ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ನಾಗಮಂಗಲ ಡಿವೈಎಸ್ ಪಿ ಕೆ.ಬಿ.ವಿಶ್ವನಾಥ್, ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಅವರಿಗೆ ಸ್ಯಾನಿಟೈಸರ್ ವಿತರಿಸಿದರೆ, ಪುರಸಭೆಯ ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ಸತೀಶಕುಮಾರ್ ಅವರಿಗೆ ಸ್ಯಾನಿಟೈಸರ್, ಮಾಸ್ಕ್ ಮತ್ತು ಗ್ಲೌಸ್ ಗಳನ್ನು ವಿತರಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕುಗಳನ್ನು ಟೌನ್ ಕ್ಲಬ್ ಅಧ್ಯಕ್ಷ ಜೆ.ಬಿ.ಬೋರೇಗೌಡ, ಕಾರ್ಯದರ್ಶಿ ಕೆ.ಟಿ.ಗಂಗಾಧರ, ಪದಾಧಿಕಾರಿಗಳಾದ ಬಿ.ಪಿ.ಅಶೋಕ್, ಎಂ.ಬಿ.ಹರೀಶ್, ಎಸ್.ಅಂಬರೀಶ್, ನೀತಿಮಂಗಲ ನಟರಾಜ್, ಪ್ರಕಾಶ್, ಕೆ.ಎಸ್.ರಾಜೇಶ್ ಮತ್ತು ಕ್ಲಬ್ ನ ಸದಸ್ಯರು ವಿತರಿಸಿದರು…
ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ನಿಯಂತ್ರಿಸಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು, ಜನಸಾಮಾನ್ಯರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಟೌನ್ ಕ್ಲಬ್ ಆಡಳಿತ ಮಂಡಳಿಯು ಕೆಲಸ ಮಾಡುತ್ತಿದೆ ಎಂದು ಕ್ಲಬ್ ಅಧ್ಯಕ್ಷ ಜೆ.ಬಿ.ಬೋರೇಗೌಡ, ಕಾರ್ಯದರ್ಶಿ ಕೆ.ಟಿ.ಗಂಗಾಧರ ಮತ್ತು ಪದಾಧಿಕಾರಿಗಳಾದ ಎಸ್.ಅಂಬರೀಶ್, ಎಂ.ಬಿ.ಹರೀಶ್ ತಿಳಿಸಿದರು…ಟೌನ್ ಕ್ಲಬ್ ನ ಸಮಾಜಮುಖಿ ಕಾರ್ಯವನ್ನು ಪಟ್ಟಣದ ನಾಗರೀಕರು ಶ್ಲಾಘಿಸಿದ್ದಾರೆ…
ವರದಿ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ .
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ