April 29, 2024

Bhavana Tv

Its Your Channel

ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಿ: ಜಿ.ಎಸ್.ಪಾಟೀಲ

ರೋಣ : ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.ಆ ಯೋಜನೆಗಳನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು.ಕಾರ್ಮಿಕ ಇಲಾಖೆಯಲ್ಲಿ ಪ್ರತಿಯೊಬ್ಬರೂ ನೋಂದಣಿ ಮಾಡಿಸಿಕೊಳ್ಳಲು ಮುಂದಾಗಬೇಕು.ಪ್ರತಿಯೊಬ್ಬರೂ ಸಂಘಟಿತರಾಗಬೇಕು ಎಂದು ಮಾಜಿ ಶಾಸಕ ಜಿ.ಎಸ್.ಪಾಟೀಲ ಹೇಳಿದರು

ಅವರು ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ವಿಶ್ವ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ,ಮಹಾತ್ಮ ಗಾಂಧಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ,ರಾಮ ರಹೀಮ ಕಟ್ಟಡ ಕಾರ್ಮಿಕರ ಸಂಘ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾ ಆಶ್ರಯದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾದಿಂದ ಬಂದAತಹ ಪರಿಹಾರವನ್ನು ಕೊಡಿಸುವುದರಲ್ಲಿ ಕಾರ್ಯಕರ್ತರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ನAತರ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಮಂಜುರಾತಿ ಪತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಪುರಸಭೆ ಉಪಾಧ್ಯಕ್ಷ ಮಿಥುನ್ ಪಾಟೀಲ ಮಾತನಾಡಿ ಕಾರ್ಮಿಕರು ದಿನನಿತ್ಯದ ಬದುಕಿನಲ್ಲಿ ಶ್ರಮಜೀವಿಗಳಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ.ಕಾರ್ಮಿಕರ ತೊಂದರೆಗಳಿಗೆ ಸರ್ಕಾರವು ಸ್ಪಂದಿಸಿ ಕೈ ಜೋಡಿಸಬೇಕು.ಕಾರ್ಮಿಕರು ಕಷ್ಟ ಪಟ್ಟು ಜೀವನ ಸಾಗಿಸುತ್ತಿದ್ದಾರೆ.ಆರ್ಥಿಕವಾಗಿ ಇನ್ನೂ ಬಲಿಷ್ಟಗೊಳಿಸಲು ಸರ್ಕಾರವು ಹಲವಾರು ಸೌಲಭ್ಯಗಳ ನೆರವನ್ನು ನೀಡುತ್ತಿದೆ. ಮಕ್ಕಳ ವಿದ್ಯಾಭ್ಯಾಸ ಹಾಗೂ ಭವಿಷ್ಯಕ್ಕೆ ಸರ್ಕಾರದಿಂದ ಅನೇಕ ಯೋಜನೆಗಳು ಸಿಗುವಂತಾಗಲಿ ಎಂದು ನುಡಿದರು.

ವಕೀಲರಾದ ಎಲ್.ಎನ್. ಬಾಣದ ಮಾತನಾಡಿ ಸಂಘಟಕಾರರು ಆಗಬೇಕಾದರೆ ಒಗ್ಗಟ್ಟು ಇರಬೇಕು,ಸಂಘಟನೆಯಿAದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು.ಕಾರ್ಮಿಕ ಇಲಾಖೆಯಿಂದ ಬರುವಂತ ಸವಲತ್ತುಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಕಾರ್ಮಿಕ ಇಲಾಖೆಯೊಂದಿಗೆ ಎಲ್ಲರೂ ಸಂಪರ್ಕ ಇರಬೇಕು ಎಂದು ಹೇಳಿದರು.

ಗುಲಗಂಜಿಮಠದ ಶ್ರೀ ಗುರುಪಾದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಇದೇ ಸಮಯದಲ್ಲಿ ಹಜರತ್ ಸುಲೇಮಾನ್ ಸಾವಲಿ ದರ್ಗಾದ ಅಜ್ಜನವರು, ವಿಶ್ವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷ ಬಾಷಾಸಾಬ ಓಲಿ,ಪ್ರಧಾನ ಕಾರ್ಯದರ್ಶಿ ಪ್ರಕಾಶ ಹೊಸಳ್ಳಿ, ಸಿಐಟಿಯು ಜಿಲ್ಲಾಧ್ಯಕ್ಷ ಮಹೇಶ ಹಿರೇಮಠ,ದುರಗಪ್ಪ ಹಿರೇಮನಿ,ಬಾವಾಸಾಬ ಬೇಟಗೇರಿ,ಹನಮಂತಪ್ಪ ತಳ್ಳಿಕೇರಿ,ಮಂಜುನಾಥ ಪೂಜಾರ, ಎಮ್.ಎಚ್.ಮುಲ್ಲಾ ,ಮುತ್ತಣ್ಣ ಬೆನ್ನೂರ, ಹಾಸ್ಯ ಕಲಾವಿದ ಹಳ್ಳಿಕೇರಿಮಠ,ಎನ್.ಎಚ್.ಕುಲಕರ್ಣಿ, ಫಕ್ರುಸಾಬ ಇಟಗಿ,ಯುಶೂಪ್ ಇಟಗಿ ಸೇರಿದಂತೆ ಕಾರ್ಮಿಕ ಸಂಘದ ಮುಖಂಡರು ಉಪಸ್ಥಿತರಿದ್ದರು.

ವರದಿ: ವೀರಣ್ಣ ಸಂಗಳದ

error: