December 22, 2024

Bhavana Tv

Its Your Channel

ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರ, ವಿವಿಧ ಶಿಕ್ಷಣ ಸಂಸ್ಥೆಯಲ್ಲಿ ಬಸುರಾಜ ಗುರಿಕಾರ ಪರ ಮಾಜಿ ಶಾಸಕ ಜಿ ಎಸ್ ಪಾಟೀಲ ಬಿರುಸಿನ ಪ್ರಚಾರ

ರೋಣ : ಎಲ್ಲಾ ಮತದಾರರು ನಿಷ್ಪಕ್ಷಪಾತವಾಗಿ ಮತದಾನಕ್ಕೆ ಎಲ್ಲರೂ ಕೈಜೋಡಿಸಬೇಕು. ಶಿಕ್ಷಣ ಸಂಸ್ಥೆಯ ಜೊತೆಗೆ ಎಲ್ಲರೂ ಸಂಪರ್ಕ ಹೊಂದಿರಬೇಕು.ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಎಲ್ಲರ ಸಹಕಾರ ತುಂಬಾ ಮುಖ್ಯ ಎಂದು ಮಾಜಿ ಶಾಸಕ ಜಿ.ಎಸ್.ಪಾಟೀಲ ಹೇಳಿದರು

ಪಟ್ಟಣದ ಶರಣ ಶಿಕ್ಷಣ ಸಂಸ್ಥೆ ನ್ಯೂ ಲಿಟಲ್ ಫ್ಲಾವರ ಸ್ಕೂಲ್ ಅಂಜುಮನ ಪ್ರೌಢಶಾಲೆ ಡಿ ಪೌಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಪ್ರಚಾರ ನಡೆಸಿದರು ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ವಿ ಆರ್ ಗುಡಿಸಾಗರ ಮಾತನಾಡಿ ಖಾಸಗಿ ಶಿಕ್ಷಣ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ತುಂಬಾ ತೊಂದರೆ ಅನುಭವಿಸಿದ್ದಾರೆ. ಸರ್ಕಾರವು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದರು.

ಪುರಸಭೆ ಉಪಾಧ್ಯಕ್ಷ ಮಿಥುನ ಜಿ ಪಾಟೀಲ ಮಾತನಾಡಿ ಕೊರೊನಾ ಸಮಯದಲ್ಲಿ ಶಿಕ್ಷಕರ ಸಮಸ್ಯೆಗಳನ್ನು ನಿಭಾಯಿಸುವುದರಲ್ಲಿ ಸರ್ಕಾರವು ವಿಫಲವಾಗಿದೆ. ಕೊರೊನಾ ಸಮಯದಲ್ಲಿ ಶಿಕ್ಷಕರು ಬದುಕು ಕಟ್ಟಿಕೊಳ್ಳಲು ತುಂಬಾ ಸಮಸ್ಯೆಗಳನ್ನು ಎದುರಿಸಿದ್ದಾರೆ.
ಶಿಕ್ಷಣ ಸಂಸ್ಥೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರವು ಸಂಪೂರ್ಣ ಪ್ರಯತ್ನ ಮಾಡಿಲ್ಲ ಎಂದರು.

ಇದೇ ಸಮಯದಲ್ಲಿ ಪುರಸಭೆ ಉಪಾಧ್ಯಕ್ಷ ಮಿಥುನ ಜಿ ಪಾಟೀಲ ಡಾಕ್ಟರ್ ಎಸ್ ಬಿ ಲಕ್ಕೋಳ ಮುತ್ತಣ್ಣ ಸಂಗಳದ ಮಾಜಿ ಪುರಸಭೆ ಅಧ್ಯಕ್ಷೆರು ರಾಜಣ ಸುಂಕದ ತೋಟಪ್ಪ ನವಲಗುಂದ ಯೂಸುಫ ಇಟಗಿ ಸಂಗು ನಂವಲಗುದ ಮಲು ರಾಯನಗೌಡ್ರೆ ಬಸವರಾಜ ನಂವಲಗುದ ಅಜೀಜ್ ಯಲಿಗಾರ ಬಾವಾಸಾಬ ಬೆಟಗೇರಿ ಪುರಸಭೆ ಸದಸ್ಯರು ಅಸ್ಲಾಂಕೊಪ್ಪಳ ನಾಜಬೇಗಂ ಯಲಿಗಾರ ಸಂತೋಷ ಚಿತ್ರಗಾರ ಶಾಲೆ ಶಿಕ್ಷಕ ಶಿಕ್ಷಕಿಯರು ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು

ವರದಿ: ವೀರಣ್ಣ ಸಂಗಳದ

error: