September 14, 2024

Bhavana Tv

Its Your Channel

ಪಡಿತರ ವಿತರಣೆಯಲ್ಲಿ ಜನರಲ್ಲಿ ಹಣಪಡೆದರೆ ಕ್ರಮ ಕೈಗೋಳ್ಳಿ

ನಾಗಮಂಗಲ : ನ್ಯಾಯ ಬೆಲೆ ಅಂಗಡಿಯವರು ಬಲವಂತವಾಗಿ ಜನರಲ್ಲಿ ಹಣ ಪಡೆದರೆ ಅವರ ವಿರುದ್ದ ಸರ್ಕಾರ ಕಠಿಣ ಕ್ರಮ ಜರುಗಿಸಲಿ ಎಂದು ನಾಗಮಂಗದಲ್ಲಿ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯ ಅಧ್ಯಕ್ಷರಾದ ಕೆ. ಕೃಷ್ಣಪ್ಪ ರವರು ಸುದ್ದಿಗಾರ ಜೊತೆ ಮಾತನಾಡಿದರು.

ರಾಜ್ಯದ ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ಪಡೆದು ಪಡಿತರ ವಿತರಣೆ ಮಾಡಲಾಗ್ತಿದೆ ಅನ್ನೊ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆವರು ನ್ಯಾಯಬೆಲೆ ಅಂಗಡಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಅಲ್ಲದೆ ಅವರು ಸರ್ಕಾರದ ವಿರುದ್ದ ಕೂಡ ಅಸಮಾಧಾನ ಹೂರ ಹಾಕಿದ್ದು ಕೆಲ ನ್ಯಾಯಬೆಲೆ ಅಂಗಡಿಗಳಿಗೆ ಸುಮಾರು ೪ ತಿಂಗಳಿAದ ಕಮಿಷನ್ ನೀಡಿಲ್ಲ ಅಲ್ಲದೆ ನ್ಯಾಯಬೆಲೆ ಅಂಗಡಿಯವರಿಗೆ ವೈದ್ಯರು, ನರ್ಸ್ಗಳಿಗೆ ನೀಡುವಂತೆ ೫೦ ಲಕ್ಷ ವಿಮೆ ನೀಡುವಂತೆ ಮನವಿಮಾಡಿದ್ದು ಪಡಿತರ ಸಾಗಿಸಲು ಹಾಗೂ ವಿತರಣೆ ಮಾಡಲು ಹಮಾಲಿಗಳ ಅಭಾವವಾಗಿದೆ ಎಂದರು.
ಸರ್ಕಾರದಿAದ ಯಾವ ಸವಲತ್ತು ಇಲ್ಲದಿದ್ರು ಸ್ವಂತ ಖರ್ಚಿನಲ್ಲಿ ಸೆನಿಟೈಸರ್, ಮಾಸ್ಕ್ ಖರೀದಿಸಿ ಪಡಿತರ ವಿತರಣೆ ಮಾಡುತ್ತಿದ್ದೇವೆ ಎಂದಿದ್ದಾರೆ.

error: