December 22, 2024

Bhavana Tv

Its Your Channel

ಆರೋಗ್ಯ ಇಲಾಖೆಯ ಅಧಿಕಾರಿಗಳು ನಡೆಸುವ ಸರ್ವೆಗೆ ಸಹಕರಿಸಿ: ಸಮಾಜಸೇವಕ ಭಾರತೀಪುರ ಪುಟ್ಟಣ್ಣ.

ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಭಾರತೀಪುರ ಗ್ರಾಮದಲ್ಲಿ ಮುಂಬೈ ಸೇರಿದಂತೆ ಹೊರ ರಾಜ್ಯಗಳು ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿರುವ ವ್ಯಕ್ತಿಗಳ ಪತ್ತೆ ಹಾಗೂ ಸರ್ವೇ ಕಾರ್ಯಕ್ಕೆ ಸಮಾಜಸೇವಕ ಭಾರತೀಪುರ ಪುಟ್ಟಣ್ಣ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.ಗ್ರಾಮಕ್ಕೆ ಅಪರಿಚಿತ ಹಾಗೂ ಒಳ ನುಸುಳಿರುವ ಆಗಂತುಕ ವ್ಯಕ್ತಿಗಳ ಸರ್ವೇ ಕಾರ್ಯಕ್ಕೆ ಆಗಮಿಸಿದ ಶಿಕ್ಷಕರಿಗೆ ಮಾಸ್ಕ್ ಗಳು ಹಾಗೂ ಸ್ಯಾನಿಟೈಸರ್ ವಿತರಿಸಿ ಸ್ವಾಗತಿಸಿದ ಪುಟ್ಟಣ್ಣ ಗ್ರಾಮಸ್ಥರು ಕಡ್ಡಾಯವಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕೊರೋನಾ ನಿಯಂತ್ರಣಕ್ಕೆ ಮುಂದಾಗಬೇಕು..ಮುAಬೈ ಸೇರಿದಂತೆ ಹೊರ ರಾಜ್ಯಗಳಿಂದ ಗ್ರಾಮಕ್ಕೆ ಅಕ್ರಮವಾಗಿ ಬಂದಿರುವ ವ್ಯಕ್ತಿಗಳಿಗೆ ಸರ್ವೇ ಕಾರ್ಯಮಾಡಲು ಆಗಮಿಸಿರುವ ಶಿಕ್ಷಕರಿಗೆ ಇಲ್ಲವೇ ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ನೀಡಬೇಕು ಎಂದು ಪುಟ್ಟಣ್ಣ ಕೈಮುಗಿದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಭಾರತೀಪುರ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

error: