September 14, 2024

Bhavana Tv

Its Your Channel

ಕೊರೋನಾ ಮಹಾಮಾರಿಯ ಆಟ್ಟಹಾಸವನ್ನು ನಿಯಂತ್ರಿಸಿ ಮಟ್ಟಹಾಕಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು-ಕೊರೋನಾ ನಿಯಂತ್ರಣ ಔಷಧಿ ಸಿಂಪಡಣೆ ಟನಲ್’

ಕೊರೋನಾ ವೈರಾಣುಗಳು ಹರಡದಂತೆ ನಿಯಂತ್ರಿಸಲು ಕೊರೋನಾ ಸೋಂಕು ನಿಯಂತ್ರಿಸಲು ಕೆಮಿಕಲ್ ಟನಲ್ ಉಪಯೋಗವಾಗಲಿದೆ…ಸ್ಯಾನಿಟೈಸರ್ ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಣವಾಗಿರುವ ದ್ರಾವಣವನ್ನು ಸಿಂಪಡಣೆ ಮಾಡುವುದರಿಂದ ಕೊರೋನಾ ವೈರಾಣುಗಳು ಹರಡುವುದು ನಿಯಂತ್ರಣವಾಗುತ್ತದೆ. ಆದ್ದರಿಂದ ಈ ಎರಡು ಕೆಮಿಕಲ್ ಸಿಂಪಡಣಾ ಸುರಂಗಗಳ ಫಲಿತಾಂಶವನ್ನು ನೋಡಿಕೊಂಡು ಮಿನಿ ವಿಧಾನಸೌಧದ ಆವರಣದಲ್ಲಿ ಇನ್ನೊಂದು ಕೆಮಿಕಲ್ ಸಿಂಪಡಣಾ ಟನಲ್ ನಿರ್ಮಿಸಲಾಗುವುದು ಎಂದು ತಿಳಿಸಿದ ಸಚಿವ ಡಾ.ನಾರಾಯಣಗೌಡ ನಮ್ಮ ಆರೋಗ್ಯವು ನಮ್ಮ ಕೈಯ್ಯಲ್ಲಿಯೇ ಇರುವುದರಿಂದ ನಾವು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸ್ಬಚ್ಛತೆಗೆ ಒತ್ತು ನೀಡಬೇಕು..ಕೈಗಳನ್ನು ಸ್ಯಾನಿಟೈಸರ್ ನಿಂದ ತೊಳೆದುಕೊಂಡು ಮನೆಯಿಂದ ಹೊರಗೆ ಓಡಾಡುವ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಓಡಾಡಬೇಕು..ಅಗತ್ಯ ಆರೋಗ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಚಿವ ನಾರಾಯಣಗೌಡರು ಮನವಿ ಮಾಡಿದರು…

ಈ ಸಂದರ್ಭದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ, ನಾಗಮಂಗಲ ಡಿವೈಎಸ್ ಪಿ ಕೆ.ಬಿ.ವಿಶ್ವನಾಥ್, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್, ತಹಶೀಲ್ದಾರ್ ಎಂ. ಶಿವಮೂರ್ತಿ, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಪಂ ಮಾಜಿಉಪಾಧ್ಯಕ್ಷ ಎಸ್.ಅಂಬರೀಶ್, ಪುರಸಭೆ ಸದಸ್ಯರಾದ ಶಾಮಿಯಾನ ತಿಮ್ಮೇಗೌಡ, ಹೆಚ್.ಆರ್.ಲೋಕೇಶ್, ಗಿರೀಶ್, ಶುಭಾ, ಶೋಭಾ ದಿನೇಶ್, ಬಿಜೆಪಿ ಮುಖಂಡ ಬೂಕಹಳ್ಳಿ ಮಂಜು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಮೊಬೈಲ್ ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು….

ವರದಿ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ ..

error: