April 25, 2024

Bhavana Tv

Its Your Channel

ಕರೋನಾ ಭೀತಿಯ ಮಧ್ಯೆ ದಿನನಿತ್ಯ ಅಗತ್ಯ ವಸ್ತುಗಳ ಖರೀದಿ ನಡೆಸಲು ವಾರದಲ್ಲಿ ೩ ದಿನಗಳ ಕಾಲ ಅನುಮತಿ ನೀಡಿದ ಕೃಷ್ಣರಾಜಪೇಟೆ ತಾಲೂಕ ಆಡಳಿತ.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ತಾಲೂಕಿನಾದ್ಯಂತ ಹೊಸ ಆದೇಶ ಹೊರಡಿಸಿದ್ದು ನೂತನ ಆದೇಶದ ಪ್ರಕಾರ ವಾರದಲ್ಲಿ ನಾಲ್ಕು ದಿನ ವಹಿವಾಟು ನಡೆಸುತ್ತಿದ್ದ ಅಂಗಡಿ ಮುಂಗಟ್ಟುಗಳು, ಪೆಟ್ರೋಲ್ ಬಂಕ್ ಗಳು ೩ದಿನಗಳಿಗೆ ಇಳಿಕೆ ಮಾಡಿದ್ದು ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಿಗ್ಗೆ ೬ಗಂಟೆಯಿAದ ಮಧ್ಯಾಹ್ನ ೧ಗಂಟೆವರೆಗೆ ಮಾತ್ರ ವ್ಯವಹಾರ ನಡೆಸಲು ಅನುಮತಿ ನೀಡಿದೆ. ಪಟ್ಟಣದಲ್ಲಿ ಬಂದ್ ಆಗಿದ್ದ ಚಿಕನ್ ಮತ್ತು ಮಟನ್ ಅಂಗಡಿಗಳು, ಬೇಕರಿಗಳು, ಬಟ್ಟೆ, ರೆಡಿಮೇಡ್ ಅಂಗಡಿಗಳು, ಹಾರ್ಡವೇರ್ ಮತ್ತು ಎಲೆಕ್ಟ್ರಿಕ್ ಅಂಗಡಿಗಳು ಮೇ.೫ರಿಂದ ಮತ್ತೆ ಆರಂಭಗೊAಡಿದ್ದು ನಾಟಿ ಮಟನ್ ಪ್ರತೀ ಒಂದು ಕೆಜಿಗೆ ೫೯೯ರೂ ನಿಗಧಿಯಾಗಿದ್ದು ಉಂಡೆ ಕೋಳಿಗಳ ಮಾರಾಟಕ್ಕೆ ಮಾತ್ರ ಪುರಸಭೆ ಅನುಮತಿ ನೀಡಿದೆ. ಮಾಸ್ಕ್ ಇಲ್ಲದೇ ಪಟ್ಟಣದಲ್ಲಿ ಸಂಚರಿಸಿದರೆ ೨೦೦ರೂ ಸ್ಥಳದಲ್ಲೇ ದಂಡಹಾಕಲು ನಿರ್ಧರಿಸಿದೆ. ಶೀಳನೆರೆ ಹೋಬಳಿಯ ರಾಜಘಟ್ಟ ಮತ್ತು ಸಂತೇಬಾಚಹಳ್ಳಿ ಹೋಬಳಿಯ ಜಾಗಿನಕೆರೆ ಗ್ರಾಮದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬಿಗಿಯಾದ ಕ್ರಮಗಳ ಅನುಷ್ಠಾನಕ್ಕೆ ಮುಂದಾಗಿದೆ. ರಾಜಘಟ್ಟ ಮತ್ತು ಜಾಗಿನಕೆರೆ ಗ್ರಾಮಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಿರುವ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ತಂಡದವರು ಗಸ್ತು ತಿರುಗುತ್ತಿದ್ದಾರೆ.
ಪಟ್ಟಣ ಸೇರಿದಂತೆ ತಾಲ್ಲೂಕಿನ ಮಧ್ಯದಂಗಡಿಗಳಲ್ಲಿ ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ಹಣಕ್ಕೆ ಒತ್ತಾಯಿಸಿದರೆ ತಹಶೀಲ್ದಾರ್ ಅವರಿಗೆ ದೂರು ನೀಡಬೇಕು.. ಹೆಚ್ಚು ಹಣಕ್ಕೆ ಒತ್ತಾಯಿಸಿದರೆ ಬಿಲ್ ಪಡೆದುಕೊಳ್ಳಲು ಸೂಚಿಸಿದೆ.
ತಾಲ್ಲೂಕಿನ ಗ್ರಾಮಗಳಿಗೆ ಮುಂಬೈ ಸೇರಿದಂತೆ ಹೊರ ರಾಜ್ಯಗಳಿಂದ ಅಪರಿಚಿತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಮಾಹಿತಿ ಇದ್ದು ಗ್ರಾಮಕ್ಕೆ ಯಾರೇ ಹೊಸಬರು ಆಗಮಿಸಿದರೆ ಪೋಲಿಸರು ಸೇರಿದಂತೆ ಸ್ಥಳೀಯ ಆಶಾ ಕಾರ್ಯಕರ್ತರು ಇಲ್ಲವೇ ವೈದ್ಯರ ಗಮನಕ್ಕೆ ತರುವಂತೆ ತಹಶೀಲ್ದಾರ್ ಶಿವಮೂರ್ತಿ ಮನವಿ ಮಾಡಿದ್ದಾರೆ.
ಕೊರೋನಾ ಲಾಕ್ ಡೌನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುದರ ಜೊತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮನೆಯಿಂದ ಅಗತ್ಯ ಕೆಲಸಗಳಿಗೆ ಹೊರ ಬಂದಾಗ ಮಾಸ್ಕ್ ಧರಿಸಬೇಕು. ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ಮಟ್ಟಹಾಕುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ, ಗ್ರಾಮಾಂತರ ಠಾಣೆ ಸಬ್ ಇನ್ಸ್ ಪೆಕ್ಟರ್ ಡಿ.ಲಕ್ಷ್ಮಣ್, ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: