
ಕೃಷ್ಣರಾಜಪೇಟೆ ಪಟ್ಟಣದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಅನ್ನು ಪರಿಣಾಮ ಕಾರಿಯಾಗಿ ಮತ್ತು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ ಪಟ್ಟಣದ ವಿವಿಧ ಬಡಾವಣೆಗಳ ಸಬ್ ರೋಡ್ ಗಳನ್ನು ಬಂದ್ ಗೊಳಿಸಲಾಗುತ್ತಿದೆಯೇ ವಿನಃ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಯಾವುದೇ ಕೊರೋನಾ ಸೋಂಕು ಪ್ರಕರಣಗಳು ವರದಿಯಾಗಿಲ್ಲ .
ಕೊರೋನಾಕ್ಕೆ ಸಂಬAಧಿಸಿದAತೆ ತಪ್ಪು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಹಾಗೂ ಗಾಬರಿ ಪಡಬಾರದೆಂದು ತಹಶೀಲ್ದಾರ್ ಶಿವಮೂರ್ತಿ ತಿಳಿಸಿದ್ದಾರೆ .
ಕೃಷ್ಣರಾಜಪೇಟೆ ಪಟ್ಟಣದ ವಿವಿಧ ಬಡಾವಣೆಗಳ ಸಬ್ ರೋಡ್ ಗಳನ್ನು ಬಂದ್ ಮಾಡುತ್ತಿರುವದರಿಂದ ನಾಗರೀಕರು ಭಯಗೊಂಡು ವದಂತಿಗಳನ್ನು ಹರಡುತ್ತಿರುವುದರಿಂದ ತಾಲ್ಲೂಕು ದಂಡಾಧಿಕಾರಿಗಳೂ ಆಗಿರುವ ತಹಶೀಲ್ದಾರ್ ಎಂ.ಶಿವಮೂರ್ತಿ ಪತ್ರಕರ್ತರಿಗೆ ಸ್ಪಷ್ಠನೆ ನೀಡಿದ್ದಾರೆ..
ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಹಾಗೂ ಪುರಸಭೆಯ ಸಿಬ್ಬಂಧಿಗಳು ಪಟ್ಟಣದಾಧ್ಯಂತ ಬ್ಯಾರಿಕೇಡ್ ಗಳು ಹಾಗೂ ಗಳುಗಳನ್ನು ರಸ್ತೆಗಳಿಗೆ ಅಡ್ಡಲಾಗಿ ನೆಟ್ಟು ಪಟ್ಟಣದ ಎಲ್ಲಾ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಿಸಿದ್ದಾರೆ.
More Stories
ಮನೆ ಮನೆಗೆ ಮಂಜಣ್ಣ ಎಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜೆ.ಡಿ.ಎಸ್ ಅಭ್ಯರ್ಥಿ ಹೆಚ್ ಟಿ ಮಂಜು
ವಿಜೃಂಭಣೆಯಿoದ ನಡೆದ ಶ್ರೀ ಗವಿರಂಗನಾಥ ದೇವಾಲಯದ ಬ್ರಹ್ಮ ರಥೋತ್ಸವ
ಉಚಿತ ದಂತ ತಪಾಸಣಾ ಶಿಬಿರ