May 18, 2024

Bhavana Tv

Its Your Channel

ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ವಿವಿಧ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಕೆ ವಿ ಶಂಕರೇಗೌಡ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಬದುಕು ಬೆಳಕು ಸೇವಸಮಿತಿ ನಿವೃತ್ತ ಶಿಕ್ಷಕ ಕೆ ಮಾಹಿಗಶೆಟ್ಟಿ ಸೇವಾ ಸಮಿತಿ ಇವರ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಮತ್ತು ೬೬ನೇ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ೨೭ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಭಾಗವಹಿಸಿದ ಎಲ್ಲರಿಗೂ ಪುರಸ್ಕಾರ ಮತ್ತು ವಿವಿಧ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಚ್ಚರ ಅರವಿಂದ್ ಕನ್ನಡಿಗರಾದ ನಾವು ನಿತ್ಯ ಕನ್ನಡ ಭಾಷೆಯಲ್ಲಿ ವ್ಯವಹರಿಸಿದರೆ ಮಾತೃಭಾಷೆ ಉಳಿಯುವ ಜೊತೆಗೆ ಮುಂದಿನ ಪೀಳಿಗೆಗೆ ಕೊಂಡೊಯ್ಯಬಹುದು ಎಂದು ಹೇಳಿದರು

ಕನ್ನಡದ ಭಾಷೆ ನೆಲ-ಜಲದ ಬಗ್ಗೆ ವಿದ್ಯಾರ್ಥಿಗಳಿಗೆ ಅಭಿಮಾನ ಹಾಗೂ ಅಗತ್ಯತೆ ಶಿಕ್ಷಕರು ಮನವರಿಕೆ ಮಾಡಿಕೊಡುವ ಜೊತೆಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದರು ಬಳಿಕ ಭುವನೇಶ್ವರಿ ನೆಹರು ಅಂಬೇಡ್ಕರ್ ಹಾಗೂ ಜವಾಹರ್ ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿಎಚ್ ಕಾಳಿರಯ್ಯ ಶಾಲೆಗಳಲ್ಲಿ ಮಕ್ಕಳಿಗೆ ಮಾತೃಭಾಷೆ ಅಗತ್ಯತೆ ಸಂವಿಧಾನದ ಮಹತ್ವ ಶಿಕ್ಷಣದ ಮಾನ್ಯತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿದರೆ ಆದರ್ಶ ವ್ಯಕ್ತಿತ್ವ ಮೂಡಿಸಬಹುದು ಎಂದರು

ನಂತರ ಪಿ ಇಎಸ್ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಯೋಗೇಶ್ ಸಂವಿಧಾನ ದಿನದ ಮಹತ್ವದ ಕುರಿತು ಮಾತನಾಡಿದರು ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಪತ್ರಕರ್ತ ಹಾಗೂ ನಿವೃತ್ತ ಶಿಕ್ಷಕ ಮಾಯಿಗ ಶೆಟ್ಟಿ ಸೇವಾ ಸಮಿತಿ ಅಧ್ಯಕ್ಷ ಲೋಕೇಶ ಮಾತನಾಡಿ ಸಂವಿಧಾನ ದಿನಾಚರಣೆ ೬೬ನೇ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಶುಭಾಶಯಗಳು ತಿಳಿಸಿ ಇಂತಹ ಕಾರ್ಯಕ್ರಮಗಳನ್ನು ಪ್ರೇರಣಿ ಸುತ್ತಿರುವ ಅಂತದ್ದು ಯಾವುದೇ ರಾಜಕೀಯ ಅಥವಾ ಯಾವುದೇ ಉದ್ದೇಶಕ್ಕಾಗಿ ಮಾಡುತ್ತಿಲ್ಲ ಸಮಾಜದಲ್ಲಿ ಇಂದಿನ ಮಕ್ಕಳೇ ಮುಂದಿನ ಪ್ರಜೆ ಆ ನಿಟ್ಟಿನಲ್ಲಿ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಿದರೆ ಬೇರೆ ಮಕ್ಕಳು ಅವರಂತಾಗಲು ಎಂದು ಇಂಥ ಕಾರ್ಯಕ್ರಮಗಳು ರೂಪಿಸುತ್ತಿದ್ದು ಎಲ್ಲರಿಗೂ ಶುಭವಾಗಲಿಎಂದರು ಬಳಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು ಗಾಯಕ ಶಂಕರನAದ ಸ್ವಾಮಿ ಅವರಿಗೆ ಸಾಧಕ ಪ್ರಶಸ್ತಿ ನೀಡಲಾಯಿತು ನಂತರ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಮತ್ತು ನೆನಪಿನ ಕಾಣಿಕೆ ಅಭಿನಂದನಾ ಪತ್ರ ವಿತರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಕೆ ವಿ ಎಸ್ ಶಾಲೆಯ ಗೌರವಾಧ್ಯಕ್ಷರಾದ ಕೆಪಿ ವೀರಪ್ಪ ವಹಿಸಿದರು ಕಾರ್ಯಕ್ರಮದಲ್ಲಿ ಲೋಕೇಶ್ ಕೆ ವಿ ಎಸ್ ಶಾಲೆಯ ವೀರೇಶ್ ನಾಗೇಂದ್ರ ಕನ್ನಡ ಭಾಷಾ ಶಿಕ್ಷಕ ಶಶಿಧರ ಈಚಿಕೆರೆ ರಾಜೇಂದ್ರ ಭಾಸ್ಕರ ಶಿಕ್ಷಣಾಧಿಕಾರಿಗಳಾದ ಡಿಟಿ ಸ್ವಾಮಿ ನಾಗೇಂದ್ರ ಎಸ್ಡಿಎಂಸಿ ಅಧ್ಯಕ್ಷ ಸೋಮಶೇಖರ್ ಶಿಲ್ಪಾ ಚಂದ್ರಶೇಖರ್ ಆನಂದ್ ಮುಖ್ಯಶಿಕ್ಷಕಿ ಶೋಭಾ ಶಿಕ್ಷಕರು ವಿದ್ಯಾರ್ಥಿಗಳು ಎಲ್ಲಾ ಎಸ್ ಡಿ ಎಂಸಿ ಮತ್ತು ಆಡಳಿತ ಮಂಡಳಿ ಸದಸ್ಯರುಗಳು ಭಾಗವಹಿಸಿದ್ದರು

ವರದಿ:ಲೋಕೇಶ ಮಳವಳ್ಳಿ

error: