April 27, 2024

Bhavana Tv

Its Your Channel

ಹಾಲು ಬೇಡ ಆಹಾರ ಪದಾರ್ಥ ನೀಡಿ ಬಸವೇಶ್ವರ ಗ್ರಾಮಸ್ಥರ ಅಳಲು.

ನಾಗಮಂಗಲ ತಾಲ್ಲೂಕು ಕಸಬಾ ಹೋಬಳಿ ಕಾಂತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಗ್ರಾಮದಲ್ಲಿ ಸುಮಾರು 100 ಕುಟುಂಬಗಳು ಬೋವಿ ಜನಾಂಗದವರು ವಾಸವಾಗಿದ್ದು ಇವರ ಕುಲಕಸುಬು ಬಂಡೆ ಕೆಲಸ ಮಾಡುತ್ತಾರೆ ಇಲ್ಲಿನ ಮಹಿಳೆಯರು ಮತ್ತು ಪುರುಷರು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ ಕರೋನ ವೈರಸ್ ದೇಶ ಮತ್ತು ರಾಜ್ಯದೆಲ್ಲೆಡೆ ಹರಡಿರುವುದು ಸರಿಯಷ್ಟೇ ಆದರೆ ಕರೋನಾ ವೈರಸ್ ನಾಗಮಂಗಲ ಅತಿಸೂಕ್ಷ್ಮ ಪ್ರದೇಶವಾಗಿ ಪರಿಗಣಿಸಲಾಗಿದೆ

ಕರೋನ ವೈರಸ್ ರಾಜ್ಯದೆಲ್ಲೆಡೆಯ ಹರಡಿದ ಹಿನ್ನೆಲೆ ನಾಗಮಂಗಲ ತಾಲ್ಲೂಕು ಆಡಳಿತ ಬಂಡೆ ಕೆಲಸಕ್ಕೂ ಕೂಡ ಕಡಿವಾಣ ಹಾಕಿತ್ತು ಕೂಲಿ ಕೆಲಸ ಮಾಡುತ್ತಿದ್ದ ಜನತೆಗೆ ತಮ್ಮ ನಿತ್ಯ ಜೀವನ ನಡೆಸಲು ಕಷ್ಟಕರವಾಗಿದೆ ಕಳೆದ 15 ದಿನಗಳಿಂದ ಮನೆಯಲ್ಲೆ ಕುಳಿತು ಕಾಲಕಳೆಯುತ್ತಿದ್ದಾರೆ ತಮ್ಮಲ್ಲಿ ಇದ್ದಂತಹ ಅಲ್ಪಸ್ವಲ್ಪ ಅಹಾರದಲ್ಲಿ ಜೀವನ ನಡೆಸುತ್ತಿದ್ದ ಜನತೆಗೆ ಮುಂದಿನ ದಾರಿ ಕಾಣದಾಗಿದೆ

ಬಸವೇಶ್ವರ ಗ್ರಾಮದ ಜನತೆಗೆ ಆಹಾರ ಕೊರತೆ ಉಂಟಾಗಿ ಅಲ್ಲಿ ಇಲ್ಲಿ ಬೇಡಿ ತಿನ್ನುವ ಪರಿಸ್ಥಿತಿ ಬಂದೊದಗಿದೆ ಇನ್ನು ಆಹಾರ ಪಡಿತರ ದಿನಿಸಿ ಪಡೆಯಲು ಪಟ್ಟಣಕ್ಕೆ ಬಂದರೆ ಪಟ್ಟಣ ಕೂಡ ಅತಿಸೂಕ್ಷ್ಮ ಪ್ರದೇಶವಾಗಿರುವುದರಿಂದ ವಿತರಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಸುಮಾರು 100 ಕುಟುಂಬಗಳು ವಾಸವಿದ್ದು 200 ಆಹಾರ ಪಡಿತರ ಫಲಾನುಭವಿಗಳಿದ್ದು ಆಹಾರ ಪಡೆಯಲು ಸಾಧ್ಯವಾಗಿಲ್ಲ ದಯಮಾಡಿ ನಮಗೆ ಆಹಾರ ಒದಗಿಸಬೇಕೆಂದು ಬಸವೇಶ್ವರನಗರ ಗ್ರಾಮಸ್ಥರು ಆಗ್ರಹಿಸಿದ್ದಾರೆ

ಕರೋನ ವೈರಸ್ ಹರಡಿದ ಹಿನ್ನೆಲೆ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ನಮ್ಮಂತ ಬಡಜನತೆಗೆ ತಲುಪುವುದು ಕಷ್ಟಕರವಾಗಿದೆ ಇನ್ನಾದರೂ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ನಮ್ಮ ಗ್ರಾಮಕ್ಕೆ ಹಾಲು ವಿತರಣೆ ಮಾಡದಿದ್ದರೂ ಪರವಾಗಿಲ್ಲ ದಯಮಾಡಿ ಜೀವನ ನಡೆಸಲು ಆಹಾರಪದಾರ್ಥಗಳನ್ನು ಒದಗಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.

ವರದಿ: ದೇರಾಜಗದೀಶ ನಾಗಮಂಗಲ

error: