December 21, 2024

Bhavana Tv

Its Your Channel

ಕೇಂದ್ರ ಬಿಜೆಪಿ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ಬ್ಲಾಕ್ ಕಾಂಗ್ರೇಸ್ ವತಿಯಿಂದ
ಸತ್ಯಾಗ್ರಹ

ರೋಣ : ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ರೋಣ ಮತ್ತು ನರೇಗಲ್ಲ ಬ್ಲಾಕ್ ಕ್ಕಾಂಗ್ರೆಸ್ ವತಿಯಿಂದ ಕೇಂದ್ರ ಬಿಜೆಪಿ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ಸತ್ಯಾಗ್ರಹ ನಡೆಸಿದರು

ಗದಗ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ ಎಸ್ ಪಾಟೀಲ್ ಮಾತನಾಡಿ ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಬಿಲ್ಲು ಪಾಸು ಮಾಡದೇ ಸೈನಿಕರಿಗೆ ಸಂಬAಧಿಸಿದ ಅಗ್ನಿಪಥ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೆ ಗೊಳಿಸಿದ್ದಾರೆ ಈ ಯೋಜನೆಯು ಸಂಪೂರ್ಣ ಅವೈಜ್ಞಾನಿಕವಾಗಿದೆ ಅಲ್ಲದೇ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಕನಸು ಹೊಂದಿರುವ ಯುವಕರ ಕನಸು ನುಚ್ಚುನೂರಾಗಿದೆ.

ಕೋಟ್ಯಾಂತರ ಯುವಕರು ಬೀದಿಪಾಲಾಗಲಿದ್ದಾರೆ. ಈಗ ಅಗ್ನಿಪಥ ಯೋಜನೆಯಲ್ಲಿ ರಕ್ಷಣಾ ಇಲಾಖೆಯಲ್ಲಿ 4 ವರ್ಷದ ಮಟ್ಟಿಗೆ ಅಲ್ಪಾವಧಿ ಆಧಾರದ ಮೇಲೆ ನೇಮಕಾತಿ ಸರಿ ಅಲ್ಲ ನೇರ ಭರ್ತಿಯಾಗುವವರು ದೇಶದರಕ್ಷಣೆಗಾಗಿ ತಮ್ಮ ಸರ್ವಸ್ವತ್ಯಾಗ ಮಾಡಿ ಹೋಗುತ್ತಾರೆ. 4ವರ್ಷದ ಅಲ್ಪಾವಧಿಯ ಮೇಲೆ ನಂತರ ನಾಗರೀಕ ಸಮಾಜಕ್ಕೆ ಕಾಲಿಡುವ ಈ ಯುವಕ ಯುವತಿಯರ ಜೀವನ ದುಸ್ಥರವಾಗಲಿದೆ ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಗ್ರಾಜುಟಿ ಪೆನ್‌ಶನ್ ನೀಡಬೇಕಾಗುತ್ತದೆ. ಇದನ್ನು ತಪ್ಪಿಸಲು ಅಗ್ನಿಪಥ ಜಾರಿಗೆ ತರಲಾಗಿದೆಪ್ರತಿಭಟನೆ ಮಾಡುವ ಮೂಲಕ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು

ಪುರಸಭೆ ಉಪಾಧ್ಯಕ್ಷ ಮಿಥುನ್ ಜಿ ಪಾಟೀಲ ಮಾತನಾಡಿ ರಕ್ಷಣಾಪಡೆಯಲ್ಲಿ ಲಕ್ಷಕ್ಕೂ ಮಿಗಿಲಾಗಿ ಹುದ್ದೆಗಳು ಖಾಲಿ ಇದ್ದರೂ ಪೂರ್ಣ ಪ್ರಮಾಣದಲ್ಲಿ ಯುವಕರನ್ನು ಸೈನಿಕ ಹುದ್ದೆಗೆ ನೇಮಕ ಮಾಡಬೇಕು ಈಗಾಗಲೇ ರಾಷ್ಟ್ರವ್ಯಾಪ್ತಿ ಈ ಯೋಜನೆಯ ವಿರೋಧ, ಚಳುವಳಿ ಪ್ರತಿಭಟನೆ ಪ್ರಾರಂಭಗೊAಡಿದೆ ಈ ಕೂಡಲೇ ಈ ವೈಜ್ಞಾನಿಕ ಅಗ್ನಿಪಥ ಯೋಜನೆಯನ್ನು ರದ್ದುಪಡಿಸಬೇಕು ಮೊದಲಿನಂತೆ ಸೇನಾ ನೇಮಕಾತಿ ಯೋಜನೆ ಅಡಿಯಲ್ಲಿ ನೇಮಕಾತಿ ನಡೆಯಬೇಕು ರಾಷ್ಟ್ರಪತಿಗಳು ಕೂಡಲೇ ರದ್ದುಪಡಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಕಮಿಟಿ ವೀರಣ್ಣ ಶೆಟರ ರೋಣ, ಪುರಸಭೆ ಅಧ್ಯಕ್ಷೆ ರಂಗವ್ವ ಭಜಂತಿ,್ರ ಪುರಸಭೆ ಉಪಾಧ್ಯಕ್ಷ ಮಿಥುನ್ ಜಿ ಪಾಟೀಲ, ಬಸವರಾಜ ನವಲಗುಂದ ಪರಶುರಾಮ ಅಳಗವಾಡಿ, ವಿ ಬಿ ಸೋಮನಕಟ್ಟಿಮಠ, ಮಲ್ಲು ರಾಯನಗೌಡ್ರ, ದಾವಲಸಾಬ್ ಬಾಡಿನ್, ಪುರಸಭೆ ಸದಸ್ಯ ಮಲ್ಲಯ್ಯ ಮಹಾಪುರುಷಮಠ, ಪುರಸಭೆ ಸದಸ್ಯ ಪ್ರಭು ಮೇಟಿ ,ಇಸ್ಮಾಯಿಲ್ ಹೊರಪೇಟಿ, ಸಂಜೆಯ ದೊಡ್ಮಮನಿ, ಅಂದಪ್ಪ ಬಿಚ್ಚೂರ, ವೀರಪ್ಪ ಬಿಚ್ಚೂರ, ಶರಣಪ್ಪ ಪೂಜಾರಿ, ನರೇಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ರೆವಡಿ, ನಾಜಬೇಗಂ ಯಲಿಗಾರ, ಗೀತಾ ಕೊಪ್ಪದ, ಮಂಜುಳಾ ಹುಲ್ಲಣ್ಣವರ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಯಲ್ಲಪ್ಪ ಕಿರಸೂರ, ಅಸ್ಲಾಂ ಕೊಪ್ಪಳ, ಸೋಮು ನಾಗರಾಜ, ಯಲ್ಲಪ್ಪ ಕೊಪ್ಪದ , ನರೆಗಲ್ಲ ಮತು ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಸೇರಿದಂತೆ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರು ಇದ್ದರು

ವರದಿ ವೀರಣ್ಣ ಸಂಗಳದ ರೋಣ

error: