ಕೆ.ಆರ್.ಪೇಟೆ : ನೇಕಾರ ತೊಗಟವೀರ ಸಮಾಜದ ಮುಖಂಡ ಉಂಡಿಗನಹಾಳು ಯು.ಕೆ. ಬಸವರಾಜು ಮತ್ತು ಟಿ.ಆರ್.ಗಾಯತ್ರಿ ದಂಪತಿಗಳಿಗಳ ಪುತ್ರಿ ಕುಮಾರಿ ಯು.ಬಿ.ರೇವತಿ ಅವರು ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮವಾದ ಸಾಧನೆಯನ್ನು ಮಾಡಿದ್ದು 625 ಅಂಕಗಳಿಗೆ 623 ಅಂಕಗಳನ್ನು ಪಡೆಯುವ ಮೂಲಕ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಅತೀ ಹೆಚ್ಚಿನ ಅಂಕಗಳನ್ನು ಪಡೆದಿರುವ ಟಾಪ್ ಟೆನ್ ವಿದ್ಯಾರ್ಥಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಸರ್ವಶ್ರೇಷ್ಠ ಸಾಧನೆ ಮಾಡಿದ್ದಾರೆ ..
ಕೆ.ಆರ್.ಪೇಟೆ ಪಟ್ಟಣದ ಆಚಾರ್ಯ ವಿದ್ಯಾಶಾಲೆಯ ಹೆಮ್ಮೆಯ ವಿದ್ಯಾರ್ಥಿನಿಯಾಗಿರುವ ರೇವತಿ ಅವರ ಸಾಧನೆಯನ್ನು ಶಾಲೆಯ ಅಧ್ಯಕ್ಷ ಅರವಿಂದರಾವ್, ಆಡಳಿತಾಧಿಕಾರಿ ನಾಗೇಶಬಾಬು, ಕೆ.ಆರ್.ಪೇಟೆಯ ನೇಕಾರ ತೊಗಟವೀರ ಸಮಾಜದ ಮುಖಂಡರಾದ ಹಂಸರಮೇಶ್, ಹೆಚ್.ಎಂ.ಚAದ್ರಶೇಖರ್ ಅಭಿನಂದಿಸಿದ್ದಾರೆ…
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ