December 22, 2024

Bhavana Tv

Its Your Channel

ಕಳಪೆ ಗುಣಮಟ್ಟದ ಮಾಂಸ ಮಾರಾಟ ಮಾಂಸದAಗಡಿಗಳ ಮೇಲೆ ಅಧಿಕಾರಿಗಳ ದಾಳಿ.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯ ತಾಲ್ಲೂಕ ಆಡಳಿತವು ಕಳೆದ ೪೫ ದಿನಗಳಿಂದ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದು. ಮಾಂಸದAಗಡಿಗಳಿಗೆ ವಾರದಲ್ಲಿ ಮೂರು ದಿನಗಳ ಕಾಲ ತೆರೆದು ಮಾಂಸದ ಮಾರಾಟಕ್ಕೆ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿಕೊಂಡು ಸ್ವಚ್ಛತೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ಜಾಗೃತಿ ಮೂಡಿಸಲು ತೆರಳಿ ಪರಿಶೀಲನೆ ನಡೆಸಿದಾಗ ನಾಲ್ಕೈದು ದಿನಗಳ ಹಿಂದೆ ಕತ್ತರಿಸಿ ಫ್ರಿಡ್ಜಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ಕೊಳೆತ ಸ್ಥಿತಿಯಲ್ಲಿದ್ದ ಹಳೆಯ ಮಾಂಸವು ಕಂಡು ಬಂತು ಕೂಡಲೇ ಮಾಂಸದAಗಡಿಯ ಮಾಲೀಕ ನೂರ್ ಅಹಮದ್ ಅವರಿಗೆ ನೋಟೀಸ್ ನೀಡಿದ ಮುಖ್ಯಾಧಿಕಾರಿ ಸತೀಶ್ ಅಂಗಡಿಗೆ ಬೀಗ ಹಾಕಿಸಿದರು…ಮಾಂಸದAಗಡಿಯ ಮೇಲೆ ನಡೆದ ದಾಳಿಯಲ್ಲಿ ಪುರಸಭೆಯ ಪರಿಸರ ಎಂಜಿನಿಯರ್ ರಕ್ಷಿತ್ ಗೌಡ, ಆರೋಗ್ಯ ಪರಿವೀಕ್ಷಕರಾದ ಅಶೋಕ್, ನರಸಿಂಹಶೆಟ್ಟಿ ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು….

error: