May 4, 2024

Bhavana Tv

Its Your Channel

ಕಾರು ಚಾಲಕರ ಹಾಗೂ ಮಾಲಿಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಸರಳವಾಗಿ ಆಚರಣೆ

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದಲ್ಲಿ ಚನ್ನರಾಯಪಟ್ಟಣ ಸ್ಟಾಂಡ್‌ನಾ ಕಾರು ಚಾಲಕರ ಹಾಗೂ ಮಾಲಿಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವನ್ನು ಸರಳವಾಗಿ ಆಚರಣೆ ಮಾಡಲಾಯಿತು

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷ ಕೆ ಎಸ್ ಪ್ರಭಾಕರ್ ರವರು ಕನ್ನಡಾಂಬೆಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಕನ್ನಡದ ದ್ವಜ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..

ಬಳಿಕ ಮನ್ಮುಲ್ ನಿರ್ದೇಶಕ ಕೆ ಜಿ ತಮ್ಮಣ್ಣ ಮಾತನಾಡಿ ನಾಡು-ನುಡಿ ಉಳಿವಿಗೆ ಆಟೋ ಚಾಲಕರ ಪಾತ್ರ ಅಪಾರವಾಗಿದೆ. ಕನ್ನಡ ರಾಜ್ಯೋತ್ಸವನ್ನು ಯಾವುದೇ ಭೇದ ವಿಲ್ಲದೆ ಎಲ್ಲಾರೂ ಒಗ್ಗೂಡಿಸಿಕೊಂಡು ಆಚರಣೆ ಮಾಡಬೇಕು.
ಕನ್ನಡ ಭಾಷೆಯ ಬಗ್ಗೆ ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು. ೮ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುನ ಕನ್ನಡ ಭಾಷೆಯು ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಕನ್ನಡ ಭಾಷೆಯು ಸೂರ್ಯ-ಚಂದ್ರರು ಇರುವವರೆವಿಗೂ ಜೀವಂತವಿರುವ ಭಾಷೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಶ್ರಮಿಸಬೇಕು. ಕನ್ನಡ ಪುಸ್ತಕಗಳನ್ನು ಹಾಗೂ ಪತ್ರಿಕೆಗಳನ್ನು ಕೊಂಡು ಓದಬೇಕು ಎಂದರು…

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷರಾದ ಕೆ ಎಸ್ ಪ್ರಭಾಕರ್, ಮನ್ಮುಲ್ ನಿರ್ದೇಶಕ ಕೆ ಜಿ ತಮ್ಮಣ್ಣ, ಕಿಕ್ಕೇರಿ ಪೋಲೀಸ್ ಠಾಣೆಯ ಎ.ಎಸ್.ಐ ಗುರುಬಸವಯ್ಯ, ಎ.ಪಿ.ಎಂ.ಸಿ ನಿರ್ದೇಶಕ ಮಹೇಶ್ವರಿ ನರಸೇಗೌಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶೆಟ್ಟಹಳ್ಳಿ ಕೃಷ್ಣೇಗೌಡ, ಮುಖಂಡರಾದ ಸರೇಶ್, ಚನ್ನರಾಯಪಟ್ಟಣ ಸ್ಟಾಂಡ್ ನಾ ಕಾರು ಚಾಲಕರು ಮತ್ತು ಮಾಲಿಕರ ಸಂಘದ ಅದ್ಯಕ್ಷರು ಸದಸ್ಯರುಗಳು ಇದ್ದರು.

ವರದಿ:ಶಂಭು ಕಿಕ್ಕೇರಿ

error: