May 3, 2024

Bhavana Tv

Its Your Channel

15 ದಿನಗಳ ಮ್ಯಾಟ ಕಬಡ್ಡಿ ತರಬೇತಿ ಶಿಬಿರ

ರೋಣ : ಬಿ ಸಿ ರಮೇಶ ಕಬಡ್ಡಿ ತರಬೇತಿ ಅಕಾಡೆಮಿ ರೋಣ ಮಿಥುನ ಜಿ ಪಾಟೀಲ ಅಭಿಮಾನಿ ಬಳಗ ರೋಣ, ಗದಗ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಶಿಯೇಷನ್ (ರಿ) ಗದಗ ಇವರ ಆಶ್ರಯದಲ್ಲಿ ತೃತೀಯ ಬಾರಿಗೆ ಉತ್ತರ ಕರ್ನಾಟಕ ಭಾಗದ 23 ವರ್ಷದ ಯುವಕರಿಗೆ
15 ದಿನಗಳ ಮ್ಯಾಟ ಕಬಡ್ಡಿ ತರಬೇತಿ ಶಿಬಿರ

ಸಸಿಗೆ ನೀರುಹಾಕುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಮಿಥುನ್ ಜಿ ಪಾಟೀಲ್ ಗ್ರಾಮೀಣ ಭಾಗದ ಆಟವಾಗಿರುವ ಕಬಡ್ಡಿ ಭಾರತದ ಮಣ್ಣಿನ ಸೊಗಡಿನ ಆಟ ಪರಂಪರೆಯ ಕ್ರೀಡೆಯಾಗಿರುವ ಕಬಡ್ಡಿ ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಕೇವಲ ವಿಡಿಯೋ ಗೇಮ್ಸ್ ನಂತೆ ಆಗಬಾರದು, ಕ್ರೀಡಾಪಟುಗಳು ಕಠಿಣ ಪರಿಶ್ರಮ ಪಟ್ಟರೆ ಮಾತ್ರ ಗ್ರಾಮೀಣ ಪ್ರತಿಭೆಯನ್ನು ಮಿಂಚಬಹುದು ಎಂದು ಹೇಳಿದರು

ಮುಖ್ಯ ಅತಿಥಿಯಾಗಿ ಮಾತನಾಡಿದ ಪುರಸಭೆ ಸದಸ್ಯ ಮುತ್ತಣ್ಣ ಗಡಿಗಿ ಅವರು, ಪ್ರತಿಭೆಗೆ ಬೇಲಿ ಇರೋದಿಲ್ಲ. ಯಾವುದೇ ಕ್ರೀಡೆ ಆಗಲಿ, ಯಾರಲ್ಲಿ ಬದ್ಧತೆ, ಕಠಿಣ ಪರಿಶ್ರಮ ಮತ್ತು ಶಿಸ್ತು ಇರುತ್ತದೆಯೋ ಅವರು ಯಶಸ್ಸು ಪಡೆಯುತ್ತಾರೆ. ಕಬಡ್ಡಿ ಮಾನವನನ್ನು ಕೇವಲ ದೈಹಿಕವಾಗಿ ಸದೃಢವಾಗಿಸುವ ಕ್ರೀಡೆಯಾಗದೆ ಅದೊಂದು ಮೈಂಡ್ ಗೇಮ್ ಆಗಿದೆ ಎಂದರು. ಕ್ರೀಡೆಯನ್ನು ಕ್ರೀಡಾಸ್ಫೂರ್ತಿಯಿಂದ ಕಾಣುವಂತಾಗಬೇಕು ಮತ್ತು ಕ್ರೀಡೆಯಿಂದ ಪರಸ್ಪರ ಸೌಹಾರ್ದತೆ ಹಾಗೂ ಸಾಮರಸ್ಯ ಬೆಳೆಯುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಮಿಥುನ್ ಜಿ ಪಾಟೀಲ, ಅಧ್ಯಕ್ಷತೆ ವ್ಹಿ.ಬಿ ಸೋಮನಕಟ್ಟಿಮಠ, ಪುರಸಭೆ ಸದಸ್ಯ ಮುತ್ತಣ್ಣ ಗಡಗಿ, ಕುಮಾರಗಡಗಿ ಅಭಿಷೇಕ ನವಲಗುಂದ,
ಶಿವಪುತ್ರಪ್ಪ ಕೊಡೆಕಲ್ಲ,ಶಿವಾನಂದ ಗಡಗಿ, ತರಬೇತುದಾರ ಮುತ್ತಣ್ಣ ಪ್ರಧಾನಿ,
ಬಸವರಾಜ ಹೊಸಳ್ಳಿ , ಅನಿಲ ನವಲಗುಂದ ಕಾರ್ಯಕ್ರಮ ನಿರೂಪಿಸಿದರು ವಿವಿಧ ಜಿಲ್ಲೆಗಳಿಂದ ಬಂದAತಹ ಕ್ರೀಡಾಪಟುಗಳಿಗೆ ಇದ್ದರು

ವರದಿ ವೀರಣ್ಣ ಸಂಗಳದ

error: