10 ಜನ ಧರ್ಮಗುರುಗಳ ಪೈಕಿ 5 ಜನರಿಗೆ ಕೊರೊನಾ ಸೋಂಕು ಇರುವುದು ಮೈಸೂರು ಜಿಲ್ಲಾ ಆಡಳಿತ ವತಿಯಿಂದ ದೃಢ ಪಟ್ಟಿರುವುದು ತಿಳಿದು ಬಂದಿದ್ದರಿಂದ. ಧರ್ಮಗುರುಗಳ ಜೊತೆ ನೇರವಾಗಿ ಸಂಪರ್ಕದಲ್ಲಿದ್ದ ಮಳವಳ್ಳಿಯ 7 ಜನ ಹಾಗೂ ನಾಗಮಂಗಲದ 5 ಜನರ ರಕ್ತದ ಮಾದರಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು. ಮಳವಳ್ಳಿಯ ಮೂವರು ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೊಡ್ಡ ಪಟ್ಟಿರುವುದು ತಿಳಿದುಬಂದಿದ್ದು.
ನಾಗಮಂಗಲ ಪುರಸಭಾ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹೊಂದಿರುವ ವ್ಯಕ್ತಿಗಳು ವಾಸ್ತವ್ಯವಿದ್ದು ಸಂಚರಿಸಿದರೆ ಎಂಬ ಹಿನ್ನೆಲೆಯಲ್ಲಿ ಸದರಿ ವ್ಯಕ್ತಿಗಳು ಸಂಪರ್ಕಕ್ಕೆ ಹಲವರು ಬಂದಿರಬಹುದಾಗಿದು. ಮುನ್ನೆಚ್ಚರಿಕೆ ಕ್ರಮವಾಗಿ. ನಾಗಮಂಗಲ ಪುರಸಭೆಯ ವಾರ್ಡ್ ಸಂಖ್ಯೆ12, 14, 15, 16 ರ ಪೂರ್ಣ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂಬುದಾಗಿ ಹಾಗೂ ಈ ಪ್ರದೇಶದಲ್ಲಿ ಪರಿಮಿತಿಯಿಂದ 3 ಕಿ.ಮೀ. ಸುತ್ತಳತೆ ವ್ಯಾಪ್ತಿಯ ಪ್ರದೇಶವನ್ನು ಬಫೋರ್ ಝೋನ್ ಎಂಬುದಾಗಿ
ಘೋಷಿಸಿದರು.
ಮುಸ್ಲಿಂ ಧರ್ಮ ಗುರುಗಳು ಪ್ರವಾಸದ ಸಮಯದಲ್ಲಿ ನಾಗಮಂಗಲ ತಾಲ್ಲೂಕಿನ ಕೆಲವು ಮಸೀದಿಗಳಿಗೆ ಹಾಗೂ ಕೆಲವು ಮುಸ್ಲಿಂ ಮುಖಂಡರ ಮನೆಗಳಿಗೆ ಬೇಟಿ ನೀಡಿರುವ ಹಿನ್ನೆಲೆಯಲ್ಲಿ. ಕೊರೊನಾ ಸೋಂಕು ಸಮುದಾಯದಲ್ಲಿ ಹರಡದಂತೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನಾಗಮಂಗಲ ತಾಲ್ಲೂಕು ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಲಾಗಿದೆ ಎಂದು ತಿಳಿಸಿದರು.
ನಾಗಮಂಗಲ ಟೌನ್ ಕೋವಿಡ್19 ಸಮೀಕ್ಷೆ ಮಾಡಲು 25 ತಂಡವನ್ನು ಮಾಡಿದ್ದು. ಪ್ರತಿ ತಂಡವು ದಿನಕ್ಕೆ 50 ಮನೆಗಳ ಸಮೀಕ್ಷೆಯನ್ನು ಮಾಡಬೇಕೆಂದು ತಿಳಿಸಿದರು. ಒಂದು ತಂಡದಲ್ಲಿ ವೈದ್ಯರು, ಆರೋಗ್ಯ ಸಹಾಯಕರು, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ತಂಡವಾಗಿ ಕಾರ್ಯನಿರ್ವಹಿಸಲು ಸೂಚಿಸಿದೆ ಎಂದು ತಿಳಿಸಿದರು.
ಇಂದು ಕುದ್ದು ಮುಸ್ಲಿಂ ಮನೆಗಳಿಗೆ ಸಮೀಕ್ಷೆ ಮಾಡಲು. ಹಿರಿಯ ಉಪ ವಿಭಾಗಾಧಿಕಾರಿ ಶೈಲಜಾ, ತಹಸಿಲ್ದಾರ್ ಕುಂಞ ಅಹಮದ್, ತಾಲೂಕು ಆರೋಗ್ಯಾಧಿಕಾರಿ ಡಾ:ಧನಂಜಯ್, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಂಡವಾಗಿ ಭೇಟಿ ನೀಡಿದರು.
ಕಂಟೇನ್ಮೆಂಟ್ ಝೋನ್ ಕೆಲವು ನಿಯಮಗಳನ್ನು ರೂಪಿಸಿರುವುದಾಗಿ ತಿಳಿಸಿರುತ್ತಾರೆ.
ನಿಯಮಗಳು ಸದರಿ ಪ್ರದೇಶದ ಪ್ರವೇಶ ಮತ್ತು ಅವರು ಎಲ್ಲಾ ಸ್ಥಳಗಳು ಪೊಲೀಸ್ ಪರಿವೀಕ್ಷಣೆಗಳು ತಕ್ಕದ್ದು ಹಾಗೂ ಪ್ರತಿ ರಸ್ತೆಯಲ್ಲಿ ಪೊಲೀಸ್ ಕಣ್ಗಾವಲು ಇರತಕ್ಕದ್ದು.
ಎಲ್ಲಾ ಪ್ರವೇಶ ಸ್ಥಳಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡತಕ್ಕದ್ದು.
ಜನರ ಓಡಾಟವನ್ನು ತುತ್ತು ಪರಿಸ್ಥಿತಿ ಮತ್ತು ಅತ್ಯಗತ್ಯ ಸೇವೆಗಳ ಮಾತ್ರ ಬರತಕ್ಕದ್ದು.
ಈ ವ್ಯಾಪ್ತಿಯಲ್ಲಿ ಯಾವುದೇ ಅನುಮತಿ ಇಲ್ಲದೆ ವಾಹನಗಳು ಸಂಚಾರವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಸದರಿ ಪ್ರದೇಶಕ್ಕೆ ಅತ್ಯಗತ್ಯವಾದ ಸೇವೆಗಳಾದ ಹಣ್ಣು ತರಕಾರಿ ದಿನಸಿ ವಸ್ತುಗಳನ್ನು ಮನೆಮನೆಗೆ ತಲುಪಿಸಲು ತಾಲೂಕು ಆಡಳಿತ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಸಾರ್ವಜನಿಕರನ್ನು ಜಿಲ್ಲಾಡಳಿತ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮನವಿ ಮಾಡಿದರು.
ತಾಲ್ಲೂಕು ಆಡಳಿತವು ಕೊರೊನಾ ವೈರಸ್ ಹರಡದಂತೆ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು ತಾಲ್ಲೂಕಿನ ಜನರು ಆತಂಕಪಡುವುದು ಬೇಡ. ಸಾರ್ವಜನಿಕರು ಸಾರ್ವಜನಿಕ ಪ್ರದೇಶಗಳಲ್ಲಿ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳಬೇಕು. ನೀವು ವಾಸವಿರುವ ಸುತ್ತಮುತ್ತಲ ಪ್ರದೇಶವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದೆ. ಹಾಗು ಅನಗತ್ಯವಾಗಿ ಹೊರಗಡೆ ಸುತ್ತಾಡುವುದನ್ನು ಬಿಡಬೇಕು ಎಂದು ಮನವಿ ಮಾಡಿದ್ದಾರ.
ವರದಿ: ದೇ.ರಾ.ಜಗದೀಶ ನಾಗಮಂಗಲ.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ