December 19, 2024

Bhavana Tv

Its Your Channel

ಹಣ ತರುವಂತೆ ಪತ್ನಿಗೆ ಪೀಡನೆ…ಮನನೊಂದ ಪತ್ನಿ ನೇಣಿಗೆ ಶರಣು

ಎರಡು ವರ್ಷಗಳ ಹಿಂದಷ್ಟೇ ಪ್ರೇಮಿಸಿ ವಿವಾಹವಾಗಿದ್ದ ಪ್ರೇಮಿಗಳು…ಅನಾಥವಾದ 14ತಿಂಗಳ ಮಗು …

ಪರಸ್ಪರ ಪ್ರೀತಿಸಿ ತಂದೆತಾಯಿಗಳು ಹಾಗೂ ಬಂಧುಗಳ ವಿರೋಧದ ನಡುವೆ ಕೃಷ್ಣರಾಜಪೇಟೆ ಪಟ್ಟಣದ ಟೌನ್ ಕ್ಲಬ್ ಹಿಂಭಾಗದಲ್ಲಿ ವಾಸವಾಗಿದ್ದ ಅಂಜು(19) ಆದಿತ್ಯ(21) ದಂಪತಿಗಳು…

ನಿನ್ನೆ ಮಧ್ಯಾಹ್ನ ಪತಿ ಆದಿತ್ಯನೊಂದಿಗೆ ಜಗಳವಾಡಿಕೊಂಡಿದ್ದ ಅಂಜು ಪತಿ ಆದಿತ್ಯ ಮಗುವಿಗೆ ಹಾಲು ಹಾಗೂ ಮನೆಗೆ ಅಗತ್ಯ ವಸ್ತುಗಳನ್ನು ತರಲು ಹೊರ ಹೋಗಿದ್ದಾಗ ತನ್ನ ಮನೆಯಲ್ಲಿಯೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ…

ನಾಗಮಂಗಲ ಡಿವೈಎಸ್ ಪಿ ಕೆ.ಬಿ.ವಿಶ್ವನಾಥ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಸ್ಥಳಕ್ಕೆ ಭೇಟಿ ನೀಡಿ ಆದಿತ್ಯನನ್ನು ಬಂಧಿಸಿ ಅಂಜು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಇಂದು ಮೃತರ ವಾರಸುದಾರರಿಗೆ ಒಪ್ಪಿಸಿದ್ದಾರೆ…

ಕೃಷ್ಣರಾಜನಗರ ತಾಲ್ಲೂಕಿನ
ಮಿರ್ಲೆ ಗ್ರಾಮದ ಅಂಜುವನ್ನು ಕೆ.ಆರ್.ಪೇಟೆ ತಾಲ್ಲೂಕಿನ ಕುಪ್ಪಳ್ಳಿ ಗ್ರಾಮದ ಆದಿತ್ಯ ಪರಸ್ಪರ ಪ್ರೀತಿಸಿ ಫೇಸ್ ಬುಕ್ ನಲ್ಲಿ ಪರಿಚಯವಾಗಿ ವಿವಾಹವಾಗಿದ್ದರು… ಪ್ರೇಮ ವಿವಾಹವು ದುರಂತದಲ್ಲಿ ಅಂತ್ಯಗೊಂಡಿದ್ದು ವಿಪರ್ಯಾಸವಾಗಿದೆ…

ನಾಗಮಂಗಲ ಡಿವೈಎಸ್ ಪಿ ಕೆ.ಬಿ.ವಿಶ್ವನಾಥ ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ…

error: