April 25, 2024

Bhavana Tv

Its Your Channel

ಪಡಿತರ ವಿತರಣೆಮಾಡಲು ಈ ಬಾರಿ ಸಡಿಲಿಕೆಅವಕಾಶ. ಕೃಷ್ಣಪ್ಪ

ನಮ್ಮ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ತಿಳಿಸುವುದೇನೆಂದರೆ. ಈ ದಿನ 06-04-2020 ರಂದು ಮಾನ್ಯ ಮುಖ್ಯಮಂತ್ರಿಗಳು ಅನುಮೋದಿಸಿ ಎರಡು ತಿಂಗಳಿಗೆ ಪಡಿತರ ಅಹಾರ ಧಾನ್ಯ ವಿತರಣೆ ಮಾಡಲು ಬಯೋ ಮೆಟ್ರಿಕ್, ಮೊಬೈಲ್ ಒ.ಟಿ.ಪಿ ಆದಾರ್ ಮೊಬೈಲ್ ಒ.ಟಿ.ಪಿ ಮೂಲಕ ಪಡಿತರ ವಿತರಣೆ ಮಾಡಲು ಹಲವಾರು ಸಮಸ್ಯೆಗಳು ಇರುವುದರಿಂದ. CHECK LIST ಅಂದರೆ ಮ್ಯಾನ್ ವೆಲ್ ಮುಖಾಂತರ ಹಂಚಿಕೆ ಮಾಡಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮಾನ್ಯ ಮುಖ್ಯಮಂತ್ರಿಗಳ ನಿರ್ದೇಶನ ನೀಡಿರುತ್ತಾರೆ. ಮಾನ್ಯ ಮುಖ್ಯಮಂತ್ರಿಗಳ ನಿರ್ದೇಶನದಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ರಾಜ್ಯದ ಎಲ್ಲಾ ಜಿಲ್ಲಾಡಳಿತಗಳಿಗೆ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡಿದಂತೆ ತುರ್ತಾಗಿ ಪಡಿತರ ಹಂಚಲು ಯಾವುದೇ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುತ್ತಾರೆ. ಅದರಿಂದ ರಾಜ್ಯದ ಎಲ್ಲಾ ನ್ಯಾಯ ಬೆಲೆ ಅಂಗಡಿ ಮಾಲೀಕರು ಸರ್ಕಾರ ನಿಗದಿಪಡಿಸಿದ ತೂಕವನ್ನು ಕೊಡಬೇಕೆಂದು ಮತ್ತು ಸರ್ಕಾರವೇ ಅಕ್ಕಿ ಮತ್ತು ಗೋಧಿ ಉಚಿತವಾಗಿ ಕೊಡುವುದರಿಂದ ನಮ್ಮ ನ್ಯಾಯ ಬೆಲೆ ಅಂಗಡಿ ಮಾಲೀಕರು ಯಾವುದೇ ಕಾರಣಕ್ಕಾಗಿ ಪಡಿತರ ಚೀಟಿದಾರರಿಂದ ಹಣವನ್ನು ತೆಗೆದುಕೊಳ್ಳುವುದು ತಪ್ಪು. ಕೆಲವು ಜಿಲ್ಲೆಯ ಹಣ ಪಡೆದಿರುವುದು ಮತ್ತು ತೂಕದಲ್ಲಿ ಮೋಸ ಮಾಡಿರುವುದು ಎಲೆಕ್ಟ್ರಾನಿಕ್ ಮಾದ್ಯಮ ಮತ್ತು ಪತ್ರಿಕೆ ಮಾದ್ಯಮದಲ್ಲಿ ಪ್ರಕಟವಾಗಿದೆ. ರಾಜ್ಯಾದ್ಯಂತ ಸೇರಿ ಹಲವಾರು ಜಿಲ್ಲೆಯ 43 ರಿಂದ 50 ಕ್ಕೂ ಹೆಚ್ಚು ನ್ಯಾಯ ಬೆಲೆ ಅಂಗಡಿಗಳ ಪ್ರಾಧಿಕಾರ ರದ್ದು ಮಾಡಿದ್ದಾರೆ. ಅದ್ದರಿಂದ ದಯಮಾಡಿ ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಸರ್ಕಾರದ ಆದೇಶಗಳನ್ನು ಪಾಲಿಸಿಬೇಕು. ಯಾವುದೇ ಕಾರಣಕ್ಕೂ ರಾಜ್ಯ ಪಡಿತರ ಸಂಘಇಂತಹಪ್ರಕರಣಗಳಲ್ಲಿ ಭಾಗಿಯಾಗುವುದಿಲ್ಲ ಮತ್ತು ಸಹಾಯ ಮಾಡುವುದಿಲ್ಲ. ಈಗಾಗಲೇ ನಾವು ಪಡಿತರ ಹಂಚಿಕೆ ವಿಚಾರದಲ್ಲಿ ವ್ಯತ್ಯಾಸ ಮಾಡಬೇಡಿ ಹಣವನ್ನು ತೆಗೆದುಕೊಳ್ಳುವುದು ಬೇಡ ಎಂದು ಕೇಳಿಕೊಂಡರು ಸಹ ಇಂತಹ ತಪ್ಪು ಪದೇ ಪದೇ ಮಾಡಿದರೆ ಸರ್ಕಾರದ ಸೌಲಭ್ಯಗಳನ್ನು ಸರ್ಕಾರವು ನಮಗೆ ನೀಡುವುದಿಲ್ಲ.* ಟಿ. ಕೃಷ್ಣಪ್ಪ ರಾಜ್ಯಾಧ್ಯಾಕ್ಷರು ಪಡಿತರ ವಿತರಕರ ಸಂಘ.ತಿಳಿಸಿದ್ದಾರೆ .

ವರದಿ .ದೇ.ರಾ .ಜಗದೀಶ ನಾಗಮಂಗಲ

error: