April 26, 2024

Bhavana Tv

Its Your Channel

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ವಿಶೇಷ ರಂಗತರಬೇತಿ ಶಿಬಿರ

ಮಂಡ್ಯ: ಲೋಕಾಯನ ಕಲ್ಚರಲ್ ಫೌಂಡೇಶನ್ ನಮ್ಮ ದೇಶದ ೭೫ನೇ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ವಿಶೇಷ ರಂಗತರಬೇತಿ ಶಿಬಿರವನ್ನು ಆರಂಭಿಸಿದೆ.

ಲೋಕಾಯನ ಕಲ್ಚರಲ್ ಫೌಂಡೇಶನ್ ಕಳೆದ ಹತ್ತು ವರ್ಷಗಳಿಂದ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಶಾಲಾಮಕ್ಕಳಿಗಾಗಿ ಬೇಸಿಗೆ ರಜೆ ಸಂದರ್ಭದಲ್ಲಿ ರಂಗ ಚಟುವಟಿಕೆಗಳು, ರಂಗ ತರಬೇತಿ ಶಿಬಿರಗಳು ಸೇರಿದಂತೆ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ. ಕಳೆದ ಎರಡು ವರ್ಷಗಳಿಂದ ಇಡಿ ವಿಶ್ವವನ್ನೇ ಕಾಡಿದ ಕರೋನಾ ರೋಗದ ಕಾರಣ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳನ್ನು ಲೋಕಾಯನ ನಡೆಸಲು ಸಾಧ್ಯವಾಗಲಿಲ್ಲ. ಈಗ ಕೊರೋನಾ ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಹಾಗೂ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಬಂದು ಎಪ್ಪತ್ತೈದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ರಂಗತರಬೇತಿ ಶಿಬಿರವನ್ನು ಜುಲೈ ೨೦ ರಿಂದ ಕೆ.ಆರ್.ಪೇಟೆ
ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಶ್ರೀ ಕಮಲ ಚಂದ್ರಶೇಖರ್ ವಾಣಿಜ್ಯ ಸಂಕೀರ್ಣದ ಮೂರನೇ ಮಹಡಿಯಲ್ಲಿ ಆರಂಭಿಸಲಾಗಿದೆ .

ಕೃಷ್ಣರಾಜಪೇಟೆ ಪಟ್ಟಣದ ಸುತ್ತಮುತ್ತ ಇರುವ ಹಳ್ಳಿಗಳಿಂದ ಅನೇಕ ರಂಗ ಆಸಕ್ತರು ಹಾಗೂ ವಿದ್ಯಾರ್ಥಿಗಳು ಈ ವಿಶೇಷ ಶಿಬಿರಕ್ಕೆ ಸೇರಿದ್ದಾರೆ . ಈ ಶಿಬಿರದ ನಿರ್ದೇಶಕರಾಗಿ ರಂಗಾಯಣದಲ್ಲಿ ತರಬೇತಿ ಪಡೆದಿರುವ ಅರುಣ್ ಕುಮಾರ್ ಹರಪನಹಳ್ಳಿ ,ಹಾಗೂ ಸಾಣೆಹಳ್ಳಿ ರಂಗಶಿಕ್ಷಣ ಪಡೆದಿರುವ ಶಾಮಲಾ ರವರು ಕಾರ್ಯನಿರ್ವಹಿಸುತ್ತಿದ್ದಾರೆ. . ಈ ಶಿಬಿರದಲ್ಲಿ ಹದಿನೈದಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ರಂಗಾಸಕ್ತರು ಬಂದು ನಾಟಕ ಕಲಿಯುತ್ತಿದ್ದಾರೆ.

ಈ ವರ್ಷ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕಿ ಎಪ್ಪತ್ತೈದು ವರ್ಷ ಕಳೆದಿದೆ . ಈ ವರ್ಷ ವಿಶೇಷವಾದ ಸ್ವಾತಂತ್ರ‍್ಯ ದಿನಾಚರಣೆಯಾಗಿದೆ. ಈ ಶಿಬಿರದಲ್ಲಿ ನಮ್ಮ ದೇಶದ ಸ್ವಾತಂತ್ರ‍್ಯಕ್ಕಾಗಿ ನಮ್ಮ ರಾಜ್ಯದಲ್ಲಿ ನಡೆದ ಹೋರಾಟದ ಕೆಲವು ಘಟನೆಗಳು ಹಾಗೂ ಸ್ವಾತಂತ್ರ‍್ಯ ಯೋಧರ ತ್ಯಾಗ ಬಲಿದಾನಗಳನ್ನು ಬಿಂಬಿಸುವ ನಾಟಕವನ್ನು ಪ್ರದರ್ಶಿಸಲು ಸಿದ್ಧವಾಗುತ್ತಿದೆ. ಶಿವಪುರ ಧ್ವಜ ಸತ್ಯಾಗ್ರಹ, ಅಂಕೋಲ ಉಪ್ಪಿನಸತ್ಯಾಗ್ರಹ, ಹಲಗಲಿ ಬೇಡರ ದಂಗೆ,ಈಸೂರಿನ ಸ್ವತಂತ್ರ ಹೋರಾಟ,
ವಿದುರಾಶ್ವತ್ಥ ಹತ್ಯಾಕಾಂಡ ಮುಂತಾದ ಘಟನೆಗಳನ್ನು ಆಧರಿಸಿ ನಾಟಕ ಸಿದ್ಧವಾಗಲಿದೆ.
ಈ ನಾಟಕವನ್ನು ಬರುವ ಆಗಸ್ಟ್ ೧೪ ಮತ್ತು ೧೫ ರಂದು ಕೆ.ಆರ್.ಪೇಟೆ ಮತ್ತು ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಪ್ರದರ್ಶಿಸಲಾಗುತ್ತದೆ.ಶಿಬಿರದ ಸಂಚಾಲಕರಾಗಿ ಅಭಿನಂದನ್,ಹೇಮoತ್ ಮತ್ತು ಮಹಮದ್ ಅಜರುದ್ದೀನ್ ಕಾರ್ಯನಿರ್ವಹಿಸುತ್ತಿದ್ದಾರೆ.
ಶಿಬಿರದ ನಿರ್ವಹಣೆಯನ್ನು ಲೋಕಾಯನ ಸಂಸ್ಥೆಯ ಶಶಿಧರ ಭಾರಿಘಾಟ್ ಮಾಡುತ್ತಿದ್ದಾರೆ.

ವರದಿ:- ಮೊಹಮ್ಮದ್ ಅಜರುದ್ದೀನ್ ಅಕ್ಕಿಹೆಬ್ಬಾಳು

error: