December 21, 2024

Bhavana Tv

Its Your Channel

ಗೋಪಾಲಪುರದ ಸಂತ ಅಂತೋಣಿ ಚರ್ಚ್ ನಲ್ಲಿ ಗುಡ್ ಫ್ರೈಡೆ ಶ್ರದ್ಧಾಭಕ್ತಿಯಿಂದ ಆಚರಣೆ

ಕೊಡಗು:-ಗೋಪಾಲಪುರದ ಸಂತ ಅಂತೋಣಿ ಚರ್ಚ್ ನಲ್ಲಿ ಗುಡ್ ಫ್ರೈಡೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು .ಇದೇ ಸಮಯದಲ್ಲಿ ಶಿಲುಬೆ ಹಾದಿಯ ಜೀವಂತ ದೃಶ್ಯ ರೂಪಕ ನಡೆಸಲಾಯಿತು…

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ಗೋಪಾಲಪುರ ಸಂತ ಅಂತೋಣಿ ಚರ್ಚ್ ನಲ್ಲಿ ಗುಡ್ ಫ್ರೈಡೆ (ಶುಭ ಶುಕ್ರವಾರ ) ಅಂಗವಾಗಿ ಕ್ರೈಸ್ತ ಭಕ್ತರು ಉಪವಾಸ ವೃತ ಅಂತ ಹಿಡಿದು ಶ್ರದ್ಧಾ ಭಕ್ತಿಯಿಂದ ಗೋಪಾಲಪುರದ ಚರ್ಚ್ ಬಂದು ಗೋಪಾಲಪುರ ಚರ್ಚ್ ನ ಹಿಂದೆ ಇರುವ ಶಿಲುಬೆ ಬೆಟ್ಟದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು ಈ ಸಮಯದಲ್ಲಿ ಫಾದರ್ ಜಾಕಬ್ ಕೊಳನೂರು ರವರು ಪ್ರಾರ್ಥನೆಯ ವಿಧಿ ವಿಧಾನಗಳು ಸಲ್ಲಿಸಿದರು ಇದೇ ಸಂದರ್ಭದಲ್ಲಿ ಗೋಪಾಲಪುರ ಚರ್ಚ್ ನ ಯುವ ತಂಡದಿAದ ಶಿಲುಬೆಯ ಹಾದಿಯಲ್ಲಿ ಯೇಸು ಅನುಭವಿಸಿದ ಯಾತನೆ ಹಾಗೂ ಪಾಡು ಮರಣ ಬಗ್ಗೆ ನೈಜತೆಯಿಂದ ದೃಶ್ಯ ವೃತ್ತಾಂತವನ್ನು ಅಭಿನಯಿಸಿ ಭಕ್ತಾದಿಗಳ
ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು . ಈ ಸಂದರ್ಭದಲ್ಲಿ ಚರ್ಚ್ ನ ಫಾದರ್ ಜಾಕಬ್ ಕೊಳನೂರು ಎಲ್ಲರಿಗೂ ಆಶೀರ್ವಚನ ನೀಡಿದರು . ಈ ಶಿಲುಬೆಯ ಹಾದಿಯ ಪ್ರಾರ್ಥನೆಯಲ್ಲಿ ಭಕ್ತಾದಿಗಳು ಪ್ರಾರ್ಥನೆ ಸಲ್ಲಿಸಿದರು.

error: