December 22, 2024

Bhavana Tv

Its Your Channel

ರಂಗಭೂಮಿ ಕಲೆಗೆ ಎಲ್ಲರೂ ಪ್ರೋತ್ಸಾಹಿಸಿ : ಮಿಥುನ್ ಪಾಟೀಲ

ರೋಣ:ರಂಗಭೂಮಿ ಕಲೆ ಗ್ರಾಮೀಣ ಭಾಗಗಳಲ್ಲಿ ಇನ್ನೂ ಜೀವಂತ ಇದೆ.ರಂಗಭೂಮಿ ಕಲೆಗೆ ಎಲ್ಲರೂ ಪ್ರೋತ್ಸಾಹಿಸಬೇಕು.ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರೂ ಆಚರಿಸಬೇಕು ಎಂದು ರೋಣ ಪುರಸಭೆ ಉಪಾಧ್ಯಕ್ಷ ಮಿಥುನ್ ಪಾಟೀಲ ಮಾತನಾಡಿದರು.

ಸಮೀಪದ ತಳ್ಳಿಹಾಳ ಗ್ರಾಮದ ಶ್ರೀ ಕಲ್ಲೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಶರಣಬಸವೇಶ್ವರರ ಪುರಾಣ ಮಂಗಲೋತ್ಸವ ನಿಮಿತ್ತವಾಗಿ ಶ್ರೀ ಕಲ್ಲೇಶ್ವರ ನಾಟ್ಯ ಸಂಘ ಇವರ ಆಶ್ರಯದಲ್ಲಿ ‘ಪಾಪಿಗಳ ಲೋಕಕ್ಕೆ ಅಂತ್ಯ’ ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ರಂಗಭೂಮಿ ಕಲೆ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿವೆ. ಅಂತಹ ಅದ್ಬುತವಾದ ಶಕ್ತಿ ರಂಗಭೂಮಿ ಕಲೆಗಿದೆ.ರಂಗಭೂಮಿ ಕಲೆ ಉಳಿಸಲು ಯುವಕರು ಮುಂದಾದಾಗ ಮಾತ್ರ ಸಮಾಜದಲ್ಲಿ ವ್ಯಕ್ತಿ ಗತವಾಗಿ ಮುಂದೆ ಬರಲು ಸಾಧ್ಯ.ನಾಟಕಗಳು ಸಮಾಜಕ್ಕೆ ಒಳ್ಳೆ ಸಂದೇಶಗಳನ್ನು ನೀಡುತ್ತಿವೆ ಎಂದು ನುಡಿದರು.

ಇದೇ ಸಮಯದಲ್ಲಿ ಈಶ್ವರ ನಿಂಗಪ್ಪ ಕೆಂಗಾರ,ಉಮೇಶ ಮಲ್ಲಾಪುರ,ಗ್ರಾಮ ಪಂಚಾಯತ ಅಧ್ಯಕ್ಷ ವೀರಣ್ಣ ಯಾಳಗಿ,ತಾ.ಪಂ ಮಾಜಿ ಸದಸ್ಯ ಸಿದ್ದಣ್ಣ ಯಾಳಗಿ,ಗ್ರಾ.ಪಂ ಸದಸ್ಯರಾದ ಶರಣಪ್ಲ ಭೂಮಣ್ಣವರ, ಬಸವಣ್ಣೆವ್ವ ಯಾವಗಲಮಠ, ಎನ್.ಆರ್.ಕುಲಕರ್ಣಿ,ವಿ.ಎ.ರುದ್ರಾಪುರಮಠ,ಎನ್.ಬಿ.ಶಿರಗುಂಪಿ,ವಿ.ಎಸ್.ಹಿರೇಮಠ,ಎನ್.ಬಿ.ಪೂಜಾರ, ಎಮ್.ಎ.ಮ್ಯಾಗೇರಿ,ಎಸ್.ಬಿ.ರುದ್ರಾಪುರಮಠ,ಬಿ.ಬಿ.ಮ್ಯಾಗೇರಿ ಸೇರಿದಂತೆ ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.

ವರದಿ: ವೀರಣ್ಣ ಸಂಗಳದ

error: