ನಾಗಮಂಗಲ ತಾಲ್ಲೂಕಿನ ಬಿಳಗುಂದ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಆವರಣದಲ್ಲಿ ಶಾಸಕ ಸುರೇಶ್ ಗೌಡ ಹಾಗೂ ಎಂಎಲ್ಸಿ ಅಪ್ಪಾಜಿಗೌಡ ಮತ್ತು ಮನ್ಮುಲ್ ನಿರ್ದೇಶಕರಾದ ನೆಲ್ಲಿಗೆರೆ ಬಾಲು ಮತ್ತು ಕೋಟಿ ರವಿರವರು ಚಾಲನೆ ನೀಡಿದರು
ರಾಜ್ಯದಲ್ಲಿರುವ 14 ಹಾಲು ಒಕ್ಕೂಟಗಳ ಮಹಾ ಮಂಡಳಿಗಳಲ್ಲೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ವಿನೂತನ ಕಾರ್ಯಕ್ರಮವನ್ನು ನಿರೂಪಿಸಿದೆ. ಪ್ರಪ್ರಥಮ ಬಾರಿಗೆ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಜಿಲ್ಲೆಯ 1 ಲಕ್ಷದ 2 ಸಾವಿರ ಹಾಲು ಉತ್ಪಾದಕರಿಗೆ ಹಾಗೂ ಅದರ ಭಾಗವಾಗಿ ನಾಗಮಂಗಲ ತಾಲೂಕಿನ 14 ಸಾವಿರ ಹಾಲು ಉತ್ಪಾದಕರ ಆಹಾರ ಕಿಟ್ ಪದಾರ್ಥಗಳನ್ನು ನೀಡಲಾಗುವುದು ಎಂದು ಮನ್ ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು ಹಾಗೂ ಕೋಟಿ ರವಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುರೇಶ್ ಗೌಡ ರೈತರು ಹಾಲು ಉತ್ಪಾದಿಸಿ ಮನಮಲ್ ಗೆ ನೀಡುತ್ತಿರುವುದರಿಂದ ಒಂದು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ ಕರೋನಾವೈರಸ್ ಬಂದಿರುವ ಈ ಸಮಯದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಸಹಾಯವಾಗಲಿ ಎಂದು ರೈತ ಕಲ್ಯಾಣ ಯೋಜನೆಯಿಂದ ಆಹಾರಧಾನ್ಯ ಕೀಟಗಳನ್ನು ವಿತರಿಸುತ್ತಿದ್ದಾರೆ ನಿರ್ದೇಶಕರಾದ ನಲ್ಲಿಗೆರೆ ಬಾಲು ಮತ್ತು ಕೋಟಿ ರವಿಯವರಿಗೆ ಸಮಾಜಮುಖೀ ಕೆಲಸ ಮಾಡಲಿ ಎಂದು ತಿಳಿಸಿದರು
ಎಂಎಲ್ಸಿ ಅಪ್ಪಾಜಿಗೌಡ ಮಾತನಾಡುತ್ತಾ ರೈತರ ಕಷ್ಟಗಳಿಗೆ ಸ್ಪಂದಿಸುವ ಇಂತಹ ಜನಪರ ಯೋಜನೆಗಳು ಮುಂದಿನ ದಿನದಲ್ಲಿ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಂಘದ ವತಿಯಿಂದ ನಿರಂತರವಾಗಿ ನಡೆಯಲಿ ಎಂದು ನುಡಿದರು
ಫೆ.1 ರಿಂದ ಮಾ 15 ರ ವರೆಗೆ ಯಾರು ಹಾಲು ಉತ್ಪಾದಕರ ಸಂಘಗಳಿಗೆ ಹಾಲು ಹಾಕಿದ್ದಾರೋ ಅಂತವರು ಕೊರೊನಾ ಎಫೆಕ್ಟ್ ನಿಂದ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಪಟ್ಟಣಗಳಿಗೆ ಹೋಗಿ ಆಹಾರ ಪದಾರ್ಥಗಳನ್ನು ಕೊಂಡು ಕೊಳ್ಳಲು ಸಾಧ್ಯವಾಗದ ಕಾರಣ ಈ ಆಹಾರ ಸಾಮಗ್ರಿ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.ಜಿಲ್ಲೆಯಲ್ಲಿ 1250 ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು 97 ಸಾವಿರ ಹಾಲು ಉತ್ಪಾದಕರು ಮತ್ತು 5 ಸಾವಿರ ಸಿಬ್ಬಂದಿಗಳಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದ್ದು ತಿಳಿಸಿದರು. ಆಯಾ ತಾಲ್ಲೂಕಿನ ನಿರ್ದೇಶಕರ ಸಮ್ಮುಖದಲ್ಲಿ ಹಾಲು ಉತ್ಪಾದಕರಿಗೆ ಆಹಾರಧಾನ್ಯದ ಕಿಟ್ ವಿತರಿಸಲಾಗುತ್ತದೆ ಎಂದರು.
ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಂಘ ಮತ್ತು ತಾಲೂಕು ಆಡಳಿತ ವರ್ಗ ಹಾಲಿನ ಡೈರಿ ನಿರ್ದೇಶಕರುಗಳು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ