May 1, 2024

Bhavana Tv

Its Your Channel

ಆಧಾರ್ ಕಾರ್ಡ್ ಸೆಂಟರ್‌ನಲ್ಲಿ ಹಣದ ಸುಲಿಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರ ಆರೋಪ

ಕೊಡಗು:-ಶನಿವಾರ ಸಂತೆಯಲ್ಲಿ ಬಿಎಸ್ ಎನ್ ಎಲ್ ಆಧಾರ್ ಕಾರ್ಡ್ ಸೆಂಟರ್‌ನಲ್ಲಿ ಹಣದ ಸುಲಿಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರ ಆರೋಪ.ಹಣ ಸುಲಿಗೆ ಮಾಡುತ್ತಿರುವ ಆಧಾರ್ ಸೆಂಟರ್ ಮೇಲೆ ಸಂಬoಧಪಟ್ಟ ಅಧಿಕಾರಿಗಳು ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಶಿವರಾಮೇಗೌಡರ ಕರವೇ ಕಾರ್ಯಕರ್ತರ ಮನವಿ ಹಾಗೂ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಆಧಾರ್ ಸೆಂಟರ್ ಮೇಲೆ ಹಾಗೂ ಹೆಚ್ಚಿನ ಹಣ ವಸೂಲಾತಿ ಮಾಡುತ್ತಿರುವ ಪುಷ್ಪಾ ಜೆರಾಕ್ಸ್ ಅಂಗಡಿ ಮೇಲೆ ಹಾಗೂ ಗ್ರೀನ್ ಇಂಕ್ ಸೈನ್ ಗೆ (ಗೆಜೆಟೆಡ್ ಅಧಿಕಾರಿಗಳು) ಹಣ ತೆಗೆದುಕೊಳ್ಳುವ ಅಧಿಕಾರಿಗಳ ಮೇಲೆ ಸಂಬAಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಶಿವರಾಮೇಗೌಡರ ಕರವೇ ಕಾರ್ಯಕರ್ತರು ಬಿಎಸ್‌ಎನ್‌ಎಲ್ ಆಧಾರ್ ಸೆಂಟರ್ ಮುಂದೆ ಹಾಗೂ ಗ್ರೀನ್ ಇಂಕ್ ಸೈನ್ (ಗೆಜೆಟೆಡ್ ಅಧಿಕಾರಿಗಳು) ಮಾಡುವ ಅಧಿಕಾರಿಗಳ ಕಚೇರಿ ಮುಂದೆ ಹಾಗೂ ಪುಷ್ಪಾ ಜೆರಾಕ್ಸ್ ಅಂಗಡಿಗಳ ಮುಂದೆ ಕರವೇ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಶಿವರಾಮೇಗೌಡರ ಕರವೇ ಕಾರ್ಯಕರ್ತರ ಹೇಳಿದ್ದಾರೆ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿ ಇರುವ ಬಿಎಸ್ ಎನ್‌ಎಲ್ ಸೆಂಟರ್‌ನಲ್ಲಿರುವ ಆಧಾರ್ ಕಾರ್ಡ್ ಮಾಡಿಸಲು ಬರುವ ವ್ಯಕ್ತಿಗಳಿಗೆ ಹಣದ ಸುಲಿಗೆ ನಡೆಯುತ್ತಿದೆ ಎಂದು ಕರವೇ ಕಾರ್ಯಕರ್ತರಿಗೆ ಆಧಾರ್ ಕಾರ್ಡ್ ಮಾಡಿಸಲು ಹೋದಂತ ವ್ಯಕ್ತಿ ಕರವೇ ಕಾರ್ಯಕರ್ತರಿಗೆ ಫೋನ್‌ನಲ್ಲಿ ತಿಳಿಸಿದ ಮೇರೆಗೆ ಕರವೇ ಕಾರ್ಯಕತರು ಆಧಾರ್ ಸೆಂಟರ್ ಗೆ ಭೇಟಿ ನೀಡಿ ವಿಚಾರಿಸಿದಾಗ ಇಲ್ಲಿ ಹಣದ ಸುಲಿಗೆ ನಡೆಯುತ್ತಿರುವುದು ಕರವೇ ಕಾರ್ಯಕರ್ತರಿಗೆ ತಿಳಿದುಬಂದಿರುತ್ತದೆ.
ಒಂದು ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಸಲು 500 ರೂ ಗಳು ಖರ್ಚು ಮಾಡುವ ಪರಿಸ್ಥಿತಿ ಬಂದಿರುತ್ತದೆ . ಹೇಗೆಂದರೆ ಬಿಎಸ್ ಎನ್ ಎಲ್ ಆಧಾರ್ ಸೆಂಟರ್ ನಲ್ಲಿ 120 ರೂ ತೆಗೆದುಕೊಳ್ಳುತ್ತಾರೆ .ಹಾಗೂ ಪುಷ್ಪಾ ಜೆರಾಕ್ಸ್ ಅಂಗಡಿಗಳಲ್ಲಿ ಆಧಾರ್ ಕಾರ್ಡ್ ಫಾರಂ ಮತ್ತು ಫಾರಂ ಭರ್ತಿ ಮಾಡುವುದಕ್ಕೆ ಹಾಗೂ ಆಧಾರ್ ಕಾರ್ಡ್ ಮಾಡಿಸಿದ ಮೇಲೆ ಆಧಾರ್ ಕಾರ್ಡ್ ತೆಗೆದುಕೊಡುವುದಕ್ಕೆ ಮೊದಲೇ ಒಟ್ಟು 120 ರಿಂದ 150 ವರೆಗೆ ತೆಗೆದುಕೊಳ್ಳುತ್ತಿದ್ದಾರೆ .ಹಾಗೂ ಆಧಾರ್ ಕಾರ್ಡ್ ಗೆ ಗ್ರೀನ್ ಇಂಕ್ ಸೈನ್(ಗೆಜೆಟೆಡ್ ಅಧಿಕಾರಿಗಳು) ಗೆ 100 ನೂರು ರೂ ತೆಗೆದುಕೊಳ್ಳುತ್ತಿದ್ದಾರೆ ಇವರೆಲ್ಲರೂ ಸೇರಿ ಬಡವರ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ .ಒಬ್ಬ ವ್ಯಕ್ತಿ ಕೂಲಿ ಕೆಲಸ ಬಿಟ್ಟು ಆಧಾರ್ ಕಾರ್ಡ್ ಮಾಡಲು ಬಂದರೆ ಹೇಗಂದರೂ ಇವರ ಕೂಲಿ ಸೇರಿ 800 ರೂಗಳು ಖರ್ಚಾಗುತ್ತಿದೆ .. ಇಂಥ ಪರಿಸ್ಥಿತಿ ಬಂದೊದಗಿದೆ ಬಡವರಿಗೆ . ಆಧಾರ್ ಕಾರ್ಡ್ ನಲ್ಲಿ ಹಣದ ಸುಲಿಗೆ ನಡೆಯುತ್ತಿದೆ ಎಂದು ಕರವೇ ಗೆ ಕರೆ ಮಾಡಿದ ತಕ್ಷಣ ಕರವೇ ಕಾರ್ಯಕರ್ತರು ಆಧಾರ್ ಸೆಂಟರ್‌ಗೆ ಭೇಟಿ ನೀಡಿ ಇನ್ನು ಮಕ್ಕಳ ಆಧಾರ್ ಕಾರ್ಡ್ ಗೆ ಉಚಿತವಾಗಿ ಮಾಡಿಕೊಡಬೇಕು ಸರ್ಕಾರದ ಆದೇಶದಂತೆ ಹಾಗೂ ಫೋನ್ ನಂಬರ್ ಬೇರೆ ಹಾಕಲು ಸರ್ಕಾರದ ಆದೇಶದಂತೆ 50 ರೂ ಗಳನ್ನು ಕೊಡಬೇಕು ಎಂದು ಹಾಗೂ ಜಿಎಸ್ ಟಿ ಬಿಲ್ ನಲ್ಲಿ ಹೇಗಿರುತ್ತದೋ ಅಷ್ಟು ತೆಗೆದುಕೊಳ್ಳಬೇಕೆಂದು ಎಚ್ಚರಿಕೆ ಕೊಟ್ಟು ಬಂದಿರುತ್ತವೆ..ಇದೇ ಸಮಯದಲ್ಲಿ ಆಧಾರ್ ಸೆಂಟರ್ ಗುತ್ತಿಗೆ ಆಧಾರದಲ್ಲಿ ನಡೆಸುತ್ತಿರುವ ಶರತ್ ರವರನ್ನು ಫೋನ್ ಮುಖಾಂತರ ಸಂಪರ್ಕಿಸಿ ಸಂಪೂರ್ಣ ಮಾಹಿತಿ ನೀಡುದ್ದೇವೆ .ಹಾಗೂ ಇನ್ನು ಮುಂದೆ ಹೀಗೆ ಆಗದಂತೆ ಅವರಿಗೆ ಎಚ್ಚರಿಕೆ ಕೊಟ್ಟಿದ್ದೇವೆ .ಹಾಗೂ ಅದೇ ಸೆಂಟರಿನ ಮುಂಭಾಗ ನಾಮಫಲಕ ಅಳವಡಿಸಬೇಕು ಹಾಗೂ ಗ್ರೀನ್ ಇಂಕ್ ಸೈನ್ ಮಾಡುತ್ತಿರುವವರಿಗೆ ಫೋನ್ ನಲ್ಲಿ ಸಂಪರ್ಕ ಮಾಡಿ ಇನ್ನು ಮುಂದೆ ಯಾರಿಗೂ ಹಣ ತೆಗೆದುಕೊಳ್ಳದಂತೆ ಫೋನ್ ನಲ್ಲಿ ತಿಳಿಸುತ್ತೇವೆ ಒಂದು ವೇಳೆ ಹಣ ತೆಗೆದುಕೊಂಡರೆ ಶಿವರಾಮೇಗೌಡರ ಕರವೇ ತಿಳಿದಲ್ಲಿ ನಿಮ್ಮ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿರುತ್ತೇವೆ. ಗ್ರೀನ್ ಇಂಕ್ ಸೈನ್ (ಗೆಜೆಟೆಡ್ ಅಧಿಕಾರಿಗಳು) ಮಾಡುವ ಅಧಿಕಾರಿಗಳಿಗೆ ಫೋನ್ ನಲ್ಲಿ ಸಂಪರ್ಕ ಮಾಡಿ ಇವರಿಗೂ ಸಹ ಎಚ್ಚರಿಕೆ ಕೊಟ್ಟಿದ್ದೇವೆ. ಹಾಗೂ ಪುಷ್ಪಾ ಜೆರಾಕ್ಸ್ ನವರು ಹೆಚ್ಚಿಗೆ ಹಣ ತೆಗೆದುಕೊಳ್ಳುವವರಿಗೆ ಎಚ್ಚರಿಕೆಯನ್ನು ಕರವೇ ಕಾರ್ಯಕತರು ಕೊಟ್ಟು ಬಂದಿರುತ್ತಾರೆ ..ಹಾಗೂ ಆಧಾರ್ ಕಾರ್ಡ್ ಸೆಂಟರ್ ನವರಿಗೆ ಹೆಚ್ಚಿನ ಹಣ ತೆಗೆದುಕೊಂಡು ಅವರಿಗೆ ಹಣವನ್ನು ವಾಪಸು ಕೊಡಬೇಕೆಂದು ಹಣ ಕೊಡುವಾಗ ಕರವೇ ಕಾರ್ಯಕರ್ತರಿಗೆ ತಿಳಿಸಿ ಕೊಡಬೇಕು ಎಂದು ಎಚ್ಚರಿಕೆ ಕೊಟ್ಟು ಬಂದಿರುತ್ತವೆ .ಇದಕ್ಕೆ ಆಧಾರ್ ಸೆಂಟರಿನವರು ಒಪ್ಪಿಕೊಂಡಿದ್ದಾರೆ .ಇನ್ನು ಮುಂದೆ ಸೋಮವಾರಪೇಟೆ ತಾಲ್ಲೂಕಿನಲ್ಲಿ ಆಧಾರ್ ಕಾರ್ಡ್ ಯಾವ್ದಾದ್ರೂ ಸೆಂಟರ್ ನಲ್ಲಿ ಹೀಗೆ ಹಣದ ಸುಲಿಗೆ ನಡೆಯುತ್ತಿದ್ದರೆ ಶಿವರಾಮೇಗೌಡರ ಕರವೇ ಕಾರ್ಯಕರ್ತರಿಗೆ ತಿಳಿಸಬಹುದು ..ಹಾಗೂ ಹಣ ಸುಲಿಗೆ ಮಾಡುತ್ತಿರುವ ಆಧಾರ್ ಸೆಂಟರ್ ಮೇಲೆ ಸಂಬAಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತರ ಆಗ್ರಹ . ಬಡವರ ಹತ್ತಿರ ಸುಲಿಗೆ ಮಾಡುತ್ತಿರುವ ಆಧಾರ್ ಕೇಂದ್ರದ ಮೇಲೆ ಸಂಬAಧಪಟ್ಟ ಅಧಿಕಾರಿಗಳು ಬೇಗನೆ ಕ್ರಮ ಕೈಗೊಳ್ಳಬೇಕು ಹಾಗೂ ಹಣದ ಸುಲಿಗೆ ಮಾಡುತ್ತಿರುವ ಪುಷ್ಪ ಜೆರಾಕ್ಸ್ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಗ್ರೀನ್ ಇಂಕ್ ಸೈನ್ (ಗೆಜೆಟೆಡ್ ಅಧಿಕಾರಿಗಳು) ಗೆ ಹಣ ತೆಗೆದುಕೊಳ್ಳುತ್ತಿರುವ ಅಧಿಕಾರಿಗಳ ಮೇಲೆ ಸಂಬAಧಪಟ್ಟ ಅಧಿಕಾರಿಗಳು ಇಂತಹ ಅಧಿಕಾರಿಗಳ ಮೇಲೆ ಹಾಗೂ ಆಧಾರ್ ಕಾರ್ಡಿಗೆ ಬಡವರ ಹಣ ಸುಲಿಗೆ ಮಾಡುತ್ತಿರುವ ಮೇಲೆ ಕ್ರಮ ಕೈಗೊಳ್ಳಬೇಕೆಂದು ಶಿವರಾಮೇಗೌಡರ ಕರವೇ ಕಾರ್ಯಕರ್ತರು ಮನವಿ ಮಾಡಿದರು ತಮ್ಮ ಮನವಿಗೆ ಸ್ಪಂದಿಸದೇ ಹೋದರೆ ಕರವೇ ಕಾರ್ಯಕರ್ತರು ಬಿ ಎಸ್ ಎನ್ ಎಲ್ ಆಧಾರ್ ಸೆಂಟರ್ ಮುಂದೆ ಹಾಗೂ ಗ್ರೀನ್ ಇಂಕ್ ಸೈನ್ (ಗೆಜೆಟೆಡ್ ಅಧಿಕಾರಿಗಳು)ಮಾಡುವ ಅಧಿಕಾರಿಗಳ ಕಚೇರಿಗಳ ಮುಂದೆ ಹಾಗೂ ಹೆಚ್ಚಿನ ಹಣ ವಸೂಲಿ ಮಾಡುವ ಪುಷ್ಪಾ ಜೆರಾಕ್ಸ್ ಅಂಗಡಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ತಿಳಿಸುತ್ತಿದ್ದೇವೆ ಎಂದು ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶಿವರಾಮೇಗೌಡರ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜಾ ಹಾಗೂ ರಾಮನಹಳ್ಳಿ ಪ್ರವೀಣ್ ಸೋಮವಾರಪೇಟೆ ತಾಲ್ಲೂಕು ಕಾರ್ಯದರ್ಶಿ ಹಾಗೂ ರಾಮನಹಳ್ಳಿ ಗ್ರಾಮ ಘಟಕದ ಅಧ್ಯಕ್ಷರಾದ ಹರೀಶ್ ಹಾಗೂ ರಕ್ಷಿತ್ .ಶರತ್. ರಮೇಶ್ . ಸಂದೀಪ್ ಇವರೆಲ್ಲರೂ ಭಾಗವಹಿಸಿದವು ..ಇನ್ನು ಸೋಮವಾರಪೇಟೆ ತಾಲ್ಲೂಕಿನಲ್ಲಿ ಯಾವುದಾದರೂ ಆಧಾರ್ ಕಾರ್ಡ್ ಸೆಂಟರ್‌ನಲ್ಲಿ ಇದೇ ರೀತಿ ಹಣದ ಸುಲಿಗೆ ಆಗುತ್ತಿದ್ದರೆ ಕರವೇ ಕಾರ್ಯಕರ್ತರು ಗೆ ತಿಳಿಸಬಹುದು

error: