April 23, 2024

Bhavana Tv

Its Your Channel

ಡೈರಿಯಲ್ಲಿ ಹಾಲು ಹಾಕುವರಿಗೆ ಡೈರಿಯ ಸಂಘದ ವತಿಯಿಂದ ಮಾಸ್ಕ್

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೋಕಿನ ಕಿಕ್ಕೇರಿ ಹೋಬಳಿಯ ಮಾರ್ಗೋನಹಳ್ಳಿ ಡೈರಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಹಾಗೂ ಸದಸ್ಯರು ಎಲ್ಲರು ಡೈರಿಯಲ್ಲಿ ಪ್ರತಿ ದಿನ ಹಾಲು ಹಾಕುವವರು ಪ್ರತಿದಿನ ಸ್ನಾನ ಮಾಡಬೇಕು. ಕೈ ಶುದ್ಧವಾಗಿ ತೊಳಿಯಬೇಕು. ಪ್ರತಿ ದಿನ ಹಸುಗಳುನ್ನು ತೊಳೆದು ಪಾತ್ರೆಗಳನ್ನು ಪರಿಶುದ್ಧವಾಗಿ ತೊಳೆದು ಹಾಲು ಕರೆಯಬೇಕು. ಎಂದು ಡೈರಿಯಲ್ಲಿ ಹಾಲು ಹಾಕುವವರಲ್ಲಿ ಮಾಸ್ಕ್ ವಿತರಿಸಿ ಮನವಿ ಮಾಡುವ ಮೂಲಕ ಕೊರೋನಾ ಅರಿವು ಮೂಡಿಸಿ ಜಿಲ್ಲೆಯಲ್ಲಿ ಇರುವ ಎಲ್ಲ ಡೈರಿಗಳಿಗೆ ಮಾದರಿ ಡೈರಿ ಆಗಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹಾಲು ಉತ್ಪಾದಕರ ಸಂಘದ ಅದ್ಯಕ್ಷರಾದ ಹುಚ್ಚೇಗೌಡ್ರು ತಿಳಿಸಿದರು..

ಕಾರ್ಯಕ್ರಮದಲ್ಲಿ ಅದ್ಯಕ್ಷರು ಹುಚ್ಚೇಗೌಡ್ರು, ಉಪಾದ್ಯಕ್ಷ ಜೋಗಯ್ಯ, ನಿರ್ದೇಶಕರಕು ನಿಂಗೇಗೌಡ, ಜಯರಾಮ, ಶಿವಣ್ಣ, ಗಂಗಾದರ್, ಶಿವಶೆಟ್ಟಿ, ತಿಮ್ಮೇಗೌಡ, ವೆಂಕಟೇಶ್, ಪದ್ಮಮ್ಮ,ಶಾಂತಮ್ಮ, ಮುಖಂರಾದ ನರಸೇಗೌಡ್ರು, ಕಾರ್ಯದರ್ಶಿ ಸ್ವಾಮಿ ಎಂ ಎಸ್, ನೌಕರರು ನಾಗರಾಜುಶೆಟ್ಟಿ, ಸಹಾಯಕ ಸುರೇಶ್ ಸೇರಿದಂತೆ ಗ್ರಾಮಸ್ಥರುಗಳು ಇದ್ದರು..

ವರದಿ ಶಂಭು ಕಿಕ್ಕೇರಿ, ಮಂಡ್ಯ

error: