December 22, 2024

Bhavana Tv

Its Your Channel

ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿರುವ ಅಂಬುಲೆನ್ಸ್ ಅನ್ನು ರೋಗಿಗಳ ಅವಶ್ಯಕತೆಗೆ ಸದುಪಯೋಗಪಡಿಸುವಂತೆ ಕರವೇ ಕಾರ್ಯಕರ್ತರ ಮನವಿ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ಶನಿವಾರಸಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಆಂಬುಲೆನ್ಸ್ ಅನ್ನು ರೋಗಿಗಳಿಗೆ ತೊಂದರೆ ಆಗಿದ್ದಲ್ಲಿ ಹೊರ ಜಿಲ್ಲೆಗೆ ಮತ್ತು ಹೆಚ್ಚಿನ ಚಿಕಿತ್ಸೆಗೆ ಬರುವ ವ್ಯಕ್ತಿಗಳಿಗೆ ಆಂಬುಲೆನ್ಸ್ ಸದುಪಯೋಗಪಡಿಸುವ ಬದಲು ೩ ತಿಂಗಳಿನಿAದ ರೂಮಿನಲ್ಲೇ ಈ ಆಂಬುಲೆನ್ಸ್ ಲಡ್ಡಾಗುವ ಸ್ಥಿತಿ ಬಂದಿರುತ್ತದೆ .. ೧ ತಿಂಗಳ ಹಿಂದೆ ರಾಮನಹಳ್ಳಿ ವ್ಯಕ್ತಿಯೊಬ್ಬರಿಗೆ ಗೋಪಾಲಪುರದಲ್ಲಿ ಅಪಘಾತವಾದಾಗ ಹೆಚ್ಚಿನ ಚಿಕಿತ್ಸೆಗೆ ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿದಾಗ ಇಲ್ಲಿ ಇವರಿಗೆ ಆಗೋದಿಲ್ಲ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಹೋಗಬೇಕು ಎಂದು ತಿಳಿಸಿದಾಗ ಸರ್ಕಾರಿ ಆಸ್ಪತ್ರೆಯಲ್ಲಿರುವ ಅಂಬುಲೆನ್ಸ್ ಕೇಳಿದಾಗ ಈ ಆಂಬ್ಯುಲೆನ್ಸ್ ಗೆ ಸರಕಾರದಿಂದ ಡೀಸೆಲ್ ಗೆ ಹಣ ಬರುತ್ತಿಲ್ಲ ಎಂದು ಶೆಡ್ಡಿನಲ್ಲಿ ನಿಲ್ಲಿಸಿ ಇರುತ್ತೇವೆಂದು ತಿಳಿಸಲಾಗಿರುತ್ತದೆ . ಇದರ ಬಗ್ಗೆ ಕರವೇ ಕಾರ್ಯಕರ್ತರ ಗಮನಕ್ಕೆ ಬಂದಾಗ ಡಿಹೆಚ್‌ಒ ಡಾ|| ವೆಂಕಟೇಶ್ ಅವರನ್ನು ಫೋನ್ ನಲ್ಲಿ ಸಂಪರ್ಕಿಸಿ ಶನಿವಾರಸಂತೆಯಲ್ಲಿ ಆಸ್ಪತ್ರೆಯಲ್ಲಿರುವ ಅಂಬುಲೆನ್ಸ್ ರೂಮಿನಲ್ಲಿ ನಿಂತು ೩ತಿಂಗಳು ಆಗಿರುತ್ತದೆ ನಿಮ್ಮ ಗಮನಕ್ಕೆ ಬಂದಿದ್ದೀಯಾ ಎಂದು ಕೇಳಿದಾಗ ನಮ್ಮ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಇದರಿಂದ ಕರವೇ ಕಾರ್ಯಕತರು ಅವರಲ್ಲಿ ಮನವಿ ಮಾಡಿ ಡೀಸೆಲ್ ಗೆ ಹಣ ಬೇಗ ಪಾವತಿ ಮಾಡಿ ಕೇಳಿಕೊಂಡಿದ್ದಾರೆ. ಆದರೂ ಇದುವರೆಗೂ ಇವತ್ತಿನವರೆಗೂ ಯಾವುದೇ ಕ್ರಮ ಆಗದೇ ಈ ಹೊಸ ಆಂಬ್ಯುಲೆನ್ಸ್ ರೂಂನಲ್ಲೇ ನಿಲ್ಲುವ ಸ್ಥಿತಿ ಬಂದಿದೆ ..ಇದರ ಬಗ್ಗೆ ಅಧಿಕಾರಿಗಳು ಜನಪ್ರತಿನಿದಿಗಳು ಬೇಗನೆ ಗಮನ ಹರಿಸಿ ಈ ಆಂಬ್ಯುಲೆನ್ಸ್ ಅನ್ನು ಸದುಪಯೋಗ ಪಡಿಸಿಕೊಡಬೇಕೆಂದು ಕರವೇ ಕಾರ್ಯಕರ್ತರ ಮನವಿ ಮಾಡಿದ್ದಾರೆ.

error: