ಕಿಕ್ಕೇರಿ: ಮಧುಗಿರಿಯ ಕೆ ಎನ್ ರಾಜಣ್ಣ ರವರು ತಮ್ಮ ನಾಲಿಗೆ ಮೇಲೆ ಹಿಡಿತ ಇಡ್ಕೊಂಡ್ರೆ ಒಳೆಯದು ಇಲ್ಲವಾದರೆ ನಮ್ಮ ಕಾರ್ಯಕರ್ತರೇ ತಮ್ಮಗೆ ಗೋಸಾ ನೀಡುತ್ತಾರೆ ಎಂದು ಜೆ.ಡಿಎಸ್ ಪಕ್ಷದ ಯುವ ನಾಯಕ ಬಿ.ಎಂ ಕಿರಣ್ ರವರು ಎಚ್ಚರಿಕೆ ನೀಡಿದರು
ಮಾಜಿ ಪ್ರಧಾನಿ ಜೆಡಿಎಸ್ ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿರುವ ಮಾಜಿ ಶಾಸಕ ಕೆ ಎನ್ ರಾಜಣ್ಣ ರವರ ಹೇಳಿಕೆಯನ್ನು ಖಂಡಿಸಿ ಕಿಕ್ಕೇರಿ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆ.ಡಿ.ಎಸ್ ಪಕ್ಷದ ಯುವ ನಾಯಕ ಬಿ.ಎಂ ಕಿರಣ್ ರವರು ರಾಜಣ್ಣ ಒಬ್ಬ ಮಾಜಿ ಶಾಸಕ ಎಂಬ ಅರಿವಿಲ್ಲದೆ ಒಂದು ಚಿಕ್ಕ ಮಗುವಿಗೂ ಸಹ ಗೌರವಿಸುವ ನಮ್ಮ ರಾಷ್ಟ್ರ ನಾಯಕರ ಬಗ್ಗೆ ಲಘುವಾಗಿ ಮಾತನಾಡಿರುವುದು ಅವರ ನೀಚ ಮನಸ್ಥಿತಿ ಎದ್ದು ಕಾಣುತ್ತಿದೆ ಪ್ರತಿಯೊಂದು ವಿಚಾರದಲ್ಲೂ ಕೂಡ ತನ್ನ ಮಾತಿಗೆ ಲಗಾಮು ಹಾಕದೆ ಇರುವ ಇವರು ಕೋತಿಗೆ ಹೆಂಡ ಕುಡಿಸಿದಂತೆ. ಮಾತಿನಲ್ಲಿ ಹಿಡಿತ ಇಲ್ಲದೆ ಇರುವ ರಾಜಣ್ಣ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು, ಕಾಂಗ್ರೆಸ್ ಪಕ್ಷದ ನಾಯಕರು ಇಂತಹ ಸಂಸ್ಕೃತಿ ತಿಳಿಯದ ವ್ಯಕ್ತಿಗಳನ್ನು ಕೂಡಲೆ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ದೇವೇಗೌಡ ಅಭಿಮಾನಿಗಳು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರಿಂದ ಕೆ.ಎನ್ ರಾಜಣ್ಣ ಸಿಕ್ಕ ಸಿಕ್ಕಲ್ಲಿ ಸಾಮೂಹಿಕವಾಗಿ ಗೂಸಾ ನೀಡುವ ಮೂಲಕ ಪ್ರತಿಭಟಿಸಲಾಗುವುದು ಎಂದು ಎಚ್ಚರಿಗೆ ನೀಡಿದರು..
ನಂತರ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್ ಮಾತಾಡಿ ಕೆ.ಎನ್ ರಾಜಣ್ಣ,ನಮ್ಮ ನಾಯಕರ ಬಗ್ಗೆ ಮಾತಾಡುವಾಗ ನಾಲಿಗೆ ಮೇಲೆ ಹಿಡಿತ ಇರಬೇಕು ನಿಮ್ಮಗೂ ವಯಸ್ಸಾಗುತ್ತೆ ನಾಳೆ ದಿನ ನಿಮ್ಮನ್ನು ಹೊರಲು ನಾಲ್ಕು ಜನ ಬೇಕಾಗುತ್ತೆ ಅಲ್ಲದೆ ನಿಮ್ಮ ತಿಥಿಕಾರ್ಯವನ್ನು ನಮ್ಮ ಜೆ.ಡಿಎಸ್ ಕಾರ್ಯಕರ್ತರೇ ಮಾಡ್ತೇವೆ ಮೊದಲು ನಮ್ಮ ವರಿಷ್ಠ ಮನೆಗೆ ತೆರಳಿ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಒತ್ತಾಯಿಸಿದರು
ಸುದ್ದಿಗೋಷ್ಠಿಯಲ್ಲಿ ಕಿಕ್ಕೇರಿ ಹೋಬಳಿ ಘಟಕದ ಅಧ್ಯಕ್ಷ ಕಾಯಿ ಮಂಜೇಗೌಡ್ರು ಮುಖಂಡರಾದ ಮಿಲ್ ಬಾಲಚಂದ್ರು, ಸಾದೋಗನಹಳ್ಳಿ ಲೋಕೇಶ್, ಪಾಪಣ್ಣಿ, ರಾಜೇಶ, ಅನೀಲ್, ರಾಕೇಶ್, ಮತ್ತಿತ್ತರರು ಇದ್ದರು..
ವರದಿ: ಶಂಭು ಕಿಕ್ಕೇರಿ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ