December 22, 2024

Bhavana Tv

Its Your Channel

ಲಕ್ಷ್ಮಣ ಸೋಲಂಕಿಯವರಿoದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿ

ಕೃಷ್ಣರಾಜಪೇಟೆ ; ಕೊರೋನಾ ಸಂಕಷ್ಠದ ಹಿನ್ನೆಲೆಯಲ್ಲಿ ಕೃಷ್ಣರಾಜಪೇಟೆ ಪಟ್ಟಣದ ಖ್ಯಾತ ಉಧ್ಯಮಿಗಳಾದ ಲಕ್ಷ್ಮಣ ಸೋಲಂಕಿ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಗಳ ಡಿಡಿಯನ್ನು ತಹಶೀಲ್ದಾರ್ ಎಂ.ಶಿವಮೂರ್ತಿ ಅವರ ಮೂಲಕ ಹಸ್ತಾಂತರಿಸಿದರು.

ದಾನಿಗಳಾದ ಲಕ್ಷ್ಮಣಸೋಲಂಕಿ ಮಾತನಾಡಿ ಕೊರೋನಾ ಮಹಾಮಾರಿಯ ಅಟ್ಟಹಾಸಕ್ಕೆ ಇಡೀ ವಿಶ್ವವೇ ಸಂಕಷ್ಠದಲ್ಲಿದೆ. ಉಳ್ಳವರು ಕೈಲಾದ ಸಹಾಯವನ್ನು ಮಾಡಬೇಕು. ಕೊರೋನಾ ಸಂದಿಗ್ಧ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕು. ಕೊರೋನಾ ಲಾಕ್ ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜಾಸ್ಥಾನ್ ಸೇವಾಸಮಿತಿಯ ಸಂಚಾಲಕರಾದ ಧರ್ಮೇಂದ್ರ ಸಿರ್ವಿ, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಡಾ.ಮನುಕುಮಾರ್ ಮತ್ತು ಪತ್ರಕರ್ತ ಸೈಯ್ಯದ್ ಖಲೀಲ್ ಉಪಸ್ಥಿತರಿದ್ದರು.

error: