December 22, 2024

Bhavana Tv

Its Your Channel

ಹಗಲಿರುಳು ಅವಿರತ ಶ್ರಮಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಚಿಕನ್ ಬಿರಿಯಾನಿ ವಿತರಣೆ

ಮಂಡ್ಯ ; ಪಾಂಡವಪುರ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಮಧ್ಯಾಹ್ನದ ಊಟಕ್ಕೆ ಚಿಕನ್ ಬಿರಿಯಾನಿ ನೀಡಲಾಯಿತು.

ಅಖಿಲ ರ‍್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಹಾಗೂ ತಾಲೂಕು ಅಂಬರೀಶ್ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಅಂಬಿ ಸುಬ್ಬಣ್ಣ ನೇತೃತ್ವದಲ್ಲಿ ೧೫೦ಕ್ಕೂ ಹೆಚ್ಚು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಚಿಕನ್ ಬಿರಿಯಾನಿ ವಿತರಣೆ ಮಾಡಲಾಯಿತು.

ಈ ವೇಳೆ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್, ಅಂಬರೀಶ್ ಅಭಿಮಾನಿಗಳಾದ ಎಸ್.ವಿನಯಕುಮಾರ್, ಆಟೋ ಜಲೇಂದ್ರ, ಚಿಕ್ಕಮರಳಿ ಎನ್.ರವಿ, ಗ್ಯಾಸ್ ತಮ್ಮಣ್ಣ, ಸೈಯದ್ ಅಸ್ಕರ್ ಇತರರಿದ್ದರು.

ಇದೇ ವೇಳೆ ಕೊರೊನಾ ಶಂಕಿತರನ್ನು ತಪಾಸಣೆ ಮಾಡುತ್ತಿರುವ ವೈದ್ಯರು ಹಾಗೂ ಶೂಶ್ರೂಷಕರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಷೇಕ್ ಅವರು ದರ‍್ಘ ದಂಡ ನಮಸ್ಕಾರ ಮಾಡಿ ನಮಿಸಿದರು.

error: