October 3, 2024

Bhavana Tv

Its Your Channel

ವಿಮಾ ಪಾವತಿಸಲು ಬರುವ ಗ್ರಾಹಕರಿಗೂ ಕರೋನಾ ಟೆಸ್ಟ.

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ಭಾರತೀಯ ಜೀವವಿಮಾ ನಿಗಮದ ಪ್ರಾದೇಶಿಕ ಕಛೇರಿಗೆ ವಿಮಾ ಕಂತಿನ ಹಣವನ್ನು ಪಾವತಿಸಲು ಆಗಮಿಸಿದ್ದ ಪಾಲಿಸಿದಾರರಿಗೆ ಕೊರೋನಾ ಪರೀಕ್ಷಾ ಕಾರ್ಯಕ್ಕೆ ಶಾಖೆಯ ವ್ಯವಸ್ಥಾಪಕರಾದ ಶ್ರೀಮಾನ್ ಪಾಂಡುರoಗಪೈ ಅವರು ಸ್ವಯಂ ಕೊರೋನಾ ಪರೀಕ್ಷೆಗೆ ಒಳಗಾಗುವ ಮೂಲಕ ಚಾಲನೆ ನೀಡಿದರು.
ವಿಮಾ ಕಂತಿನ ಹಣ ಪಾವತಿಸಲು ಸರತಿಯ ಸಾಲಿನಲ್ಲಿ ನಿಂತಿದ್ದ ಪಾಲಿಸುದಾರರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ಕಡ್ಡಾಯವಾಗಿ ಮಾಸ್ಕುಗಳನ್ನು ಧರಿಸುವ ಬಗ್ಗೆ ಟೌನ್ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಪ್ರೊಬೆಷನರಿ ಪಿ.ಎಸ್.ಐ ಹೆಚ್.ಕೆ. ನಿಖಿತಾ ಅರಿವಿನ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಕೃಷ್ಣರಾಜಪೇಟೆ ಶಾಖೆಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿಗಳಾದ ಯತಿರಾಜು, ಪುಷ್ಪಾ, ಹಿರಿಯ ಜೀವವಿಮಾ ಪ್ರತಿನಿಧಿಗಳಾದ ಕುಪ್ಪಹಳ್ಳಿ ಸುಬ್ರಹ್ಮಣ್ಯ, ಕೆ.ಎಸ್.ಸುರೇಶ್ ಕುಮಾರ್, ಮರುವನಹಳ್ಳಿ ವಿಶ್ವನಾಥ್, ಆದಿಹಳ್ಳಿ ಮೀನಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

error: