ಮಂಡ್ಯ ಜಿಲ್ಲೆಯಲ್ಲಿ ಇಲ್ಲಿವರೆಗೂ ಕೊರೊನಾ ಭೀತಿ ಇಲ್ಲ ಎಂದು ಜನರು ನಿಟ್ಟುಸಿರು ಬಿಟ್ಟಿದ್ದ ಜಿಲ್ಲೆಯ ಜನತೆಗೆ ಹಾಗೂ ಅದಕ್ಕಿಂತ ಹೆಚ್ಚಾಗಿ ನಾಗಮಂಗಲದ ಜನತೆಗೆ ಜಿಲ್ಲಾಧಿಕಾರಿ ಗಳ ಹೇಳಿಕೆಯಿಂದ ಸಾರ್ವಜನಿಕರ ಮನಸ್ಸಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ದೆಹಲಿಯ ವಿವಿಧ ಭಾಗಗಳ 10 ಧರ್ಮ ಗುರುಗಳು ನಿಜಾಮುದ್ದಿನ್ ಸಭೆಯನ್ನು ಮುಗಿಸಿಕೊಂಡು ಜ.27 ರಂದು ದೆಹಲಿಯಿಂದ ಹೊರಟು ಜ.29 ರಂದು ಮೈಸೂರಿಗೆ ತಲುಪಿ ಮೈಸೂರಿನ ವಿವಿಧ ಮಸೀದಿಗಳಲ್ಲಿ 40 ದಿನಗಳ ಕಾಲ ಧರ್ಮ ಪ್ರಚಾರ ಮಾಡಿ ನಂತರ ಮಾ.13 ರಿಂದ 20 ವರೆಗೆ ನಾಗಮಂಗಲದಲ್ಲಿ ಪ್ರಚಾರ ಮಾಡಿ ನಂತರ ಅಲ್ಲಿಂದ ಮಾ.20 ರಿಂದ 29 ವರೆಗೆ ಮಳವಳ್ಳಿಯಲ್ಲಿ ಪ್ರಚಾರ ಮಾಡಲು ತೆರಳಿದ್ದರು.
ಆದರೆ ಅಷ್ಟರಲ್ಲಿ ಜಿಲ್ಲೆಯಲ್ಲಿ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಪ್ರಚಾರ ನಡೆಸದೆ ದರ್ಗಾದ ಪಕ್ಕದ ಮನೆಯಲ್ಲಿ ವಾಸ್ತವ್ಯ ಮಾಡಿದ್ದಾರೆ ನಂತರ ಅಲ್ಲಿಂದ ಮಾ.29 ರಂದು ಮೈಸೂರಿಗೆ ತೆರಳುತ್ತಿದ್ದ ಇವರನ್ನು ಮೈಸೂರು ಜಿಲ್ಲಾ ಗಡಿ ಭಾಗ ಬನ್ನೂರು ಬಳಿ ಇವರನ್ನು ಪೋಲೀಸರು ವಶಕ್ಕೆ ಪಡೆದಿದ್ದು, ಇನ್ನು ಈ 10 ಮಂದಿ ಶಂಕಿತ ವ್ಯಕ್ತಿಗಳನ್ನು ಮೈಸೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ನಲ್ಲಿ ಇಡಲಾಗಿದೆ ಎಂದು ತಿಳಿಸಿದರು.
ಮುಸ್ಲಿಂ ಧರ್ಮಗುರುಗಳ ಸಂಪರ್ಕದಲ್ಲಿದ್ದ
ಮಳವಳ್ಳಿಯ 25, ನಾಗಮಂಗಲದ 24, ಜನರನ್ನ ಐಸೋಲೇಷನ್ ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.
ಮುಸ್ಲಿಂ ಧರ್ಮಗುರುಗಳು
ಮಾರ್ಚ್ 13 ರಿಂದ 20 ರವರಿಗೆ ನಾಗಮಂಗಲ ದಲ್ಲಿರುವ ಕೆಲವು ಮಸೀದಿಗಳಿಗೆ ಭೇಟಿ ನೀಡಿದ್ದು. ಹನೀಫ್ ಮೋಹಲ, ಮಂಡ್ಯ ರೋಡ್ ಹಾಗೂ ಮುರಾದ್ ನಗರ ಟಿ.ಬಿ ಬಡಾವಣೆ ತಾಲೂಕು ಪಂಚಾಯಿತಿ ಹಿಂಭಾಗದ ಮಸೀದಿಗಳಲ್ಲಿ ಉಳಿದುಕೊಂಡು. ಕೆಲವು ಮುಸ್ಲಿಂ ಮುಖಂಡರ ಮನೆಗಳಿಗೆ ಭೇಟಿ ನೀಡಿ ಜೊತೆಗೆ ಮುಸ್ಲಿಂ ಮುಖಂಡರುಗಳ ಜೊತೆ ಧಾರ್ಮಿಕ ಸಭೆಗಳನ್ನು ನಡೆಸಿದ್ದಾರೆಂದು ತಿಳಿದುಬಂದಿದ್ದು.
10 ಜನ ಧರ್ಮಗುರುಗಳ ಪೈಕಿ 5 ಜನರಿಗೆ ಕೊರೊನಾ ಸೋಂಕು ಇರುವುದು ಮೈಸೂರು ಜಿಲ್ಲಾ ಆಡಳಿತ ವತಿಯಿಂದ ದೃಢ ಪಟ್ಟಿರುವುದು ತಿಳಿದು ಬಂದಿದ್ದರಿಂದ. ಧರ್ಮಗುರುಗಳ ಜೊತೆ ನೇರವಾಗಿ ಸಂಪರ್ಕದಲ್ಲಿದ್ದ ಮಳವಳ್ಳಿಯ 7 ಜನ ಹಾಗೂ ನಾಗಮಂಗಲದ 5 ಜನರ ರಕ್ತದ ಮಾದರಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು ಎಂದು ತಿಳಿದುಬಂದಿದ್ದು. ನಾಗಮಂಗಲ ತಾಲ್ಲೂಕಿನ ಜನರ ಮನಸ್ಸಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಮುಸ್ಲಿಂ ಧರ್ಮ ಗುರುಗಳು ಪ್ರವಾಸದ ಸಮಯದಲ್ಲಿ ನಾಗಮಂಗಲ ತಾಲ್ಲೂಕಿನ ಕೆಲವು ಮಸೀದಿಗಳಿಗೆ ಹಾಗೂ ಕೆಲವು ಮುಸ್ಲಿಂ ಮುಖಂಡರ ಮನೆಗಳಿಗೆ ಬೇಟಿ ನೀಡಿರುವ ಹಿನ್ನೆಲೆಯಲ್ಲಿ. ಕೊರೊನಾ ಸೋಂಕು ಸಮುದಾಯದಲ್ಲಿ ಹರಡದಂತೆ. ಹೆಚ್ಚಿನ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಅಗತ್ಯ ಇರುವುದರಿಂದ. ಅಗತ್ಯ ಸೇವೆ ಹೊರತುಪಡಿಸಿ ಉಳಿದಂತೆ ವ್ಯಕ್ತಿ ಮತ್ತು ವಾಹನಗಳ ಚಲನವನ್ನು ನಿರ್ಬಂಧಿಸಿ ಮಾನ್ಯ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸುತ್ತಾರೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನಾಗಮಂಗಲ ತಾಲ್ಲೂಕು ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಲಾಗಿದೆ.
ತಾಲ್ಲೂಕು ಆಡಳಿತವು ಕೊರೊನಾ ವೈರಸ್ ಹರಡದಂತೆ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು ತಾಲ್ಲೂಕಿನ ಜನರು ಆತಂಕಪಡುವುದು ಬೇಡ. ಸಾರ್ವಜನಿಕರು ಸಾರ್ವಜನಿಕ ಪ್ರದೇಶಗಳಲ್ಲಿ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳಬೇಕು. ನೀವು ವಾಸವಿರುವ ಸುತ್ತಮುತ್ತಲ ಪ್ರದೇಶವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದೆ. ಹಾಗು ಅನಗತ್ಯವಾಗಿ ಹೊರಗಡೆ ಸುತ್ತಾಡುವುದನ್ನು ಬಿಡಬೇಕು ಎಂದು ಮನವಿ ಮಾಡಿದ್ದಾರೆ.
ವರದಿ: ದೇ.ರಾ.ಜಗದೀಶ ನಾಗಮಂಗಲ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ