
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.
“ನನಗೆ ಗುರುವಾರದಿಂದ ಅಸೌಖ್ಯ ಕಾಡುತ್ತಿದೆ. ನನ್ನ ಮೈಕೈ ಬಹಳಷ್ಟು ನೋಯುತ್ತಿದೆ. ನನ್ನ ಪರೀಕ್ಷೆ ನಡೆಸಲಾಯಿತು ಹಾಗೂ ದುರದೃಷ್ಟವಶಾತ್ ನನಗೆ ಕೋವಿಡ್ ಪಾಸಿಟಿವ್ ಇದೆಯೆಂದು ತಿಳಿದು ಬಂತು. ನಾನು ಶೀಘ್ರ ಗುಣಮುಖನಾಗಲು ಪ್ರಾರ್ಥನೆಗಳ ಅಗತ್ಯವಿದೆ. ಇನ್‍ಶಾ ಅಲ್ಲಾಹ್,” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಫ್ರಿದಿ ಅವರು ತಮ್ಮ ಶಾಹಿದ್ ಅಫ್ರಿದಿ ಫೌಂಡೇಶನ್ ಮೂಲಕ ಕೋವಿಡ್-19 ಬಿಕ್ಕಟ್ಟಿನ ಸಂದರ್ಭ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಕೋವಿಡ್-19 ಸೋಂಕು ದೃಢಗೊಂಡ ಮೂರನೇ ಪಾಕ್ ಕ್ರಿಕೆಟಿಗರಾಗಿದ್ದಾರೆ ಅಫ್ರಿದಿ. ಈ ಹಿಂದೆ ತೌಫೀಕ್ ಉಮರ್ ಹಾಗೂ ಝಫರ್ ಸರ್ಫರಾಝ್ ಅವರಿಗೆ ಸೋಂಕು ತಗಲಿತ್ತು.
More Stories
ಕೆಜಿಗೆ ೨.೭ ಲಕ್ಷ ರೂ. ಬೆಲೆಯ ಜಗತ್ತಿನ ಅತಿ ದುಬಾರಿ ಮಾವಿನ ಹಣ್ಣು ಮಿಯಝಾಕಿ
ಕರೊನಾ ಮಹಾಮಾರಿ ಮನುಷ್ಯನ ದೇಹವನ್ನು ಹೇಗೆಲ್ಲ ಕಾಡುತ್ತಿದೆ ನೋಡಿ. ಯುವ ಸೋಂಕಿತರಿಗೂ ಪ್ರಾರ್ಶ್ವವಾಯು ಸಮಸ್ಯೆ.
ವುಹಾನ್ನಲ್ಲಿ ಲಾಕ್ಡೌನ್ ಭೀಕರತೆ ಬಿಚ್ಚಿಟ್ಟ ಲೇಖಕಿಗೆ ಜೀವ ಬೆದರಿಕೆ: ‘ವುಹಾನ್ ಡೈರಿ’ಯಲ್ಲಿದೆ ಚೀನಾದ ಕಟು ಕಹಿ ಸತ್ಯ!