December 20, 2024

Bhavana Tv

Its Your Channel

ಗೋಪಾಲಪುರ ಸಂತ ಅಂತೋಣಿ ಚರ್ಚನಲ್ಲಿ ಶ್ರದ್ಧಾ ಭಕ್ತಿಯಿಂದ ಸಂಭ್ರಮದ ಕ್ರಿಸ್ ಮಸ್ ಆಚರಣೆ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿ ಗೋಪಾಲಪುರ ಸಂತ ಅಂತೋಣಿ ಚರ್ಚ್ ನಲ್ಲಿ ಶ್ರದ್ಧಾ ಭಕ್ತಿಯಿಂದ ಮತ್ತು ಸಂಭ್ರಮದ ಸಡಗರದಿಂದ ಯೇಸು ರಾಜನ ಜನನದ ಕ್ರಿಸ್ಮಸ್ ಆಚರಣೆಯು ಗೋಪಾಲ್ಪುರದ ಸಂತ ಅಂತೋಣಿ ಚರ್ಚ್ ನಲ್ಲಿ ರಾತ್ರಿ 11 ಗಂಟೆಗೆ ಕ್ರಿಸ್ಮಸ್ ಹಾಡುಗಳನ್ನು ಹಾಡುತ್ತಾ ರಾತ್ರಿ ಸುಮಾರು 11.30 ಗೆ ಬಲಿಪೂಜೆಯನ್ನು ಫಾದರ್ ಜಾಕಬ್ ಕೊಳನೂರು ಪ್ರಾರಂಭ ಮಾಡಿದರು.

ಇದೇ ಸಂದರ್ಭದಲ್ಲಿ ಬಾಲಯೇಸುವಿನ ಪ್ರತಿಮೆಯನ್ನು ಗೋದಲಿಯಲ್ಲಿ ಇಟ್ಟು ಆರಾಧಿಸಿದರು ಮತ್ತು ದೇವರ ಸಂದೇಶ ಸಾರುತ್ತಾ ಯೇಸು ಕ್ರಿಸ್ತರ ಜನನವು ದೇಶ ಮತ್ತು ರಾಜ್ಯದಲ್ಲಿ ಶಾಂತಿಯುOಟಾಗಲಿ ಹಾಗೂ ಕೊರೋನಾ ಮತ್ತು ಇತರ ಕಾಯಿಲೆಗಳಿಂದ ದೇಶ ಮತ್ತು ರಾಜ್ಯ ಎಲ್ಲಾ ತರದ ಕಾಯಿಲೆಗಳಿಂದ ದೂರ ಸರಿದು ಎಲ್ಲರಿಗೂ ಒಳ್ಳೆಯದು ಕಾಣಲಿ ಎಂದು ಹಾರೈಸಿದರು .ಇದೇ ಸಂದರ್ಭದಲ್ಲಿ ಸಂತ ಅಂತೋನಿ ಚರ್ಚ್ ನಲ್ಲಿ ನೆರೆದಿದ್ದ ಭಕ್ತರಿಗೆ ಕೇಕ್ ವಿತರಿಸಿದರು

error: