December 4, 2024

Bhavana Tv

Its Your Channel

ಕರೊನಾ ಮಹಾಮಾರಿ ಮನುಷ್ಯನ ದೇಹವನ್ನು ಹೇಗೆಲ್ಲ ಕಾಡುತ್ತಿದೆ ನೋಡಿ. ಯುವ ಸೋಂಕಿತರಿಗೂ ಪ್ರಾರ್ಶ್ವವಾಯು ಸಮಸ್ಯೆ.

ನ್ಯೂಯಾರ್ಕ್​: ಕರೊನಾ ಮಹಾಮಾರಿ ಕೇವಲ ಜ್ವರ, ಕೆಮ್ಮ ಹಾಗೂ ಉಸಿರಾಟದ ತೊಂದರೆ ಉಂಟು ಮಾಡುತ್ತದೆ ಎಂಬ ಭಾವನೆ ಇತ್ತೀಚೆಗೆ ಬಲಗೊಳ್ಳುತ್ತಿದೆ. ಆದರೆ, ಇದು ಮನುಷ್ಯನ ನಾನಾ ಅಂಗಗಳನ್ನು ಬಾಧಿಸುತ್ತಿದೆ ಎಂಬುದು ಅಮೆರಿಕ ವೈದ್ಯರ ಸೂಕ್ಷ್ಮ ಗಮನಿಸುವಿಕೆಯಿಂದ ಗೊತ್ತಾಗಿದೆ.

ಕೋವಿಡ್​ 19 ವೈರಾಣು ಮನುಷ್ಯರ ರಕ್ತವನ್ನು ದಪ್ಪವಾಗಿಸುವ ಜತೆಗೆ, ಮಿದುಳು, ಮೂತ್ರಪಿಂಡಗಳಲ್ಲಿ ಹೆಪ್ಪುಗಟ್ಟುತ್ತಿದೆ. ಅಲ್ಲದೆ, ಶ್ವಾಸಕೋಶದಲ್ಲಿ ಸರಾಗವಾದ ರಕ್ತ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುತ್ತಿದೆ.

ಈ ರೀತಿಯ ಸಮಸ್ಯೆಗಳು ಮೂತ್ರಪಿಂಡ ವೈಫಲ್ಯ, ರಕ್ತದೊತ್ತಡ ಸಮಸ್ಯೆ ಹಾಗೂ ಹೃದ್ರೊಗಿಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದೆ ಎಂದು ಭಾವಿಸಿದರೆ ತಪ್ಪಾಗುತ್ತದೆ. 31 ವರ್ಷದ ಯುವ ಕರೊನಾ ಸೋಂಕಿತನಲ್ಲೂ ಇದು ಕಂಡುಬಂದಿದೆ. ವಾಸ್ತವವಾಗಿ ಹೇಳಬೇಕೆಂದರೆ, ಒಬ್ಬ ಯುವಕ ಪಾರ್ಶ್ವವಾಯು ಪೀಡಿತನಾದ ಬಳಿಕವಷ್ಟೇ ಆತನಿಗೆ ಕರೊನಾ ಸೋಂಕು ಇದೆ ಎಂಬುದು ಖಚಿತವಾಯಿತಂತೆ!

ಹೀಗೆಂದು ಅಮೆರಿಕದ ನ್ಯೂಯಾರ್ಕ್​ನ ಮೌಂಟ್​ ಸಿನ್ಹಾಯಿ ಹಾಸ್ಪಿಟಲ್​ ವೈದ್ಯರು ವಿವರಿಸಿದ್ದಾರೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು, ಕರೊನಾ ಸೋಂಕಿಗೆ ತುತ್ತಾದವರಿಗೆ ಡಯಾಲಿಸಿಸ್​ ಮಾಡುವಾಗ ಕ್ಯಾಥೆಟರ್​ನಲ್ಲಿ ಹೆಪ್ಪುಗಟ್ಟಿದ ರಕ್ತದ ಗಂಟುಗಳು ಕಟ್ಟಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.

ಅಲ್ಲದೆ, ಕರೊನಾ ವೈರಾಣುಗಳು ರಕ್ತವನ್ನು ದಪ್ಪವಾಗಿಸುವ ಕಾರಣ ಶ್ವಾಸಕೋಶದಲ್ಲಿ ರಕ್ತ ಸರಾಗಿವಾಗಿ ಸಂಚರಿಸದಂತಾಗುತ್ತಿದೆ. ಉಸಿರಾಟದ ತೊಂದರೆ ನೀಗಿಸಲು ಕರೋನಾ ಪೀಡಿತರಿಗೆ ವೆಂಟಿಲೇಟರ್​ ಅಳವಡಿಸಿದರೂ, ಶ್ವಾಸಕೋಶ ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿದಾಗ, ಶ್ವಾಸಕೋಶದಲ್ಲಿ ರಕ್ತ ಸರಾಗಿವಾಗಿ ಸಂಚರಿಸದಿರುವುದು ಪತ್ತೆಯಾಯಿತು.

ಈ ಎಲ್ಲ ಕಾರಣಗಳಿಂದಾಗಿ ಇದೀಗ ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ರಕ್ತವನ್ನು ತೆಳುಗೊಳಿಸುವ ಮದ್ದನ್ನು ಕಡ್ಡಾಯಗೊಳಿಸಲಾಗಿದೆ. ಹಾಗೆಂದು ಹೆಚ್ಚಿನ ಪ್ರಮಾಣದಲ್ಲಿ ರಕ್ತವನ್ನು ತೆಳುಗೊಳಿಸುವ ಮದ್ದು ಕೊಟ್ಟರೆ, ಅದು ಮಿದುಳು ಮತ್ತು ಇತರೆ ಅಂಗಗಳಲ್ಲಿ ರಕ್ತಸೋರಿಕೆಗೆ ಕಾರಣವಾಗಿ ರೋಗಿಯ ಪ್ರಾಣಕ್ಕೇ ಕುತ್ತು ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅದನ್ನು ನಿಯಂತ್ರಿತವಾಗಿ ಕೊಡಬೇಕಾಗುತ್ತದೆ ಎಂದು ಮೌಂಟ್​ ಸಿನ್ಹಾಯಿ ಹಾಸ್ಪಿಟಲ್​ನ ಡಾ. ಜೆ. ಮೊಕ್ಕೋ ವಿವರಿಸಿದ್ದಾರೆ.

source : vijayavani

error: