಯಕ್ಷರು ಬಿಜೆಪಿ ರೋಣ ಮಂಡಲ ರವಿ ದಂಡಿನ ಬಸವರಾಜ ಕೊಟಗಿ ಮುತ್ತಣ್ಣ ಲಿಂಗನಗೌಡ್ರ ಶಿವಾನಂದ ಜಿಡ್ಡಿಬಾಗಿಲ ಅನಿಲ ಪಲ್ಲೇದ ಸಂಗಪ್ಪ ಜಿಡ್ಡಿಬಾಗಿಲ ಮಲ್ಲು ಮಾದರ
ಮೋಹನ್ ರಾಜ್ ಕೆ.ಪಿ. ಎಮ್.ಡಿ. ಕರ್ನಾಟಕ ನಗರ ನೀರು ಸರಬರಾಜು ಇಲಾಲೆ ಬೆಂಗಳೂರು.
ಜಿ.ಹೆಚ್.ಕೆAಗಾಳೆ ಕಾರ್ಯನಿರ್ವಾಹಕ ಅಭಿಯಂತರರು ಗದಗ. ಜೆ.ಬಿ.ಹೊಸಮನಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗದಗ ಶ್ರೀ ಸಿ ಕೇಶವ್ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರು ಕೆಯುಡಬ್ಲ್ಯೂಎಸ್ ಧಾರವಾಡ ಮತ್ತು ಬೆಂಗಳೂರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: