April 29, 2024

Bhavana Tv

Its Your Channel

ಶ್ರೀ ಹಿರೇಮಠದಲ್ಲಿ ನೂತನ ಶಿಲಾ ಮಂಟಪದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭ ಅಂಗವಾಗಿ ಧಾರ್ಮಿಕ ಸಭೆ

ರೋಣ ಪಟ್ಟಣದ ಶ್ರೀ ಹಿರೇಮಠದಲ್ಲಿ, ನೂತನ ಶಿಲಾ ಮಂಟಪದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭ ಅಂಗವಾಗಿ ಶ್ರೀ ಮಠದ ಸಮಿತಿ ವತಿಯಿಂದ ಶ್ರೀ ಜಗಧೀಶ ಹಿರೇಮಠ ಧರ್ಮದರ್ಶಿಗಳು ಇವರ ನೇತೃತ್ವದಲ್ಲಿ ಧಾರ್ಮಿಕ ಸಭೆ ನಡೆಯಿತು.
ಶ್ರೀ ರಂಭಾಪುರಿ ಶ್ರೀ ಗಳು ಮಾತನಾಡಿ ನೀರಿನಲ್ಲಿ ಇರುವಂತಹ ಕಲ್ಲನ್ನು ಮೇಲೆತ್ತಿವಂತ ಕಾರ್ಯವನ್ನು ಜಗದೀಶ ಹಿರೇಮಠ ಧರ್ಮದರ್ಶಿಗಳು ಮಾಡಿರುತ್ತಾರೆ. ಕೊಡುವ ಶಿವ ಬಡವನಲ್ಲ, ಜಗದೀಶ ಹಿರೇಮಠ ರವರು. ಶಿಕ್ಷಕರಾಗಿ ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ ಅವರಂತೆ ಎಲ್ಲರೂ ಆಗಬೇಕು. ರೋಣ ಪಟ್ಟಣದಲ್ಲಿ ಅವರ ಪೂರ್ವಜರು ಕಟ್ಟಿದಂತಹ ಮಂದಿರವನ್ನು ಹೊಸ ಮಠವನ್ನಾಗಿ ಮಾಡಿದ್ದಾರೆ, ಅವರು ವೀರಶೈವರಾಗಿ ಹುಟ್ಟಿದಕ್ಕೂ ಸ್ವಾರ್ಥಕವಾಯಿತು.
ಸಮಾಜ ಕಟ್ಟಲು ಹಲವಾರ ಶ್ರಮಬೇಕು, ಕೆಡಿಸಲು ಒಂದು ನಿಮಿಷ ಸಾಕು, ಆದರೆ ವೀರಶೈವ ಧರ್ಮದಲ್ಲಿ ತಾವೆಲ್ಲರೂ ಬೆಳೆಯಬೇಕು. ರೋಣ ಪಟ್ಟಣದ ಹಿರೇಮಠ ದಲ್ಲಿ ಪಂಚಪೀಠಗಳನ್ನು ಸ್ಥಾಪಿಸಿ, ಅದನ್ನು ಕೆಡಿಸಲು ಸಾಕಷ್ಟು. ಕಾಣದ ಕೈಗಳು ಇದ್ದರು ಏನು ಮಾಡುಕೆ ಆಗಲ್ಲ
ಪಂಚ ಪೀಠಗಳ ವೀರಶೈವ ಸಿದ್ದಂತವನ್ನು ಬೆಳೆಸುವವರು.
ಶ್ರೀ ರೇಣುಕಾ ಚಾರ್ಯರು ಇದ್ದಾರೆ ಅವರ ಭಕ್ತಿ ಶೃದ್ಧೆ ಇರುವ ವರೆಗೆ ಯಾರಿಗೂ ಏನು ಮಾಡಲಿಕ್ಕೆ ಆಗುವುದಿಲ್ಲ ಗುರುವಿನಿಂದ ಲಿಂಗ ಗುರುವಿನಿಂದ ಶಿಶ್ಯಾಚಾರ ಗುರುವಿನಿಂದ ಬೋಧನೆ ಗುರುವಿನಿಂದ ವಿಕಾಶ ವೀರಶೈವ ಧರ್ಮದಲ್ಲಿ ತಾನು ಒಂದೇ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಶ್ರೀಮದ ರಂಭಾಪುರಿ ಸ್ತ್ರೀ ವೀರನರಸಿಂಹಾಸನಧೀಶ್ವರ ಶ್ರೀ ಶ್ರೀ
1008 ಜಗದ್ಗುರು ಡಾ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳದವರು, ರಂಬಾಪುರಿ ಪೀಠ ಬಾಳೆಹೊನ್ನೂರು ಶ್ರೀ ಗುರುಸ್ವಾಮಿ ಕಲಕೇರಿ ಗವಾಯಿಗಳು, ಗದಗ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜಿ ಎಸ್ ಪಾಟೀಲ, ಮಾಜಿ ಶಾಸಕರು ಮಿಥುನ್ ಪಾಟೀಲ,
ಉಪಾಧ್ಯಕ್ಷರು ಪುರಸಭೆ ಐ.ಎಸ್.ಪಾಟೀಲ, ನವಲಗುಂದ ಮಾಜಿ ಪುರಸಭೆ ಅಧ್ಯಕ್ಷರು ಹುಚ್ಚಪ್ಪನವರು , ವಿಶ್ವನಾಥ್ ಜಿಡ್ಡಿಬಾಗಿಲ, ಬಸವರಾಜ ನವಲಗುಂದ, ರೋಣ ನಗರದ ಸಕಲ ಸದ್ಭಕ್ತರು ಉಪಸ್ಥಿತರಿದ್ದರು.

ವರದಿ: ವೀರಣ್ಣ ಸಂಗಳದ

error: