February 6, 2023

Bhavana Tv

Its Your Channel

ನೊಂದ ರೈತರಿಗೂ ಆಶ್ರಯರಾದರ ಬಿ ಎಂ ಕಿರಣ್, ಸುಮಾರು ೨ ಲಕ್ಷದ ಬೆಲೆ ಬಾಳುವ ರೈತನ ಟೊಮೊಟೊ ಹಾಗೂ ಕುಂಬಳ ಕಾಯಿ ಖರೀದಿಸಿ ಹೋಬಳಿ ಬಡ ರೈತರಿಗೆ ಉಚಿತ ವಿತರಣೆ

ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೋಕಿನ ಕಿಕ್ಕೇರಿ ಹೋಬಳಿಯ ಆನೆಗೂಳ ಶ್ರೀ ಸುಬ್ರಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ ಎಂ ಕಿರಣ್ ಅವರು ರೈತ ಬೆಳೆದ ಬೆಲೆಗೆ ತಕ್ಕ ಬೆಲೆ ಸಿಗದೇ ಕಂಗಾಲಾಗಿದ್ದ ಸಂದರ್ಬದಲ್ಲಿ ರೈತರಿಗೆ ಧೈರ್ಯ ಸಾಂತ್ವನ ಹೇಳಿ ಆ ರೈತ ಬೆಳೆದ ಬೆಳೆಯನ್ನ ಸ್ವತಃ ಕಿರಣ್ ಅವರೇ ತಕ್ಕ ಬೆಲೆ ಕೊಟ್ಟು ಖರೀದಿ ಮಾಡಿ ರೈತನ ಕುಟುಂಬಕ್ಕೆ ಆಶ್ರಯದಾತರಾಗಿದ್ದಾರೆ.

ಕಿರಣ್ ಅವರು ಮಾಡುತ್ತಿರುವ ಸಮಾಜ ಸೇವೆಗೆ ಕೆ ಆರ್ ಪೇಟೆ ತಾಲೋಕಿನ ದಂಡಾಧಿಕಾರಿ ಎಂ ಶಿವಮೂರ್ತಿ ಅವರು ಕೂಡ ಇಂದು ಕಿಕ್ಕೇರಿ ಪಟ್ಟಣದಲ್ಲಿ ಎಲ್ಲ ವಾರ್ಡುಗಳಿಗೂ ದಿನಸಿ ತರಕಾರಿ ಹಾಗೂ ಅಕ್ಕಿ ವಿತರಣೆ ಮಾಡುವ ಸಂದರ್ಭದಲ್ಲಿ ಕಿಕ್ಕೇರಿ ಪಟ್ಟಣದಲ್ಲಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ದಿನಸಿ ಅಕ್ಕಿ ಹಾಗೂ ಮನೆಗೆ ಬೇಕಾದ ಸಾಮಗ್ರಿಗಳನ್ನು ವಿತರಿಸುವ ಸಮಯದಲ್ಲಿ ಕೈ ಜೋಡಿಸಿ ಶ್ರೀ ಸುಬ್ರಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷರಾದ ಬಿ ಎಂ ಕಿರಣ್ ಅವರಿಗೆ ಸಾಥ್ ನೀಡಿದ್ದಾರೆ

ಕಿಕ್ಕೇರಿ ಹೋಬಳಿಯಾದ್ಯಂತ ನೀಡುತ್ತಿರುವ ಬಡವರಿಗೆ ಆಹಾರ ಕಿಟ್
ಮಾದ್ಯಮದವರೊಂದಿಗೆ ಮಾತನಾಡಿ ಹಸಿದವರಿಗೆ ಅನ್ನ ನೀಡುವುದು ನಮ್ಮ ಭಾಗ್ಯ. ಅದನ್ನ ನಾನು ನಮ್ಮ ಪೂಜ್ಯ ತಂದೆ ಮಂಜುನಾಥ್ ಅವರ ಸಹಕಾರದೊಂದಿಗೆ ನಾವು ನಮ್ಮ ಹೋಬಳಿಯ ಬಡ ರೈತಾಪಿ ಕುಟುಂಬಗಳಿಗೆ ನಮ್ಮ ಚಿಕ್ಕ ಅಳಿಲು ಸೇವೆ ಮಾಡುತ್ತಿದ್ದೇವೆ ಅಷ್ಟೇ.. ಇದರಲ್ಲಿ ನಮ್ಮ ಸ್ವಾರ್ಥ ವಿಲ್ಲದೆ ನಾವು ನಮ್ಮ ಬೆಂಬಲಿಗರ ಸಹಕಾರದೊಂದಿಗೆ ಸಮಾಜ ಸೇವೆಗೆ ಮುಂದಾಗುತ್ತಿದ್ದೇವೆ.. ಎಂದರು ಸಂತೋಷ ಹೊರ ಹೊಮ್ಮಿದರು

ಇದೆ ಸಂದರ್ಭದಲ್ಲಿ ತಹಸೀಲ್ದಾರ್ ಎಂ ಶಿವಮೂರ್ತಿ ಉಪ ತಶೀಲ್ದಾರ್ ಲಕ್ಷ್ಮಿಕಾಂತ್. ಬಿ ಎಸ್ ಮಂಜುನಾಥ್ ಹಾಗೂ ಹೋಬಳಿಯ ಜೆಡಿಎಸ್ ಅಧ್ಯಕ್ಷ ಕಾಯಿ ಮಂಜೇಗೌಡ. ಕಾಯಿ ಸುರೇಶ್ ಕೆ ವಿ ಶೇಖರ್ ಅಘಲಯ ಕೃಷ್ಣಪ್ಪ, ಕಡುಹೆಮ್ಮಿಗೆ ರಮೇಶ್, ಅನೆಗೂಳ ನೇಂಜೇಶ್. ಮಂಜು ಗೌತಮ್ , ಕೋಡಿಮಾರನಹಳ್ಳಿ ಪ್ರವೀಣ್, ರಾಜೇಶ್ ಪಾಪಣ್ಣ ಸೇರಿದಂತೆ ಅನೇಕ ಕಿರಣ್ ಬೆಂಬಲಿಗರು ಉಪಸ್ಥಿತರಿದ್ದರು

About Post Author

error: