March 21, 2023

Bhavana Tv

Its Your Channel

ನಾಗಮಂಗಲ ಬೆಳ್ಳೂರು ಕ್ರಾಸ್ ಗಡಿಯಲ್ಲಿ ಪೊಲೀಸರ ಹದ್ದಿನ ಕಣ್ಣು.

ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಸುತ್ತಮುತ್ತ ಕೊರೊನಾ ಸೋಂಕು ಹರಡದಂತೆ ಹಾಗೂ ವಲಸಿಗರ ತಡೆಗೆ ಮುಂಜಾಗೃತವಾಗಿ ತಾಲ್ಲೂಕು ಆಡಳಿತ ಆದೇಶದ ಮೇರೆಗೆ ಬೆಳ್ಳೂರು ಠಾಣೆ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದು.ಬೆಳ್ಳೂರು ಹೋಬಳಿಯ ನೆಲ್ಲಿಗೆರೆ ಹಾಗೂ ಹೊಸಮನೆ ಗೇಟಿನ ಬಳಿ ನಾಗಮಂಗಲ ತಾಲ್ಲೂಕಿಗೆ ಬರುವ ಪ್ರದೇಶವಾಗಿರುವುದರಿಂದ ಚೆಕ್ಪೋಸ್ಟ್ ನಿರ್ಮಿಸಿ ಅಂತರ್ ಜಿಲ್ಲೆಯಿಂದ ಬರುವ ಎಲ್ಲಾ ವಾಹನಗಳನ್ನು ಹಾಗೂ ಪ್ರಯಾಣಿಕರನ್ನು ತಪ್ಪದೆ ತಪಾಸಣೆ ಮಾಡಿಸುತ್ತಾ ಬೆಳ್ಳೂರು ಠಾಣಾ ಪೊಲೀಸ್ ಸಿಬ್ಬಂದಿಗಳು ಎಚ್ಚರಿಕೆ ವಹಿಸಿದ್ದಾರೆ. ಈಗಾಗಲೇ ಮುಂಬೈಯಿAದ ನಿಂದಾ ತಾಲೂಕಿಗೆ ವಾಪಸಾಗುತ್ತಿರುವ ವಲಸಿಗರಿಂದ ಕೊರೊನಾ ಸೋಂಕು ಹರಡುತ್ತಿರುವಷ ಕುರಿತು ಜನತೆ ಆತಂಕದಲ್ಲಿ ಇರುವುದರಿಂದ. ಮಂಡ್ಯ ಜಿಲ್ಲೆಯ ಗಡಿ ಭಾಗವಾಗಿರುವುದರಿಂದ ಹಾಗೂ ಬೆಂಗಳೂರು ನಿಂದ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ. ಬೆಳ್ಳೂರು ಹೋಬಳಿಯ. ಬೆಳ್ಳೂರು ಠಾಣೆ ಪೊಲೀಸರಿಂದ ತೀವ್ರ ತಪಾಸಣೆಯಲ್ಲಿ ತೊಡಗಿದ್ದಾರೆ

About Post Author

error: