December 4, 2024

Bhavana Tv

Its Your Channel

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮೀನು ಖರೀದಿಗಾಗಿ ಮುಗಿಬಿದ್ದ ಗ್ರಾಮಸ್ಥರು

ಮಂಡ್ಯ ಜಿಲ್ಲೆ ಮಂಡ್ಯ ತಾಲೋಕಿನ ಮುತ್ತೇಗೆರೆ ಗ್ರಾಮದ ಕೆರೆಯಲ್ಲಿ ಮೀನುಗಾರರು ಇಂದು ಮೀನು ಹಿಡಿದಿದ್ದು ಗ್ರಾಮಸ್ಥರು ಖರೀದಿಗೆ ಮುಗಿಬಿದ್ದರು.
ಯಾವುದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಬ್ಬರಮೇಲೊಬ್ಬರು ನುಗ್ಗಾಟ್ಟಾ ತಳ್ಳಾಟ ಮಾಡಿಕೊಂಡು ಮೀನು ಖರೀದಿಗೆ ಮುಂದಾಗಿದ್ದಾರೆ. ಇಷ್ಟು ದಿನಗಳ ಊರುಬೀಗ ಒಮ್ಮೆಗೆ ವ್ಯರ್ಥವಾದಂತಿದೆ. ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದ್ದರು ಮಾಂಸ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಕೆರೆಯ ಮೀನಿಗಾಗಿ ನೂಕುನುಗ್ಗು ಉಂಟಾಗಿದೆ,
ಎಲ್ಲ ಬಗೆಯ ಮಾಂಸಕ್ಕೆ ಅನುಮತಿ ಇದ್ದರು ಈ ರೀತಿಯ ಮೀನಿಗಾಗಿ ಒಬ್ಬರಿಗೊಬ್ಬರನ್ನು ತಳ್ಳಾಟ ನೂಕಾಟ ಮಾಡಿಕೊಂಡಿದ್ದಾರೆ.
ಸಕ್ಕರೆ ನಾಡಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರು ಜನ ಇದರ ಬಗ್ಗೆ ಯೋಚಿಸಬೇಕಾಗಿದೆ.

error: